ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 10,211 ಕೋಟಿ ರೂ. ವೆಚ್ಚದಲ್ಲಿ ಅಣೆಕಟ್ಟು ಪುನಶ್ಚೇತನ ಮತ್ತು ಸುಧಾರಣಾ ಕಾರ್ಯಕ್ರಮದ (ಡಿಆರ್ಐಪಿ) ಎರಡನೇ ಮತ್ತು ಮೂರನೇ ಹಂತಕ್ಕೆ ಅನುಮೋದನೆ ನೀಡಿದೆ ಎಂದು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಿಳಿಸಿದ್ದಾರೆ.
ಒಟ್ಟು ಅನುಷ್ಠಾನದ ಅವಧಿ ಪೂರ್ಣಗೊಳ್ಳಲು 10 ವರ್ಷ ತೆಗೆದುಕೊಂಡು ಈ ಕಾರ್ಯಕ್ರಮ ಎರಡು ವರ್ಷಗಳ ಹೆಚ್ಚುವರಿಯಾಗಿ ನಾಲ್ಕು ವರ್ಷಗಳ ಎರಡು ಹಂತಗಳಲ್ಲಿ ಉದ್ದೇಶಿತ ಯೋಜನೆ ಜಾರಿಗೆ ತರಲಾಗುವುದು ಎಂದು ಹೇಳಿದರು.
ಒಟ್ಟಾರೆ 5,034 ಅಣೆಕಟ್ಟುಗಳಿದ್ದು, ಇದರಲ್ಲಿ 411 ಅಣೆಕಟ್ಟುಗಳು ನಿರ್ಮಾಣ ಹಂತದಲ್ಲಿವೆ. ಅಮೆರಿಕ ಮತ್ತು ಚೀನಾದ ಬಳಿಕ ಭಾರತ ಮೂರನೇ ಅತಿದೊಡ್ಡ ದೇಶವಾಗಿದೆ.
ದೇಶದ ಎಂಬತ್ತು ಪ್ರತಿಶತದಷ್ಟು ಅಣೆಕಟ್ಟುಗಳು 25 ವರ್ಷ ಹಳೆಯದಾಗಿವೆ. ಈ ಕಾರ್ಯಕ್ರಮದೊಂದಿಗೆ ಅಣೆಕಟ್ಟುಗಳ ಒಟ್ಟಾರೆ ಸುರಕ್ಷತೆ ಮತ್ತು ನೀರಿನ ಸಂಗ್ರಹ ಸಾಮರ್ಥ್ಯ ಸುಧಾರಿಸಲಿದೆ ಎಂದು ಶೇಖಾವತ್ ತಿಳಿಸಿದರು.
ಬಹುಪಕ್ಷೀಯ ಸಾಲ ನೀಡುವ ಸಂಸ್ಥೆಗಳಾದ ವಿಶ್ವಬ್ಯಾಂಕ್ ಮತ್ತು ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇಂಪ್ರೂವ್ಮೆಂಟ್ ಬ್ಯಾಂಕ್ (ಎಐಐಬಿ) ಮತ್ತು 19 ರಾಜ್ಯಗಳು ಮತ್ತು 2 ಕೇಂದ್ರ ಸಂಸ್ಥೆಗಳು ಯೋಜನೆ ಎರಡನೇ ಮತ್ತು ಮೂರನೇ ಹಂತದಲ್ಲಿ ಭಾಗಿಯಾಗಲಿವೆ ಎಂದು ಸಚಿವರು ಹೇಳಿದರು.
ಕಾರ್ಯಕ್ರಮದ ಮೊದಲ ಹಂತದ ಅಡಿಯಲ್ಲಿ 200ಕ್ಕೂ ಹೆಚ್ಚು ಅಣೆಕಟ್ಟುಗಳ ಪುನಶ್ಚೇತನ ಕಾರ್ಯಗಳು ಈಗಾಗಲೇ ಪೂರ್ಣಗೊಂಡಿವೆ. ಅಣೆಕಟ್ಟುಗಳಲ್ಲಿ ಪ್ರವಾಸೋದ್ಯಮ, ನೀರು ಆಧಾರಿತ ಪ್ರವಾಸೋದ್ಯಮ ಮತ್ತು ಮೀನುಗಾರಿಕೆ ಸಂಬಂಧಿತ ಯೋಜನೆ ಮತ್ತು ಮೂಲಸೌಕರ್ಯಗಳ ಸೃಷ್ಟಿಗೆ ಒಟ್ಟು ವಿನಿಯೋಗದ ಶೇ 4ರಷ್ಟು ಹಣ ಖರ್ಚು ಮಾಡಲಾಗುವುದು ಎಂದು ವಿವರಿಸಿದರು.