ಮುಂಬೈ:ಕೋವಿಡ್ ಅಪಾಯದ ಹಿನ್ನೆಲೆಯಲ್ಲಿ ಬ್ಯಾಂಕುಗಳು ಸಾಲ ನೀಡಲು ಹಿಂಜರಿದರೆ ಅವರು ಲಾಭಗಳಿಸಲು ಸಾಧ್ಯವಿಲ್ಲ. ಈ ನೀತಿಯನ್ನು ಮುಂದುವರಿಸಿದ್ದೇ ಅದು ಭವಿಷ್ಯದಲ್ಲಿ ಸ್ವಯಂಕೃತ ಸೋಲು ಆಗಬಹುದು ಎಂದು ದೇಶದ ಕೇಂದ್ರ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಬ್ಯಾಂಕುಗಳು ಸಾಲ ಕೊಡಲು ಹಿಂಜರಿದರೆ, ಲಾಭ ಗಳಿಕೆ ಸಾಧ್ಯವಾಗದು: RBI ಗವರ್ನರ್ - ಭಾರತದ ಆರ್ಥಿಕತೆ
ಕೊರೊನಾ ಬಿಕ್ಕಟ್ಟಿನ ಮಧ್ಯೆ ಬ್ಯಾಂಕುಗಳು ಸಾಲ ನೀಡಲು ಹಿಂಜರಿಯುವುದರ ಬದಲು ಅಪಾಯವನ್ನು ನಿರ್ವಹಣೆ ಮಾಡುವ ಮತ್ತು ಆಡಳಿತಾತ್ಮಕ ವಿಚಾರಗಳ ಕಡೆ ಹೆಚ್ಚು ಗಮನ ಹರಿಸುವುದು ಸೂಕ್ತ- ಶಕ್ತಿಕಾಂತ್ ದಾಸ್, ಆರ್‌ಬಿಐ ಗವರ್ನರ್
ಬಿಸ್ನೆಸ್ ಸ್ಟ್ಯಾಂಡರ್ಡ್ ಆಯೋಜಿಸಿದ ವೆಬ್‌ನಾರ್ ಕಾರ್ಯಕ್ರಮದಲ್ಲಿ ಮಾತನಾಡಿದ ದಾಸ್, ಸಾಲ ನೀಡಲು ಹಿಂಜರಿಯುವ ಬದಲು, ಬ್ಯಾಂಕ್ಗಳು ತಮ್ಮ ಅಪಾಯದ ನಿರ್ವಹಣೆ ಮತ್ತು ಆಡಳಿತದ ಚೌಕಟ್ಟುಗಳನ್ನು ಸುಧಾರಿಸಲು ಮುಂದಾಗಬೇಕು. ತಮ್ಮದೇ ರೀತಿಯ ಸಾಕಷ್ಟು ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಬೇಕು ಎಂದು ಸಲಹೆ ನೀಡಿದರು.
ಬ್ಯಾಂಕ್ ವಂಚನೆಗಳು ನಡೆಯದಂತೆ ತಡೆಯುವ ಸಾಮರ್ಥ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಬ್ಯಾಂಕುಗಳ ಗಮನ ಹರಿಸಬೇಕು. ಅಪಾಯದ ಚೌಕಟ್ಟುಗಳ ದುರ್ಬಲತೆಗಳನ್ನು ಪತ್ತೆ ಮಾಡುವಂತಹ ಸಾಧ್ಯತೆಗಳೂ ಸಾಕಷ್ಟಿವೆ. ದೇಶದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯು ಉತ್ತಮವಾಗಿ ಹಾಗೂ ಸ್ಥಿರವಾಗಿ ಮುಂದುವರಿಯುತ್ತಿದೆ. ಸಾಲದಾತರು(ಬ್ಯಾಂಕುಗಳು) ಮುಂದಿನ ದಿನಗಳಲ್ಲಿ ಬೆಳವಣಿಗೆಯ ಹೊಸ ಮಾದರಿಗಳನ್ನು ವಿಕಸಿತ ಗೊಳಿಸಬೇಕು ಅನ್ನೋದು ದಾಸ್ ಅಭಿಪ್ರಾಯ.