ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಮತ್ತು ಸೌದಿ ಅರಮ್ಕೊ (Saudi Aramco) ಆರ್‌ಐಎಲ್‌ನ 'ಒ2ಸಿ' ಯಲ್ಲಿನ (Oil 2 Chemical) ಉದ್ದೇಶಿತ ಹೂಡಿಕೆಯನ್ನು ಮರು ಮೌಲ್ಯಮಾಪನ ಮಾಡಲು ಪರಸ್ಪರ ಒಪ್ಪಿಕೊಂಡಿವೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಹೇಳಿರುವ ಪ್ರಕಾರ, ತೈಲ-ರಾಸಾಯನಿಕಗಳ (Oil 2 Chemical) ವ್ಯವಹಾರವನ್ನು ಪ್ರತ್ಯೇಕ ಘಟಕವನ್ನಾಗಿ ಮಾಡುವ ಸಲುವಾಗಿ ಅಗತ್ಯವಾದ ಅನುಮೋದನೆಗಳನ್ನು ಪಡೆಯಲು ಸಲ್ಲಿಸಿದ್ದ ಅರ್ಜಿ ಹಿಂತೆಗೆದುಕೊಳ್ಳುತ್ತಿದೆ. ರಿಲಯನ್ಸ್ನಿಂದ O2C ವ್ಯವಹಾರವನ್ನು ಪ್ರತ್ಯೇಕಿಸಲು NCLTಯೊಂದಿಗೆ ಸದ್ಯಕ್ಕೆ ಅರ್ಜಿಯನ್ನು ಹಿಂತೆಗೆದುಕೊಳ್ಳಲಾಗುತ್ತಿದೆ ಎಂದು ಕಂಪನಿಯು ನವೆಂಬರ್ 19ರಂದು ವಿನಿಮಯ ಫೈಲಿಂಗ್‌ನಲ್ಲಿ ತಿಳಿಸಿದೆ.
ಬದಲಾದ ಸನ್ನಿವೇಶದ ಹಿನ್ನೆಲೆ O2C ವ್ಯವಹಾರದಲ್ಲಿನ ಉದ್ದೇಶಿತ ಹೂಡಿಕೆ ಮರು ಮೌಲ್ಯಮಾಪನ ಮಾಡುವುದು ಎರಡೂ ಪಾರ್ಟಿಗಳಿಗೆ ಪ್ರಯೋಜನಕಾರಿಯಾಗಿದೆ ಎಂದು ಸೌದಿ ಅರಾಮ್ಕೊದೊಂದಿಗೆ ಪರಸ್ಪರ ನಿರ್ಧರಿಸಿರುವುದಾಗಿ ರಿಲಯನ್ಸ್ ಹೇಳಿದೆ.
O2C ವ್ಯವಹಾರದಿಂದ (Oil 2 Chemical) ಹೊರಗುಳಿಯುವುದರಿಂದ ಸೌದಿ ಅರಾಮ್ಕೊಗೆ ಹೊಸ ಕಂಪನಿಯಲ್ಲಿ ಪಾಲು ಮಾರಾಟ ಮಾಡಲು ದಾರಿ ಮಾಡಿಕೊಟ್ಟಿದೆ. ಭಾರತದಲ್ಲಿ ಖಾಸಗಿ ವಲಯದಲ್ಲಿ ಹೂಡಿಕೆಗಾಗಿ ಸೌದಿ ಅರಾಮ್ಕೊದ ಆದ್ಯತೆಯ ಪಾಲುದಾರನಾಗಿ ಮುಂದುವರಿಯುವುದಾಗಿ ರಿಲಯನ್ಸ್ ಹೇಳಿದೆ.