ನವದೆಹಲಿ:ಖಾಸಗಿ ಉದ್ಯಮಗಳ ಅನಿಮಲ್ ಸ್ಪಿರಿಟ್ಸ್ (ಪ್ರಾಣಿ ಸ್ಪೂರ್ತಿ) ಆರ್ಥಿಕ ಪುನರುಜ್ಜೀವನಕ್ಕೆ ದೇಶವು ಸಾಕ್ಷಿಯಾಗಲಿದೆ ಎಂದ ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣಿಯನ್, ಆರ್ಥಿಕತೆಯು ಏಪ್ರಿಲ್‌ನಿಂದ ಪ್ರಾರಂಭವಾಗುವ ಮುಂದಿನ ಹಣಕಾಸು ವರ್ಷದಲ್ಲಿ ಶೇ 11ರಷ್ಟು ಬೆಳವಣಿಗೆ ಹೊಂದಲಿದೆ ಎಂದು ಆರ್ಥಿಕ ಸಮೀಕ್ಷೆಯ ಅಂದಾಜು ಉಲ್ಲೇಖಿಸಿದರು.
ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಭಾವದಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 7.7ರಷ್ಟು ಸಂಕೋಚನ ಬೆಳವಣಿಗೆಯ ದರದ ಬಳಿಕ ಆ ನಂತರದ ವರ್ಷದಲ್ಲಿ ತೀವ್ರವಾಗಿ ಏರಿಕೆಯಾಗಲಿದೆ ಎಂದು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆ 2020-21 ನಿರೀಕ್ಷಿಸಲಾಗಿದೆ.
ಖಾಸಗಿ ಹೂಡಿಕೆಯಲ್ಲಿ 'ಅನಿಮಲ್ ಸ್ಪಿರಿಟ್ಸ್ ಪುನರುಜ್ಜೀವನದ ಪ್ರಶ್ನೆಗೆ ಉತ್ತರಿಸಿದ ಸುಬ್ರಮಣಿಯನ್, ಮುಂದಿನ ವರ್ಷ ಶೇ 11ರಷ್ಟು ಬೆಳವಣಿಗೆಯ ದರ ನಿರೀಕ್ಷಿಸಲಾಗಿದೆ ಎಂದು ನಾನು ಭಾವಿಸುತ್ತೇನೆ. ಅವರೆಲ್ಲರ ಅವಕಾಶಗಳನ್ನು ನೋಡಿದಾಗ ಖಾಸಗಿ ವಲಯವು ಮುಂದಕ್ಕೆ ಚಲಿಸಲಿದೆ ಎಂದರು.
'ಅನಿಮಲ್ ಸ್ಪಿರಿಟ್ಸ್' ಎಂಬ ಅಭಿವ್ಯಕ್ತಿಯನ್ನು ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೀನ್ಸ್ ಅವರು ಹೂಡಿಕೆಯಲ್ಲಿ ಹಣತೊಡಗಿಸುವವರ ವಿಶ್ವಾಸ ಸಂಕೇತವಾಗಿ ಉಲ್ಲೇಖಿಸಿದ್ದಾರೆ.
ಆರ್ಥಿಕತೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವಾಗ, ಖಾಸಗಿ ವಲಯವೂ ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸರ್ಕಾರವು ಹಿಂದೆ ಸರಿದು ತನ್ನ ಹಣಕಾಸಿನ ಸ್ಥಿತಿಯನ್ನು ಕ್ರೋಢೀಕರಿಸುವ ಸಮಯ ಬಂದಿದೆ.
ಆರ್ಥಿಕತೆ ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ, ಅದು ತೊಟ್ಟಿಯಾಗಿ ಇರಲಿದೆ. ಆದ್ದರಿಂದಾಗಿ ಖಾಸಗಿ ವಲಯವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಬಳಕೆ, ಹೂಡಿಕೆ ಇತ್ಯಾದಿಗಳು ಖಾಲಿಯಾಗಿ ಉಳಿದಿವೆ. ಸರ್ಕಾರವು ಖಾಲಿ ತೊಟ್ಟಿಯಲ್ಲಿ ಚಲಿಸುತ್ತದೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಇದನ್ನೂ ಓದಿ: ವಿವಾದಿತ 3 ಕೃಷಿ ಕಾಯ್ದೆ ಬಳಿಕ ಬಜೆಟ್ ಸೆಷನ್ನಲ್ಲಿ 20+ ಮಸೂದೆಗಳ ಮಂಡನೆಗೆ ಮೋದಿ ಸರ್ಕಾರ ಸಜ್ಜು!
ಬಹುತೇಕ ದೇಶೀಯ ಕಂಪನಿಗಳು ಹೂಡಿಕೆ ಮಾಡುವುದರಿಂದ ಹಿಂದೆ ಸರಿಯುತ್ತಿವೆ. ಆದರೆ, ಕಳೆದ ಕೆಲವು ವರ್ಷಗಳಿಂದ ತಮ್ಮ ಖಾತೆಯನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ನಿರತವಾಗಿವೆ. ಇದರ ಪರಿಣಾಮವಾಗಿ, ಬಂಡವಾಳ ರಚನೆಯ ಜವಾಬ್ದಾರಿ ಹೆಚ್ಚಾಗಿ ಸರ್ಕಾರ ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಹೆಗಲ ಮೇಲೆ ಬಿದ್ದಿದೆ. ಸಾಂಕ್ರಾಮಿಕ ಸಮಯದಲ್ಲಿ ಪಿಎಸ್ಯುಗಳು ಬಂಡವಾಳ ವೆಚ್ಚವನ್ನು (ಕ್ಯಾಪೆಕ್ಸ್) ಕೈಗೆತ್ತಿಕೊಂಡಿವೆ.
ಖಾಸಗಿ ವಲಯದಿಂದ ಹೊಸ ಹೂಡಿಕೆಗೆ ಉತ್ತೇಜನ ನೀಡಲು, ಸರ್ಕಾರವು 2019ರ ಸೆಪ್ಟೆಂಬರ್‌ನಲ್ಲಿ ಕಾರ್ಪೊರೇಟ್ ತೆರಿಗೆಯನ್ನು ವಿಶ್ವದ ಅತ್ಯಂತ ಕೆಳಮಟ್ಟಕ್ಕೆ ಇಳಿಸಿತ್ತು.