ಕರ್ನಾಟಕ

karnataka

ETV Bharat / business

GST ವಂಚಕರೇ ಎಚ್ಚರ..! ದೇಶದ ಎಲ್ಲ ಐಟಿ ಆಯುಕ್ತರು ಒಗ್ಗೂಡಿ ಮಾಸ್ಟರ್​ ಪ್ಲಾನ್​ ತಯಾರಿ

ಜನವರಿ 7ರಂದು ದಿನವಿಡೀ ತೆರಿಗೆ ವಂಚನೆಯಂತಹ ಸೋರಿಕೆ ತಡೆಯಲು ಕಂದಾಯ ಇಲಾಖೆಯ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಅವರು ವಿವಿಧ ರಾಜ್ಯಗಳ ತೆರಿಗೆ ಆಯುಕ್ತರೊಂದಿಗೆ ಸಭೆ ನಡೆಸಲಿದ್ದಾರೆ. ವಂಚನೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಸಹ ತೆಗೆದುಕೊಳ್ಳಲಿದ್ದಾರೆ. ರಾಜ್ಯಗಳ ತೆರಿಗೆ ಆಯುಕ್ತರು ಮತ್ತು ಕೇಂದ್ರ ತೆರಿಗೆ ಮುಖ್ಯ ಆಯುಕ್ತರೊಂದಿಗೆ ಲೋಪದೋಷಗಳನ್ನು ಸರಿಪಡಿಸುವ ಮೂಲಕ ತೆರಿಗೆ ಸಂಗ್ರಹದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿದ್ದಾರೆ ಎಂದು ತಿಳಿದುಬಂದಿದೆ.

GST
ಜಿಎಸ್​ಟಿ

By

Published : Jan 2, 2020, 11:22 PM IST

ನವದೆಹಲಿ: ಜಿಎಸ್‌ಟಿ ವ್ಯವಸ್ಥೆಯನ್ನು ಸುಗಮಗೊಳಿಸುವ ಮತ್ತು ತೆರಿಗೆ ವಂಚನೆಯಂತಹ ಸೋರಿಕೆ ತಡೆಯಲು ಕಂದಾಯ ಇಲಾಖೆಯ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಅವರು ವಿವಿಧ ರಾಜ್ಯಗಳ ತೆರಿಗೆ ಆಯುಕ್ತರೊಂದಿಗೆ ಸಭೆ ನಡೆಸಲಿದ್ದಾರೆ.

ಜನವರಿ 7ರಂದು ದಿನವಿಡೀ ಸಭೆ ನಡೆಯಲಿದ್ದು, ತೆರಿಗೆ ವಂಚನೆಗಳನ್ನು ತಡೆಗಟ್ಟಲು ಸುದೀರ್ಘ ಚರ್ಚೆ ನಡೆಸಲಿದ್ದಾರೆ. ಇದೇ ವೇಳೆ ವಂಚನೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಸಹ ತೆಗೆದುಕೊಳ್ಳಲಿದ್ದಾರೆ. ರಾಜ್ಯಗಳ ತೆರಿಗೆ ಆಯುಕ್ತರು ಮತ್ತು ಕೇಂದ್ರ ತೆರಿಗೆ ಮುಖ್ಯ ಆಯುಕ್ತರೊಂದಿಗೆ ಲೋಪದೋಷಗಳನ್ನು ಸರಿಪಡಿಸುವ ಮೂಲಕ ತೆರಿಗೆ ಸಂಗ್ರಹದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿದ್ದಾರೆ ಎಂದು ತಿಳಿದುಬಂದಿದೆ.

ತೆರಿಗೆ ಆದಾಯ ವೃದ್ಧಿ, ವಂಚನೆ ಮತ್ತು ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳುವಿಕೆಯ ನಿಗ್ರಹ, ನಕಲಿ ಅಥವಾ ಬೃಹತ್ ಇನ್ಪುಟ್ ತೆರಿಗೆ ಕ್ರೆಡಿಟ್ ಹಕ್ಕುಗಳ ಪರಿಶೀಲನೆ, ವ್ಯವಹಾರಗಳ ಬ್ಯಾಂಕ್ ಖಾತೆಯ ವಿವರಗಳು ಮೂಲ ದಾಖಲಾತಿಗಳಿಗೆ ಅನುಗುಣವಾಗಿ ಮರುಪಾವತಿ ಆಗುತ್ತಿವೆಯಾ? ಇಲ್ಲವೇ? ಎಂಬುದರ ಬಗೆಯೂ ಚರ್ಚೆಗೆ ಬರಲಿವೆ ಎಂದು ಮೂಲಗಳು ತಿಳಿಸಿವೆ.

ಇ- ಇನ್​ವಾಯ್ಸಿ, ನೂತನ ರಿಟರ್ನ್ ಸಿಸ್ಟಮ್, ಫೀಡ್​ಬ್ಯಾಕ್​, ಫಾಸ್ಟಾಗ್‌ನೊಂದಿಗೆ ಸಂಪರ್ಕ ಕಲ್ಪಿಸುವ ಇ-ವೇ ಬಿಲ್, ಮರುಪಾವತಿಯ ಬಾಕಿ, ಜಿಎಸ್‌ಟಿಗೆ ಆಧಾರ್ ನೋಂದಣಿ ಜೋಡಣೆ, ಕ್ಯೂಆರ್ ಕೋಡ್ ನಂತಹ ಸುಧಾರಣಾ ಕ್ರಮಗಳು ಸಹ ಪ್ರಸ್ತಾಪ ಆಗಲಿವೆ.

ಈ ಸಭೆಯಲ್ಲಿ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಯ ಹಿರಿಯ ಅಧಿಕಾರಿಗಳು, ಕೇಂದ್ರೀಯ ನೇರ ತೆರಿಗೆ ಮಂಡಳಿ, ಹಣಕಾಸು ಗುಪ್ತಚರ ಘಟಕ (ಎಫ್‌ಐಯು), ಡೈರೆಕ್ಟರೇಟ್ ಜನರಲ್ ಆಫ್ ಅನಾಲಿಟಿಕ್ಸ್ ಮತ್ತು ರಿಸ್ಕ್ ಮ್ಯಾನೇಜ್‌ಮೆಂಟ್ ಮತ್ತು ಜಿಎಸ್‌ಟಿಎನ್ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ABOUT THE AUTHOR

...view details