ಕರ್ನಾಟಕ

karnataka

ETV Bharat / business

8 ತಿಂಗಳ ಗರಿಷ್ಠ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ: ಕಾದಿದೆ ಬೆಲೆ ಏರಿಕೆ ಬಿಸಿ

ಕೇಂದ್ರ ಅಂಕಿಅಂಶ ಕಚೇರಿ ಬಿಡುಗಡೆ ಮಾಡಿದ ಇತ್ತೀಚಿನ ಬೆಲೆ ದತ್ತಾಂಶವು, ಚಿಲ್ಲರೆ ಮಾರುಕಟ್ಟೆಯ ಅಂಗಡಿ ಅಂತ್ಯದ ಬೆಲೆ ಮಾಪನ ಬದಲಾವಣೆಯಲ್ಲಿ ಸಿಪಿಐ ಆಧಾರಿತ ಹಣದುಬ್ಬರವು ಆರ್‌ಬಿಐ ಇರಿಸಿಕೊಂಡಿರುವ ಶೇ 4ರಷ್ಟು ಗುರಿಯಲ್ಲಿ ಮುಂದುವರಿದಿದೆ.

By

Published : Jul 12, 2019, 7:18 PM IST

ಸಾಂದರ್ಭಿಕ ಚಿತ್ರ

ನವದೆಹಲಿ: ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರವು ಎಂಟು ತಿಂಗಳ ಗರಿಷ್ಠ ಮಟ್ಟಕ್ಕೆ (ಶೇ 3.18) ಏರಿಕೆಯಾಗಿದೆ ಎಂದು ಕೇಂದ್ರಿಯ ಸಾಂಖ್ಯಿಕ ಕಚೇರಿ (ಸಿಎಸ್​ಒ) ತಿಳಿಸಿದೆ.
ಮೇ ತಿಂಗಳಲ್ಲಿ ಶೇ 3.05ರಷ್ಟು ಇದ್ದ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 3.18ಕ್ಕೆ ತಲುಪಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಯ ಏರಿಳಿತ ಆಗುವುದರ ಜೊತೆಗೆ ಆಹಾರ ಧಾನ್ಯ, ಸರಕು ತಯಾರಿಕೆ ಉತ್ಪನ್ನಗಳ ಬೆಲೆಯಲ್ಲಿ ವ್ಯತ್ಯಾಸವಾಗಿದೆ.

ಕೇಂದ್ರ ಅಂಕಿಅಂಶ ಕಚೇರಿ ಬಿಡುಗಡೆ ಮಾಡಿದ ಇತ್ತೀಚಿನ ಬೆಲೆ ದತ್ತಾಂಶವು, ಚಿಲ್ಲರೆ ಮಾರುಕಟ್ಟೆಯ ಅಂಗಡಿ ಅಂತ್ಯದ ಬೆಲೆ ಮಾಪನ ಬದಲಾವಣೆಯಲ್ಲಿ ಸಿಪಿಐ ಆಧಾರಿತ ಹಣದುಬ್ಬರವು ಆರ್‌ಬಿಐ ಇರಿಸಿಕೊಂಡಿರುವ ಶೇ 4ರಷ್ಟು ಗುರಿಯಲ್ಲಿ ಮುಂದುವರಿದಿದೆ.

ಬಜೆಟ್‌ ಮಂಡನೆಯ ಬಳಿಕ ಹೊರಬಿದ್ದ ಸಿಪಿಐ ಹಣದುಬ್ಬರದಲ್ಲಿ ಆಹಾರ ಸಂಬಂಧಿತ ಬೆಲೆಗಳು ಮೇನಲ್ಲಿ ಶೇ 1.83ರಷ್ಟಿದ್ದರೇ ಜೂನ್‌ನಲ್ಲಿ ಶೇ 2.1ಕ್ಕೆ ಏರಿಕೆಯಾಗಿದೆ. ಧಾನ್ಯ ಮತ್ತು ಉತ್ಪನ್ನಗಳ ದರವು ಮೇನ ಶೇ 1.24ರಷ್ಟಿದ್ದದ್ದು, ಜೂನ್​ಗೆ ಶೇ 1.30ರಷ್ಟಾಗಿದೆ. ತರಕಾರಿಗಳ ಹಣದುಬ್ಬರವು ಜೂನ್‌ನಲ್ಲಿ ಶೇ 4.66 ರಷ್ಟಿದ್ದರೆ, ಮೇ ತಿಂಗಳಲ್ಲಿ ಶೇ 5.46 ರಷ್ಟಿದೆ.

For All Latest Updates

TAGGED:

ABOUT THE AUTHOR

...view details