ಕರ್ನಾಟಕ

karnataka

ETV Bharat / business

ಮಾರ್ಚ್​ ತಿಂಗಳ ಚಿಲ್ಲರೆ ಹಣದುಬ್ಬರ ಶೇ 5.9ಕ್ಕೆ ಇಳಿಕೆ - ಭಾರತದಲ್ಲಿ ಹಣದುಬ್ಬರ

ರಾಷ್ಟ್ರೀಯ ಸಾಂಖಿಕ್ಯ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಸಿಪಿಐ ಮಾಹಿತಿ ಅನ್ವಯ, ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು 2020ರ ಫೆಬ್ರವರಿಯಲ್ಲಿ ಶೇ 6.58ರಷ್ಟು ಮತ್ತು 2019ರ ಮಾರ್ಚ್​ನಲ್ಲಿ 2.86ರಷ್ಟಿತ್ತು. ಆಹಾರ ಪದಾರ್ಥ ವಿಭಾಗದಲ್ಲಿನ ಹಣದುಬ್ಬರವು 2020ರ ಮಾರ್ಚ್​ನಲ್ಲಿ ಶೇ 8.76ರಷ್ಟಿತ್ತು. ಹಿಂದಿನ ತಿಂಗಳಲ್ಲಿ ಇದು ಶೇ 10.81 ಮಟ್ಟದಲ್ಲಿತ್ತು.

Retail inflation
ಚಿಲ್ಲರೆ ಹಣದುಬ್ಬರ

By

Published : Apr 13, 2020, 11:28 PM IST

ನವದೆಹಲಿ: ಮಾರ್ಚ್​ ತಿಂಗಳ ಚಿಲ್ಲರೆ ಹಣದುಬ್ಬರವು ಈ ಹಿಂದಿನ ಮಾಸಿಕಕ್ಕೆ ಹೋಲಿಸಿದೆ ಶೇ 5.9ಕ್ಕೆ ಇಳಿಕೆಯಾಗಿದೆ.

ಮುಖ್ಯವಾಗಿ ಆಹಾರ ಬೆಲೆಗಳಲ್ಲಿನ ವ್ಯತ್ಯಾಸದ ಕಾರಣದಿಂದಾಗಿ ಈ ಬದಲಾವಣೆ ಆಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.

ರಾಷ್ಟ್ರೀಯ ಸಾಂಖಿಕ್ಯ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಸಿಪಿಐ ಮಾಹಿತಿ ಅನ್ವಯ, ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು 2020ರ ಫೆಬ್ರವರಿಯಲ್ಲಿ ಶೇ 6.58ರಷ್ಟು ಮತ್ತು 2019ರ ಮಾರ್ಚ್​ನಲ್ಲಿ 2.86ರಷ್ಟಿತ್ತು. ಆಹಾರ ಪದಾರ್ಥ ವಿಭಾಗದಲ್ಲಿನ ಹಣದುಬ್ಬರವು 2020ರ ಮಾರ್ಚ್​ನಲ್ಲಿ ಶೇ 8.76ರಷ್ಟಿತ್ತು. ಹಿಂದಿನ ತಿಂಗಳಲ್ಲಿ ಇದು ಶೇ 10.81 ಮಟ್ಟದಲ್ಲಿತ್ತು.

ಭಾರತೀಯ ರಿಸರ್ವ್ ಬ್ಯಾಂಕ್ ಮುಖ್ಯವಾಗಿ ಚಿಲ್ಲರೆ ಹಣದುಬ್ಬರದ ಆಧಾರದಲ್ಲಿ ಎರಡು ಮಾಸಿಕ ವಿತ್ತೀಯ ನೀತಿಯನ್ನು ನಿರ್ಧರಿಸುತ್ತದೆ. ಹಣದುಬ್ಬರವನ್ನು ಶೇಕಡಾ 4ರ ಮಟ್ಟದಲ್ಲಿ ಉಳಿಸಿಕೊಳ್ಳಲು ಸರ್ಕಾರ ಕೇಂದ್ರ ಬ್ಯಾಂಕ್‌ಗೆ ಆದೇಶಿಸಿದೆ.

ABOUT THE AUTHOR

...view details