ಕರ್ನಾಟಕ

karnataka

ETV Bharat / business

ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ 6.93ರಷ್ಟು ಏರಿಕೆ: ತಟ್ಟಲಿದೆ ಬೆಲೆ ಏರಿಕೆ ಬಿಸಿ - ಆಹಾರ ಹಣದುಬ್ಬರ

ಆಹಾರ ಬೆಲೆ ಹಣದುಬ್ಬರ, ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಅಂಕಿಅಂಶಗಳ ಪ್ರಕಾರ ಜುಲೈನಲ್ಲಿ ಶೇ 9.62ಕ್ಕೆ ಏರಿದೆ. ಜೂನ್‌ನಲ್ಲಿ ಚಿಲ್ಲರೆ ಹಣದುಬ್ಬರವು ಶೇ 6.23ರಷ್ಟಿದ್ದರೆ, ಆಹಾರ ಹಣದುಬ್ಬರವು ಶೇ 8.72ರಷ್ಟಿತ್ತು.

Retail inflation
ಚಿಲ್ಲರೆ ಹಣದುಬ್ಬರ

By

Published : Aug 13, 2020, 7:46 PM IST

ನವದೆಹಲಿ: ಆಹಾರ ಪದಾರ್ಥಗಳ ಹೆಚ್ಚಿನ ಬೆಲೆಗಳ ಕಾರಣದಿಂದಾಗಿ ಚಿಲ್ಲರೆ ಹಣದುಬ್ಬರವು ಜುಲೈ ಮಾಸಿಕದಲ್ಲಿ ಶೇ 6.93ಕ್ಕೆ ಏರಿದೆ ಎಂದು ಸರ್ಕಾರದ ಅಂಕಿ ಅಂಶಗಳು ಗುರುವಾರ ತಿಳಿಸಿವೆ.

ಆಹಾರ ಬೆಲೆ ಹಣದುಬ್ಬರ, ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಅಂಕಿ-ಅಂಶಗಳ ಪ್ರಕಾರ ಜುಲೈನಲ್ಲಿ ಶೇ 9.62ಕ್ಕೆ ಏರಿದೆ. ಜೂನ್‌ನಲ್ಲಿ ಚಿಲ್ಲರೆ ಹಣದುಬ್ಬರವು ಶೇ 6.23ರಷ್ಟಿದ್ದರೆ, ಆಹಾರ ಹಣದುಬ್ಬರವು ಶೇ 8.72ರಷ್ಟಿತ್ತು.

ಚಿಲ್ಲರೆ ಹಣದುಬ್ಬರವು ಸತತ ಎರಡನೇ ತಿಂಗಳು ಸಹ ಆರ್‌ಬಿಐನ ಆರಾಮ ಮಟ್ಟಕ್ಕಿಂತ ಹೆಚ್ಚಾಗಿದೆ. ಹಣದುಬ್ಬರವನ್ನು ಶೇ 4 (ಶೇ +, - 2ರಷ್ಟು) ಕಾಯ್ದಿಟ್ಟುಕೊಳ್ಳುವ ಉದ್ದೇಶದ ಬಗ್ಗೆ ಸರ್ಕಾರವು ಕೇಂದ್ರ ಬ್ಯಾಂಕ್‌ಗೆ ಆದೇಶಿಸಿತ್ತು.

ಜುಲೈ ತಿಂಗಳಲ್ಲಿ ನಿರೀಕ್ಷೆಗೂ ಮೀರಿದ ಹಣದುಬ್ಬರ ಪ್ರಮಾಣ ಹೆಚ್ಚಾಗಿದೆ ಎಂದು ಅಂದಾಜು ಮಾಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಶೇ 4 ರಿಂದ 6 ರಷ್ಟು ಅಂದಾಜು ಮಾಡಲಾಗಿತ್ತು. ಅಲ್ಲದೆ ಕಳೆದ ತಿಂಗಳು ಭಾರತೀಯ ರಿಸರ್ವ್ ಬ್ಯಾಂಕ್ ರಪೋ ದರ ಮತ್ತು ತನ್ನ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಅದರ ಹೊರತಾಗಿಯೂ ಜುಲೈ ತಿಂಗಳಲ್ಲಿ ಹಣದುಬ್ಬರ ಪ್ರಮಾಣ ಹೆಚ್ಚಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ನ ಗವರ್ನರ್ ಶಕ್ತಿಕಾಂತ ದಾಸ್ ಅವರು ಹಣದುಬ್ಬರ ಪ್ರಮಾಣ ಹೆಚ್ಚಾಗಲಿದೆ ಎಂದು ಮುಂಚೆಯೇ ಎಚ್ಚರಿಕೆ ನೀಡಿದ್ದರು. ಪ್ರಸ್ತುತ ಹಣಕಾಸು ವರ್ಷದ ಜುಲೈ- ಸೆಪ್ಟೆಂಬರ್ ತಿಂಗಳಲ್ಲಿ ಹಣ ದುಬ್ಬರ ಪ್ರಮಾಣ ಹೆಚ್ಚಾಗಲಿದೆ ಎಂದು ಹೇಳಿದ್ದರು.

ABOUT THE AUTHOR

...view details