ನೂತನವಾಗಿ ಅಳವಡಿಸಲಾದ ಮರುಬಳಕೆ ಇಂಧನ ಘಟಕಗಳು ಸಾಂಪ್ರದಾಯಿಕ ಪಳೆಯುಳಿಕೆ ಇಂಧನಗಳಿಗಿಂತ ಅತಿ ಕಡಿಮೆ ದರದಲ್ಲಿ ಇಂಧನ ಉತ್ಪಾದಿಸುವ ಕ್ಷಮತೆಯನ್ನು ಹೊಂದಿವೆ. ಅಂತಾರಾಷ್ಟ್ರೀಯ ಮರುಬಳಕೆ ಇಂಧನ ಏಜೆನ್ಸಿಯು (International Renewable Energy Agency -IRENA) ಈ ಕುರಿತಾದ ಹೊಸ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಮರುಬಳಕೆ ಇಂಧನ ಉತ್ಪಾದನೆಯ ಖರ್ಚು ವೆಚ್ಚಗಳನ್ನು ಇದರಲ್ಲಿ ವಿಷದೀಕರಿಸಲಾಗಿದ್ದು, ಮರುಬಳಕೆ ಇಂಧನಗಳ ಕುರಿತು ಹೊಸ ದೃಷ್ಟಿಕೋನವನ್ನು ಮುಂದಿಟ್ಟಿದೆ.
2019 ರಲ್ಲಿ ಅಳವಡಿಸಲಾದ ಅರ್ಧಕ್ಕೂ ಹೆಚ್ಚು ಮರುಬಳಕೆ ಇಂಧನ ಉತ್ಪಾದನೆ ಘಟಕಗಳು ಕಲ್ಲಿದ್ದಲಿಗಿಂತ ಕಡಿಮೆ ದರದಲ್ಲಿ ವಿದ್ಯುತ್ ಉತ್ಪಾದನೆ ಮಾಡಿವೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೊಸ ಸೋಲಾರ್ ಮತ್ತು ಪವನ ಯಂತ್ರಗಳು ಕಲ್ಲಿದ್ದಲಿಗಿಂತ ಎಷ್ಟೋ ಪಟ್ಟು ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದಿಸುತ್ತಿವೆ. ಹೀಗಾಗಿ ಮರುಬಳಕೆ ಇಂಧನ ಘಟಕಗಳು ಅತಿ ವೇಗದಲ್ಲಿ ಎಲ್ಲೆಡೆ ಸ್ಥಾಪನೆಯಾಗುತ್ತಿವೆ.
ಸುಧಾರಿತ ಬಯೋ ಇಂಧನ, ಜಿಯೋಥರ್ಮಲ್ ಮತ್ತು ಹೈಡ್ರೊಪವರ್ ತಂತ್ರಜ್ಞಾನಗಳ ಅಳವಡಿಕೆಯ ಮೂಲಕ ಸೋಲಾರ್ ಮತ್ತು ಪವನ ಶಕ್ತಿ ಘಟಕಗಳ ನಿರ್ಮಾಣ ವೆಚ್ಚ ಗಣನೀಯವಾಗಿ ತಗ್ಗುತ್ತಿದೆ. 2010 ರಿಂದ 19 ರ ಅವಧಿಯಲ್ಲಿ ಸೋಲಾರ್ ಫೋಟೊವೋಲ್ಟಾಯಿಕ್ ಕೋಶಗಳ ಬೆಲೆಗಳು ಶೇ 82 ರಷ್ಟು ಕಡಿಮೆಯಾಗಿದ್ದು ಉಲ್ಲೇಖನೀಯ. ಹಾಗೆಯೇ ಕಾನ್ಸಂಟ್ರೇಟಿಂಗ್ ಸೋಲಾರ್ ಪವರ್ ವೆಚ್ಚ ಶೇ 42 ರಷ್ಟು, ನದಿ ದಂಡೆಯ ಪವನ ಶಕ್ತಿ ಘಟಕಗಳ ವೆಚ್ಚ ಶೇ 40 ರಷ್ಟು ಹಾಗೂ ಇತರೆಡೆಯ ಪವನ ಶಕ್ತಿ ಘಟಕಗಳ ವೆಚ್ಚದಲ್ಲಿ ಶೇ 29 ರಷ್ಟು ಇಳಿಕೆಯಾಗಿದೆ.
ಉಪಕರಣಗಳಿಗೆ ಬಳಸುವ ಸೋಲಾರ್ ಪವರ್ ವಿದ್ಯುಚ್ಛಕ್ತಿ ಉತ್ಪಾದನಾ ಖರ್ಚು ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಶೇ 13 ರಷ್ಟು ಕಡಿಮೆಯಾಗಿದೆ. ಅದರಂತೆ ನದಿದಂಡೆ ಹಾಗೂ ಇತರೆಡೆಯ ಪವನಶಕ್ತಿ ಘಟಕಗಳ ವಿದ್ಯುತ್ ಉತ್ಪಾದನಾ ವೆಚ್ಚಗಳು ಶೇ 9 ರಷ್ಟು ಕಡಿಮೆಯಾಗಿವೆ.
ಮರುಬಳಕೆ ಇಂಧನ ಘಟಕಗಳ ಕ್ಷೇತ್ರದಲ್ಲಿನ ಇತರ ಸಕಾರಾತ್ಮಕ ಬೆಳವಣಿಗೆಗಳು ಹೀಗಿವೆ: