ಬೆಂಗಳೂರು: ಮಹಾತ್ಮ ಗಾಂಧೀಜಿಯವರು ಎಷ್ಟು ಪ್ರಸ್ತುತ ಎಂಬ ಚರ್ಚೆಗಳು ಸದಾ ಕಾಲ ನಡೆಯುತ್ತಲ್ಲೇ ಇರುತ್ತವೆ. ಸತ್ಯ ಮತ್ತು ಅಹಿಂಸೆಯಿಂದ ಹಿಡಿದು ಸರ್ವೋದಯದವರೆಗೂ ಅವರ ತತ್ವಗಳು ಕಾಲ ಕಾಲಕ್ಕೂ ಸ್ಮರಣೀಯ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರ ಅಚ್ಚಳಿಯದೆ ಉಳಿದಿದ್ದರೂ ಅರ್ಥಶಾಸ್ತ್ರಕ್ಕೆ ನೀಡಿದ ಕೊಡುಗೆಯನ್ನು ಗ್ರಾಮಾಭಿವೃದ್ಧಿಯಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಕುಸಿತದ ಅಪಾಯದಲ್ಲಿರುವ ಜಾಗತಿಕ ಆರ್ಥಿಕತೆಗೆ ಮತ್ತು ಅವರ 150ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಗಾಂಧೀಜಿ ಆರ್ಥಿಕ ಚಿಂತನೆಯ ಪ್ರಸ್ತುತತೆಯ ಮೇಲೆ ಒಂದು ಕಿರು ನೋಟ.
ಗಾಂಧಿಯವರ ಅರ್ಥಶಾಸ್ತ್ರವನ್ನು ಅನೇಕರು ರಾಮರಾಜ್ಯ ಮತ್ತು ಆದರ್ಶವಾದ ಎಂದು ಪರಿಗಣಿಸಿದ್ದಾರೆ. ವಾಸ್ತವದಲ್ಲಿ ಅವರದು ಸಮಾಜವಾದದ ಸ್ಪರ್ಶದೊಂದಿಗೆ ಸರಳವಾಗಿ ನಿರೂಪಣೆಗೊಂಡಿದೆ. ನೈತಿಕತೆ ಮತ್ತು ಅರ್ಥಶಾಸ್ತ್ರ, ಅಭಿವೃದ್ಧಿ ಮತ್ತು ಸಮಾನತೆ, ಸಂಪತ್ತಿನ ಸೃಷ್ಟಿ ಮತ್ತು ವಿತರಣೆಯ ನಡುವೆ ತಾರ್ಕಿಕ ಸಂಘರ್ಷದಿಂದ ಕೂಡಿದಂತಿದೆ.
ಅರ್ಥವ್ಯವಸ್ಥೆಯಲ್ಲಿ ಪಾಲುದಾರನಾದ ಪ್ರತಿಯೊಬ್ಬರಿಗೂ ಕೆಲಸ, ದೈನಂದಿನ ಜೀವನ ನಡೆಸಲು ಸಮಾನವಾದ ಅವಕಾಶ ಪಡೆಯುವುದನ್ನು ಆರ್ಥಿಕ ವ್ಯವಸ್ಥೆ ಆ ವ್ಯಕ್ತಿಗೆ ಖಾತ್ರಿ ಪಡಿಸಬೇಕು ಎಂಬುದು ಗಾಂಧಿ ಅವರ ಪ್ರತಿಪಾದನೆ. ಸರಳ ಜೀವನವನ್ನು ಪ್ರತಿಪಾದಿಸಿದರೇ ಹೊರೆತು ಐಷಾರಾಮಿ ಜೀವನವಲ್ಲ. ಜನರು ಅತಿಯಾದ ಸೇವನೆಯಿಂದ ತಪ್ಪಿಸಿಕೊಂಡು ಸರಳ ಜೀವನದತ್ತ ಆಶ್ರಯಿಸಬೇಕು. ಕೈಗಾರೀಕರಣವನ್ನು ವಿರೋಧಿಸಿದ್ದ ಅವರು, ಗ್ರಾಮೀಣರಿಗೆ ಉದ್ಯೋಗ ಒದಗಿಸುವ ಕೃಷಿ ಚಟುವಟಿಕೆಗಳಿಗೆ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಒತ್ತು ನೀಡಬೇಕು ಎಂದಿದ್ದರು.
ಗಾಂಧಿಯ ಕಾಲದಲ್ಲಿ ದೇಶದ ಬಹುತೇಕ ಜನರು ಕೃಷಿಯ ಮೇಲೆ ಅವಲಂಬನೆ ಆಗಿದ್ದರು. ಗಾಂಧಿಯವರ ಅರ್ಥಶಾಸ್ತ್ರದ ಕಲ್ಪನೆಯು ವಿಕೇಂದ್ರೀಕೃತ ಅಭಿವೃದ್ಧಿ ಮಾದರಿಯ ಮೇಲೆ ಬಲವಾದ ನಂಬಿಕೆ ಇರಿಸಿತ್ತು. ಅಭಿವೃದ್ಧಿಯ ಫಲಗಳು ಪ್ರತಿಯೊಂದು ಭಾಗಕ್ಕೂ ತಲುಪುವಂತೆ ನೋಡಿಕೊಳ್ಳುವ ಮೂಲಕ ಸಾಮಾಜಿಕ ಸಾಮರಸ್ಯ ಮತ್ತು ಸಮಾನತೆ ಉತ್ತೇಜಿಸಬೇಕು ಎಂಬ ಆಶಯ ಅವರದಿತ್ತು.
ಮತ್ತೊಂದು ಕಡೆ ಗಾಂಧಿಯವರು, ವ್ಯವಹಾರದ ಸಾಮಾಜಿಕ ನಿಯಂತ್ರಣವನ್ನು ಬೆಂಬಲಿಸಿದ್ದರು. ಇದು ಬಡ- ಜನಸಾಮಾನ್ಯರ ಶೋಷಣೆಯನ್ನು ತಡೆಗಟ್ಟುತ್ತದೆ ಮತ್ತು ಸಂಪತ್ತಿನ ಸಾಂದ್ರತೆ ಮೊಟಕುಗೊಳಿಸುತ್ತದೆ. ಇದರಡಿ ಬರುವ ಲಾಭ ಎಲ್ಲರಿಗೂ ಸಮನಾಗಿ ವಿತರಣೆಯಾಗುತ್ತದೆ ಎಂದು ಪ್ರತಿಪಾದಿಸಿದ್ದು ಅವರ ವೈಯಕ್ತಿಕ ನಿಲುವಾಗಿತ್ತು.
ಗಾಂಧೀಜಿ ಅರ್ಥಶಾಸ್ತ್ರ ಈಗಲೂ ಪ್ರಸ್ತುತವೇ?
ನವ ಉದಾರವಾದದ 21ನೇ ಶತಮಾನದಲ್ಲಿ ವ್ಯಾಪಾರ ಮತ್ತು ಹಣಕಾಸು ನೀತಿಗಳ ಮೇಲಾಟದಲ್ಲಿ ಗಾಂಧಿಯವರ ಆದರ್ಶಗಳು ಮತ್ತು ಆಲೋಚನೆಗಳು ಪ್ರಸ್ತುತವೇ ಎಂಬುದನ್ನು ಸುಲಭವಾಗಿ ವ್ಯಾಖ್ಯಾನಿಸುವುದಕ್ಕಿಂತ, ಗಾಂಧಿಯ ಮತ್ತು ಗಾಂಧಿ ನಂತರದ ಆರ್ಥಿಕ ನೀತಿ ನಿರ್ಧಾರಗಳನ್ನು ವಿಶ್ಲೇಷಿಸಿದಾಗ ಅರ್ಥಸಿಗುತ್ತದೆ. ಸ್ವತಂತ್ರ ಭಾರತದ ನಂತರ ಆರ್ಥಿಕ ನೀತಿ-ನಿರ್ಧಾರಗಳಲ್ಲಿ ವಿಚಲನತೆ ಕಂಡುಬಂದಿದೆ. ಗಾಂಧಿಯವರ ವಿಶ್ವಾಸಾರ್ಹ ವ್ಯಕ್ತಿಯಾಗಿದ್ದ ಜವಾಹರಲಾಲ್ ಲಾಲ್ ನೆಹರು ಅವರು ದೇಶದ ಮೊದಲ ಪ್ರಧಾನಿಯಾದರು. ಬಳಿಕ ಕೆಲವು ಸಂದರ್ಭದಲ್ಲಿ ಅವರು ಗಾಂಧಿವಾದದ ಆದರ್ಶಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡರು. ಎರಡನೇ ಪಂಚವಾರ್ಷಿಕ ಯೋಜನೆಯಲ್ಲಿ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ದೊಡ್ಡ ಪ್ರಮಾಣದ ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ತಳಿದರು.
ಗಾಂಧಿಯವರೇ ಪೋಷಿಸಿ ಬೆಳೆಸಿದ್ದ ಕಾಂಗ್ರೆಸ್, ಗಾಂಧಿವಾದದ ತತ್ತ್ವಗಳನ್ನು ಸ್ಪಷ್ಟವಾಗಿ ನಿರಾಕರಿಸಿತ್ತು. ಭಾರತ ಅನುವಂಶಿಕವಾಗಿ ಪಡೆದುಕೊಂಡು ಬಂದ ಜನಸಂಖ್ಯೆ, ತೀವ್ರವಾಗಿದ್ದ ಬಡತನ, ಅನಕ್ಷರಸ್ಥೆಯ ತಾಂಡವ ಮತ್ತು ಪ್ರಧಾನವಾಗಿ ಬ್ರಿಟಿಷ್ ಆಳ್ವಿಕೆಯಿಂದ ಶೋಷಣೆಗೆ ಒಳಗಾದ ಜನರು ಹಾಗೂ ಎರಡು ರಾಷ್ಟ್ರಗಳ ವಿಭಜನೆಯ ಸಮಯದಲ್ಲಿ ಉದ್ಭವಿಸಿದ್ದ ಕೋಮು ಗಲಭೆಗಳಿಂದ ದೇಶ ಬಳಲುತ್ತಿತ್ತು. ಇಂತಹ ಸಂದಿಗ್ಧತೆಯಲ್ಲಿ ಆದರ್ಶವಾದದ ಆರ್ಥಿಕ ಮಾದರಿಗಳನ್ನು ಕಾರ್ಯಗತಗೊಳಿಸುವುದು ಅಸಾಧ್ಯದ ಕೆಲಸವಾಗಿತ್ತು. ವಾಸ್ತವವಾಗಿ ಗಾಂಧಿಯವರ ಪರಿಕಲ್ಪನೆ ಸಂಪತ್ತಿನ ಪುನರ್ವಿತರಣೆಯಡಿ ಬರುತ್ತದೆ. ಇವರ ಪರಿಕಲ್ಪನೆಯಂತೆ ಸಂಪತ್ತನ್ನು ವಿತರಿಸುತ್ತಾ ಹೋದಂತೆ ಅದು ಸಂಪತ್ತು ಸೃಷ್ಟಿಸುವ ಸಾಧನವಾಗಿ ಕೈಗಾರೀಕರಣದತ್ತ ವಾಲತೊಡಗಿತು. ನಂತರದ ದಿನಗಳಲ್ಲಿ ಆರ್ಥಿಕ ಸವಾಲುಗಳು ಮುಂದುವರೆದು ಗಾಢವಾದ ಪರಿಣಾಮ ಬೀರತೊಡಗಿದವು. ಅಂತಿಮವಾಗಿ ಭಾರತ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣವನ್ನು ಅಪ್ಪಿಕೊಳ್ಳಬೇಕಾಯಿತು. ಇಂದು ಸುಧಾರಣೆಗಳ ಹೆಸರಲ್ಲಿ ಮಾರುಕಟ್ಟೆಯ ಶಕ್ತಿಗಳು ಇದನ್ನು ಮುನ್ನಡೆಸುತ್ತಿವೆ.
ಹೊಸ ನೀತಿ-ನಿಲುವುಗಳು ಮತ್ತೆ ಗಾಂಧಿಯವರ ತತ್ವ ಮತ್ತು ಆರ್ಥಿಕತೆಯ ಆಲೋಚನೆಗಳಿಗೆ ವಿರುದ್ಧವಾಗಿದ್ದವು. ಎರಡನೇ ಬಾರಿಯ ಆಯ್ಕೆಯು ಉದ್ದೇಶಪೂರ್ವಕವಾಗಿ ಆಗಿರಲಿಲ್ಲ. ಆದರೆ, ದೇಶೀಯ ಆರ್ಥಿಕತೆಗಳು ಬಲವಂತವಾಗಿ ಭಾರತವನ್ನು ಗಾಂಧಿಯವರ ಆರ್ಥಿಕ ಸಿದ್ಧಾಂತಗಳಿಂದ ದೂರ ತಳ್ಳಿದವು. ಈ ನೀತಿಗಳ ಪರಿಣಾಮವಾಗಿ ಭಾರತವು ನಿಧಾನಗತಿಯ ಆರ್ಥಿಕ ಬೆಳವಣಿಗೆಯ ಹಿಡಿತದಿಂದ ಹೊರಬಂತು, ಸುಧಾರಣೆಯ ಬಳಿಕ ಭಾರತದಲ್ಲಿ ಆರೋಗ್ಯಕರವಾದ ಜಿಡಿಪಿ ಅಂಕಿ-ಅಂಶಗಳ ನೋಂದಣಿ ಆರಂಭವಾಯಿತು. ಇದು ತಾಂತ್ರಿಕವಾಗಿ ಸಂಪತ್ತಿನ ಸೃಷ್ಟಿಯನ್ನು ಅರ್ಥೈಸಿತು. ಆದರೆ, ನವ ಉದಾರವಾದಿ ನೀತಿಗಳು ಸಂಪತ್ತಿನ ಸಮಾನ ಮರುಹಂಚಿಕೆ ಮಾಡಲು ಆಗಲಿಲ್ಲ. ಅಂದು ಪ್ರಾಬಲ್ಯ ಮೆರೆದಿದ್ದ ಕೃಷಿ ಕ್ಷೇತ್ರವು ಸೇವಾ ಉದ್ಯಮಕ್ಕೆ ಹಾದಿ ಬಿಟ್ಟುಕೊಟ್ಟಿತು. ಸರಳವಾದ ಜೀವನ ಕ್ರಮ ಗ್ರಾಹಕೀಕರಣದಿಂದ ಬದಲಾಯಿತು. ಸಣ್ಣ ಪ್ರಮಾಣದ ಕೈಗಾರಿಕೆಗಳು ಬಹುರಾಷ್ಟ್ರೀಯ ಕಂಪನಿಗಳ ಪ್ರಾಬಲ್ಯಕ್ಕೆ ಸಿಲುಕಿಕೊಂಡು ನಲುಗಿದವು. ಇದರಿಂದಾಗಿ ದೇಶದ ನೀತಿ–ನಿಯಮಗಳಲ್ಲಿ ಆದ್ಯ ಪ್ರವರ್ತಕರಾಗಿದ್ದ ಬಾಪೂರ ಪ್ರಾಮುಖ್ಯತೆ ಕಡಿಮೆಯಾಗುತ್ತ ಬಂದು, ಸ್ವಾತಂತ್ರ್ಯಕ್ಕಾಗಿ ಅವರು ಜೀವನಪರ್ಯಂತ ಅವಿರತವಾಗಿ ಹೋರಾಡಿದರೂ ಅವರ ಆರ್ಥಿಕತ ತತ್ವಗಳು ತೆರೆಮರೆಗೆ ಸರಿದವು.
ಈ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ ನೀತಿಗಳ ಪರಸ್ಪರ ಸಂಬಂಧವು ತನ್ನದೇ ಆದ ಅಡ್ಡಪರಿಣಾಮಗಳನ್ನು ಉಂಟುಮಾಡಿದೆ. ಸುಧಾರಣೆಯ ನಂತರ ಭಾರತದ ಸಮಾನತೆ ವಿಸ್ತಾರಗೊಂಡು ಮತ್ತಷ್ಟು ಆಳವಾಯಿತು, ಗ್ರಾಮೀಣರ ಯಾತನೆ ಹೆಚ್ಚಾಗಿ, ಹಳ್ಳಿಗರು ದೊಡ್ಡ ಪ್ರಮಾಣದಲ್ಲಿ ನಗರ ಪ್ರದೇಶಗಳತ್ತ ಕೆಲಸ ಹುಡುಕಿಕೊಂಡು ವಲಸೆ ಬಂದರು, ಬರುವಷ್ಟು ಸಂಖ್ಯೆಗೆ ಅನುಗುಣವಾಗಿ ಕೆಲಸ ಲಭಿಸಲಿಲ್ಲ. ಹೀಗಾಗಿ, ನಿರುದ್ಯೋಗದ ಪ್ರಮಾಣವು ಕಳೆದ 45 ವರ್ಷಗಳಲ್ಲಿ ಅತ್ಯಧಿಕ ಮಟ್ಟದಲ್ಲಿ, ಕೃಷಿ ವಲಯ ಬಿಕ್ಕಟ್ಟಿಗೆ ಜಾರಿದೆ, ಬಡತನ ಇನ್ನೂ ಜೀವಂತವಾಗಿದೆ. ಯುನಿಸೆಫ್ ಮತ್ತು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ವಿಶ್ವದಲ್ಲಿರುವ ಅತ್ಯಂತ ಕಡು ಬಡವರ ಪೈಕಿ ಶೇ 30.3ರಷ್ಟು ಭಾರತದ ಮಕ್ಕಳಿದ್ದಾರೆ. ಆಫ್ರಿಕಾದ ಬಳಿಕ ಭಾರತವೇ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದೆ. ಇದು ಭಾರತದಲ್ಲಿನ ಅಸಮಾನತೆಗೆ ಹಿಡಿದ ಕೈಗನ್ನಡಿ.
ಮತ್ತೊಂದೆಡೆ ನೈಜ ವೇತನ ಬೆಳವಣಿಗೆಯ ಕುಸಿತ, ಉತ್ಪಾದಕ ವೆಚ್ಚಗಳ ಏರಿಕೆ, ಬಾಷ್ಪಶೀಲ ಬೆಲೆ (ಸುಲಭ ದರ), ಕನಿಷ್ಠ ಬೆಂಬಲ ಬೆಲೆಗಳ ಕೊರತೆಯಿಂದಾಗಿ ಕೃಷಿ ಕ್ಷೇತ್ರ ಬಳಲುತ್ತಿದೆ. ಇವು ರೈತರ ಲಾಭವನ್ನು ಹೆಚ್ಚಿಸದೆ ಅವರನ್ನು ಇನ್ನಷ್ಟು ಅಶಕ್ತರನ್ನಾಗಿ ಮಾಡುತ್ತಿದೆ. ಇದು ಕೃಷಿಕರನ್ನು ಮತ್ತು ಗ್ರಾಮೀಣರನ್ನು ಬೇಸಾಯದಿಂದ ದೂರ ಸರಿಸುತ್ತಿದೆ. ಗಾಂವ್ ಕನೆಕ್ಷನ್ ನಡೆಸಿದ ಸಮೀಕ್ಷೆ ಅನ್ವಯ ಶೇ.48ರಷ್ಟು ಕೃಷಿಕ ಕುಟುಂಬಗಳು ಬೇಸಾಯವನ್ನು ಮುಂದುವರಿಸಲು ಇಚ್ಛಿಸುತ್ತಿಲ್ಲ ಎಂಬುದು ಕಳವಳಕರ ಸಂಗತಿ. ರಾಜ್ಯ–ರಾಜ್ಯಗಳ ಹಾಗೂ ಆಂತರಿಕವಾದ ಆದಾಯದ ಅಸಮಾನತೆ ಎಚ್ಚರಿಕೆಯ ಕರೆ ಗಂಟೆಯಾಗಿದೆ.
ಇಂತಹ ಸನ್ನಿವೇಶದಲ್ಲಿಯೇ ಗಾಂಧಿಯವರ ಪ್ರಸ್ತುತತೆ ಹೆಚ್ಚು ಮಹತ್ವದ್ದಾಗಿದೆ, ಏಕೆಂದರೆ ಈ ಸವಾಲುಗಳನ್ನು ಸಮಾಜವಾದ, ನೀತಿಶಾಸ್ತ್ರ, ಸಂಪತ್ತಿನ ಪುನರ್ವಿತರಣೆಯ ಮೇಲೆ ಕೇಂದ್ರೀಕರಿಸಿ ಸಮಾನತೆಯ ಮಿಶ್ರಣದಿಂದ ನಿಭಾಯಿಸುವ ಮಾರ್ಗಗಳನ್ನು ಅವರು ಸೂಚಿಸಿದ್ದರು. ಇವು ಸಾಮಾಜಿಕ ಸಾಮರಸ್ಯವನ್ನು ಮತ್ತಷ್ಟು ಉತ್ತೇಜಿಸುವಂತಹವು. ಆದ್ದರಿಂದ, ಗಾಂಧಿ ಅರ್ಥಶಾಸ್ತ್ರದ ತತ್ವಗಳು ಉತ್ತಮವಾಗಿದ್ದು ಮತ್ತು ಅವರ ನೀತಿಗಳು ಆಳವಾದ ಒಳನೋಟಗಳನ್ನು ಹೊಂದಿವೆ. ಅವರ ದೃಷ್ಟಿಕೋನದಿಂದ ನೋಡಿದ್ದೆ ಆದಲ್ಲಿ ನಮ್ಮ ಮುಂದೆ ಚೈತನ್ಯ ಕಾಣಿಸುತ್ತದೆ. 2025ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ತಲುಪುವ ಭಾರತದ ಮಹತ್ವಕಾಂಕ್ಷೆಗೆ ಬಾಪೂ ಆರ್ಥಿಕ ದೃಷ್ಟಿಕೋನ ದಾರಿ ದೀಪವಾಗಬಲ್ಲದು. ನಾವು ಗಾಂಧಿಯವರ ಆರ್ಥಿಕ ಚಿಂತನೆಯಿಂದ ಒಂದು ಎಲೆಯನ್ನು ತೆಗೆದುಕೊಂಡಾಗ, ಅದರ ಬೆಳವಣಿಗೆ ಮುಖ್ಯ, ಅದರ ಜೊತೆಗೆ ಬೆಳವಣಿಗೆಯ ಸಂಯೋಜನೆಯು ಅಷ್ಟೇ ಮುಖ್ಯವೆಂಬುದು ನಮಗೆ ಸ್ಪಷ್ಟವಾಗುತ್ತದೆ. ಗಾಂಧಿಯವರ ಬೆವಣಿಗೆಯ ತತ್ವವು ಕೃಷಿ ಮತ್ತು ಗ್ರಾಮೀಣ ಕೈಗಾರಿಕೆಗಳ ಕೇಂದ್ರ ಬಿಂದುವಾಗಿದೆ. ಪ್ರಸ್ತುತ ದಿನಗಳಲ್ಲಿನ ಗ್ರಾಮೀಣರ ಯಾತನೆ ಮತ್ತು ಕೃಷಿಯಲ್ಲಿನ ಬಿಕ್ಕಟ್ಟುಗಳಿಗೆ ಗಾಂಧಿಯವರ ಆದರ್ಶ ಆರ್ಥಿಕ ಸಿದ್ಧಾಂತಗಳು ಪರಿಹಾರವಾಗಿವೆ. ದೊಡ್ಡ ಪ್ರಮಾಣದ ಕೈಗಾರಿಕೆಗಳು ಮತ್ತು ಬಹು ರಾಷ್ಟ್ರೀಯ ಕಂಪನಿಗಳನ್ನು ಮುಚ್ಚಬೇಕು ಎಂಬುದು ವಾದವಲ್ಲ. ದಶಕಗಳಿಂದ ಕಡೆಗಣಿಸಲ್ಪಟ್ಟಿರುವ ಗ್ರಾಮೀಣ ಭಾರತಕ್ಕೆ ಹೆಚ್ಚಿನ ಒತ್ತು ನೀಡುವ ಸಮಯ ಬಂದಿದೆ ಎಂಬುದೇ ಮನವರಿಕೆ.
ಜಿಡಿಪಿಯ ಗಾತ್ರ ದೊಡ್ಡದಾಗುತ್ತಿದ್ದಂತೆ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ಯಾಕೇಜ್ ರೂಪದಲ್ಲಿ ತಂದು ನಿಲ್ಲಿಸುತ್ತಿದೆ. ಇದು ನಾನಾ ಉದ್ಯೋಗಗಳನ್ನು ಒದಗಿಸಿ ಅಭಿವೃದ್ಧಿಯನ್ನು ತರುತ್ತಿದೆಯಾದರೂ ಅಸಮಾನತೆಯ ಮೂಟೆಗಳನ್ನು ಹೊತ್ತುಕೊಂಡು ಸಾಗುತ್ತಿದೆ. ಎಲ್ಲರೂ ಒಳಗೊಳ್ಳುವಿಕೆಯ ತತ್ವ ಇಲ್ಲಿ ಕ್ಷೀಣವಾಗುತ್ತಿದೆ. ನಮ್ಮ ನೀತಿ ಪ್ರವರ್ಧಕರು ಅದನ್ನು 'ಅಂತರ್ಗತ ಬೆಳವಣಿಗೆ' ಎಂದು ಕರೆಯುತ್ತಿದ್ದಾರೆ. ಬೆಳವಣಿಗೆಯ ಚಕ್ರದಲ್ಲಿ ಭಾಗವಹಿಸುವಿಕೆ ಮತ್ತು ಬೆಳವಣಿಗೆಯ ಫಲಾನುಭವದ ಹಂಚಿಕೆಯ ಅಂತರ್ಗತವಾಗುತ್ತಿದೆ. ಇದು ದೇಶದ ಬಡತನ ಮತ್ತು ಅಸಮಾನತೆಯನ್ನು ಪರಿಹರಿಸುವ ಕುರಿತು ಮಾರ್ಗದರ್ಶನಕ್ಕೆ ಸೀಮಿತವಾಗಿದೆ. ಸರ್ಕಾರವು ಗಾಂಧಿವಾದದ ಆದರ್ಶದ ನೀತಿಗಳಾದ ‘ಸ್ವದೇಶಿ’ ಮತ್ತು ‘ಸ್ವಾವಲಂಬನೆ’ಯತ್ತೆ ಹೆಜ್ಜೆ ಹಾಕುತ್ತಿದೆ.