ಕರ್ನಾಟಕ

karnataka

ETV Bharat / business

68,000 ಕೋಟಿ ರೂ. ಸಾಲ ಉದ್ದೇಶಪೂರ್ವಕ ವಂಚನೆ... ಈ ದೊಡ್ಡ ತಲೆಗಳು ಯಾವ್ಯಾವುದು ಗೊತ್ತಾ? - ಆರ್​ಟಿಐ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ), ಉದ್ದೇಶಪೂರ್ವಕ ಸುಸ್ಥಿದಾರರಾದ ಅಗ್ರ 50 ವಂಚಕರು 68,607 ಕೋಟಿ ರೂ. ಬಾಕಿ ಸಾಲ ಉಳಿಸಿಕೊಂಡಿದ್ದಾರೆ ಎಂಬುದನ್ನು ಒಪ್ಪಿಕೊಂಡಿದೆ.

wilful defaulters
ಉದ್ದೇಶಪೂರ್ವಕ ಸುಸ್ಥಿದಾರ

By

Published : Apr 27, 2020, 6:17 PM IST

ಮುಂಬೈ: ಬ್ಯಾಂಕ್​ಗಳಿಂದ ಸಾವಿರಾರು ಕೋಟಿ ರೂ. ಸಾಲ ಪಡೆದು ಮರುಪಾವತಿಸದ ಉದ್ದೇಶಪೂರ್ವಕ ಸುಸ್ಥಿದಾರರ ಹೆಸರುಗಳು ಮಾಹಿತಿ ಹಕ್ಕು ಕಾಯ್ದೆಯಿಂದ (ಆರ್​ಟಿಐ) ಬಹಿರಂಗವಾಗಿವೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ), ಉದ್ದೇಶಪೂರ್ವಕ ಸುಸ್ಥಿದಾರರಾದ ಅಗ್ರ 50 ವಂಚಕರು 68,607 ಕೋಟಿ ರೂ. ಬಾಕಿ ಸಾಲ ಉಳಿಸಿಕೊಂಡಿದ್ದಾರೆ ಎಂಬುದನ್ನು ಒಪ್ಪಿಕೊಂಡಿವೆ.

ಆರ್‌ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಅವರು ಫೆಬ್ರವರಿ 16ರಂದು ಅಗ್ರ 50 ಉದ್ದೇಶಪೂರ್ವ ಸುಸ್ಥಿದಾರರ ವಿವರ ಮತ್ತು ಅವರ ಪ್ರಸ್ತುತ ಸಾಲದ ಸ್ಥಿತಿಗತಿಗಳ ಬಗ್ಗೆ ಕೋರಿ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು.

2020ರ ಫೆಬ್ರವರಿ 16ರಂದು ಬಜೆಟ್ ಅಧಿವೇಶನದಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮತ್ತು ರಾಜ್ಯ ಹಣಕಾಸು ಸಚಿವ ಅನುರಾಗ್ ಠಾಕೂರ್ ಅವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಕೇಳಿದ್ದ ಸಾಲಗಾರರ ಕುರಿತ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದರು. ಹೀಗಾಗಿ, ನಾನು ಈ ಬಗ್ಗೆ ಮಾಹಿತಿ ಕೋರಿ ಆರ್​ಟಿಐ ಅಡಿ ಪ್ರಶ್ನಿಸಿದ್ದೆ ಎಂದು ಗೋಖಲೆ ಸುದ್ದಿ ಐಎಎನ್ಎಸ್​ಗೆ ತಿಳಿಸಿದ್ದಾರೆ.

ಸರ್ಕಾರ ಮಾಡದಿದ್ದನ್ನು ಆರ್‌ಬಿಐನ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಭಯ್ ಕುಮಾರ್ ಅವರು ಶನಿವಾರ (ಏಪ್ರಿಲ್ 24) ಉತ್ತರ ನೀಡಿ ವಂಚಕರ ಹೆಸರುಗಳನ್ನು ಬಹಿರಂಗಪಡಿಸಿದ್ದಾರೆ. 'ವಜ್ರ-ಖಚಿತ ಪಟ್ಟಿಯಲ್ಲಿ' ಹಲವು ಚಕಿತಗೊಳಿಸುವ ಸತ್ಯ ಅಡಗಿದೆ ಎಂದರು.

2019ರ ಸೆಪ್ಟೆಂಬರ್ 30ರವರೆಗೆ 68,607-ಕೋಟಿ ರೂ. ಬಾಕಿಯಾಗಿ ಉಳಿದಿದೆ. ತಾಂತ್ರಿಕವಾಗಿ / ವಿವೇಕದಿಂದ ದಾಖಲಾದ ಮೊತ್ತ ಒಳಗೊಂಡಿದೆ ಎಂದು ಆರ್‌ಬಿಐ ತಿಳಿಸಿದೆ.

2015ರ ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿ ಸಾಗರೋತ್ತರ ಸಾಲಗಾರರಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡಲು ಅಪೆಕ್ಸ್ ಬ್ಯಾಂಕ್ ನಿರಾಕರಿಸಿದೆ ಎಂದರು.

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರುವುದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಆಪಾದಿತ ಮೆಹುಲ್ ಚೋಕ್ಸಿ. ಈತನ ಕಂಪನಿಯಾದ ಗೀತಾಂಜಲಿ ಜೆಮ್ಸ್ ಲಿಮಿಟೆಡ್ 5,492 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಗಿಲಿ ಇಂಡಿಯಾ ಲಿಮಿಟೆಡ್ ಮತ್ತು ಸ್ಟಾರ್​ ಬ್ರಾಂಡ್ಸ್ ಲಿಮಿಟೆಡ್ ಕ್ರಮವಾಗಿ 1,447 ಕೋಟಿ ಮತ್ತು 1,109 ಕೋಟಿ ರೂ.ಯಷ್ಟಿದೆ.

ಕಾನ್ಪುರ ಮೂಲದ ರೊಟೊಮ್ಯಾಕ್ ಗ್ಲೋಬಲ್ ಪ್ರೈವೇಟ್​ ಲಿಮಿಟೆಡ್ 2,000 ಕೋಟಿ ರೂ. ಕೊಠಾರಿ ಗ್ರೂಪ್​ 2,850 ಕೋಟಿ ರೂ., ಕುಡೋಸ್ ಕೆಮಿಕಲ್​ 2,326 ಕೋಟಿ ರೂ., ಬಾಬಾ ರಾಮದೇವ್ ಮತ್ತು ಬಾಲ್ಕೃಷ್ಣ ಗ್ರೂಪ್​ ಕಂಪನಿ ರುಚಿ ಸೋಯಾ ಇಂಡಸ್ಟ್ರೀಸ್ ಲಿಮಿಟೆಡ್ 2,212 ಕೋಟಿ ರೂ. ಮತ್ತು ಜೂಮ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ 2,012 ಕೋಟಿ ರೂ.ಯಷ್ಟು ಸಾಲ ಉಳಿಸಿಕೊಂಡಿವೆ.

1,000 ದಿಂದ 2,000 ಕೋಟಿ ರೂ.ಗೂ ಕಡಿಮೆ ಸಾಲ ವಿಭಾಗದಲ್ಲಿ 18 ಕಂಪನಿಗಳಿವೆ. ಅದರಲ್ಲಿ ಪ್ರಮುಖವಾಗಿ ಹರೀಶ್ ಆರ್. ಮೆಹ್ತಾ ಅವರ ಫಾರೆವರ್ ಪ್ರೆಷಸ್ ಜ್ಯುವೆಲ್ಲರಿ ಮತ್ತು ಡೈಮಂಡ್ಸ್ ಪ್ರೈ ಲಿಮಿಟೆಡ್ 1,962 ಕೋಟಿ ರೂ. ಮತ್ತು ವಿಜಯ್ ಮಲ್ಯ ಒಡೆತನದ ಕಿಂಗ್‌ಫಿಶರ್ ಏರ್‌ಲೈನ್ಸ್ ಲಿಮಿಟೆಡ್ (ನಿಷೇಧ) 1,943 ಕೋಟಿ ರೂ. ಹೊಂದಿದೆ. 25 ಕಂಪನಿಗಳು 1.000 ಕೋಟಿ ರೂ. ವಿಭಾಗದಲ್ಲಿವೆ.

ABOUT THE AUTHOR

...view details