ನವದೆಹಲಿ:ಸಾರ್ವಜನಿಕ ವಲಯದ ಬ್ಯಾಂಕ್ಗಳ (ಪಿಎಸ್‌ಬಿ) ಖಾಸಗೀಕರಣದ ಕುರಿತು ಸರ್ಕಾರದೊಂದಿಗೆ ಚರ್ಚೆಗಳು ನಡೆಯುತ್ತಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಪಿಎಸ್‌ಬಿಗಳ ಖಾಸಗೀಕರಣದ ಕುರಿತು ನಾವು ಸರ್ಕಾರದೊಂದಿಗೆ ಚರ್ಚಿಸುತ್ತಿದ್ದೇವೆ. ಈ ಪ್ರಕ್ರಿಯೆಯು ಮುಂದುವರಿಯುತ್ತದೆ ಎಂದು ಇಂಡಿಯಾ ಎಕನಾಮಿಕ್ ಕನ್ಕ್ಲೇವ್ನಲ್ಲಿ ಆರ್‌ಬಿಐ ಗವರ್ನರ್ ಹೇಳಿದರು.
ಖಾಸಗೀಕರಣಗೊಳ್ಳುವ ಸಾಧ್ಯತೆ ಇರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಎಲ್ಲ ಉದ್ಯೋಗಿಗಳ ಹಿತಾಸಕ್ತಿ ಕಾಪಾಡಲಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಗಳವಾರ ಭರವಸೆ ನೀಡಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬ್ಯಾಂಕಿಂಗ್ ಜಾಗದಲ್ಲಿ ಸಾರ್ವಜನಿಕ ವಲಯದ ಉಪಸ್ಥಿತಿಯು ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದರು.