ಕರ್ನಾಟಕ

karnataka

ETV Bharat / business

ಮೈನಸ್​ 9.5ಕ್ಕೆ ಕುಸಿಯುವ ಜಿಡಿಪಿ, ಮತ್ತೆ ಯಾವಾಗ ಏರಿಕೆ ಆಗುತ್ತೆ ಅಂತ RBI ಗವರ್ನರ್ ಹೇಳ್ತಾರೆ ಕೇಳಿ! - ಭಾರತದ ಜಿಡಿಪಿ ಬೆಳವಣಿಗೆ

ವಿತ್ತೀಯ ನೀತಿ ಸಮಿತಿ ಸಭೆಯ (ಎಂಪಿಸಿ) ಮುಕ್ತಾಯದ ಬಳಿ ಬಳಿಕ ಮಾತನಾಡಿದ ಆರ್​ಬಿಐ ಗವರ್ನರ್​ ಶಕ್ತಿಕಾಂತ್ ದಾಸ್, ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಅಥವಾ ಒಟ್ಟು ದೇಶೀಯ ಉತ್ಪನ್ನವು ಶೇ 9.5ರಷ್ಟು ಸಂಕುಚಿತಗೊಳ್ಳಲಿದೆ. ಇದು 2021ರ ಮಾರ್ಚ್​ನಲ್ಲಿ ಕೊನೆಗೊಳ್ಳುತ್ತದೆ ಎಂದರು.

GDP
ಜಿಡಿಪಿ

By

Published : Oct 9, 2020, 6:24 PM IST

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆಯು ಶೇ 9.5ರಷ್ಟು ಸಂಕುಚಿತಗೊಳ್ಳುವ ಸಾಧ್ಯತೆ ಇದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಜಿಡಿಪಿ ಕೊರೊನಾ ವೈರಸ್ ಪ್ರೇರಿತ ಸಂಕೋಚನದಿಂದ ಹೊರಬರಬಹುದು. 2020ರ ನಾಲ್ಕನೇ ತ್ರೈಮಾಸಿಕದ ವೇಳೆಗೆ ಸಕಾರಾತ್ಮಕ ಆಗಬಹುದು ಎಂದು ದಾಸ್ ಅಂದಾಜಿಸಿದ್ದಾರೆ. ವಿತ್ತೀಯ ನೀತಿ ಸಮಿತಿ ಸಭೆ (ಎಂಪಿಸಿ) ಬಳಿಕ ಮಾತನಾಡಿದ ಅವರು, ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಅಥವಾ ಒಟ್ಟು ದೇಶೀಯ ಉತ್ಪನ್ನವು ಶೇ 9.5ರಷ್ಟು ಸಂಕುಚಿತಗೊಳ್ಳಲಿದೆ. ಇದು 2021ರ ಮಾರ್ಚ್​ನಲ್ಲಿ ಕೊನೆಗೊಳ್ಳುತ್ತದೆ ಎಂದರು.

ರೆಪೊ ದರವನ್ನು ಈಗಿರುವ ಶೇ 4ಕ್ಕೆ ಹಿಡಿದಿಡಲು ಎಂಪಿಸಿ ಎಲ್ಲ ಸದಸ್ಯರು ಸರ್ವಾನುಮತದಿಂದ ಒಲವು ತೋರಿದ್ದಾರೆ. ಆದರೆ, ಸದ್ಯಕ್ಕೆ ಯಾವುದೇ ಹೆಚ್ಚಳವನ್ನು ಗವರ್ನರ್ ತಳ್ಳಿಹಾಕಿದರು.

ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ದರ ಮತ್ತು ಬ್ಯಾಂಕ್ ದರವ ಶೇ 4.2ರಷ್ಟಿದೆ. ರಿವರ್ಸ್ ರೆಪೊ ದರ ಶೇ 3.5ರಲ್ಲಿ ಕೂಡ ಯಥಾವತ್ತಾಗಿದೆ. ಸೆಪ್ಟೆಂಬರ್‌ನಲ್ಲಿ ಹಣದುಬ್ಬರವು ಉತ್ತುಂಗಕ್ಕೇರಿದ್ದು, ಮೂರನೇ ತ್ರೈಮಾಸಿಕ ಹಾಗೂ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಕ್ರಮೇಣವಾಗಿ ಗುರಿಯತ್ತ ತಲುಪುವ ನಿರೀಕ್ಷೆ ಇದೆ. ಪೂರೈಕೆಯ ಅಡೆತಡೆಗೆ ನಿರೀಕ್ಷೆಯಂತೆ ಬಹುತೇಕ ಸರಿಯಾಗಿದ್ದು, ಮುಂದಿನ ದಿನಗಳಲ್ಲಿ ಸರಿಯಾದ ಮಾರ್ಗದಲ್ಲಿ ಇರಲಿವೆ ಎಂದರು.

ABOUT THE AUTHOR

...view details