ನವದೆಹಲಿ:ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಶುಕ್ರವಾರ ಬೆಳಗ್ಗೆ 10 ಗಂಟೆಗೆ ವಿತ್ತೀಯ ನೀತಿ ಸಮಿತಿ ಸಭೆಯ ಕುರಿತು ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ.
ಹಣದುಬ್ಬರವನ್ನು ಗಟ್ಟಿಯಾಗಿಸುವ ದೃಷ್ಟಿಯಿಂದ ಕೇಂದ್ರೀಯ ಬ್ಯಾಂಕ್ ಸಾಲ ನೀಡುವ ದರಗಳ ಮೇಲೆ ಯಥಾಸ್ಥಿತಿ ಕಾಯ್ದುಕೊಳ್ಳಲಿದೆ ಎಂಬ ನಿರೀಕ್ಷೆಯ ಮಧ್ಯೆ ರಿಸರ್ವ್ ಬ್ಯಾಂಕಿನ ಹೊಸದಾಗಿ ರಚಿಸಲಾದ ಹಣಕಾಸು ನೀತಿ ಸಮಿತಿ (ಎಂಪಿಸಿ) ತನ್ನ ಮೂರು ದಿನಗಳ ಚರ್ಚೆಯನ್ನು ಬುಧವಾರ ಪ್ರಾರಂಭಿಸಿತ್ತು. ಈ ಸಭೆಯು ನಾಳೆಗೆ (ಶುಕ್ರವಾರ) ಕೊನೆಯಾಗಲಿದೆ.
ಚರ್ಚೆಯ ಕೊನೆಯಲ್ಲಿ ಆರ್‌ಬಿಐ ಶುಕ್ರವಾರ ತನ್ನ ಹಣಕಾಸು ನೀತಿ ಪರಿಶೀಲನೆಯೊಂದಿಗೆ ಹೊರಬರಲಿದೆ. ಸ್ವತಂತ್ರ ಸದಸ್ಯರ ನೇಮಕ ವಿಳಂಬ ಆಗಿದ್ದರಿಂದ ಈ ಹಿಂದೆ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 1ರವರೆಗೆ ನಿಗದಿಯಾಗಿದ್ದ ಆರು ಸದಸ್ಯರ ಎಂಪಿಸಿ ಸಭೆಯನ್ನು ಮರು ನಿಗದಿಪಡಿಸಲಾಯಿತು.