ಮುಂಬೈ: ಉತ್ತಮ ದ್ರವ್ಯತೆ ನಿರ್ವಹಣೆಗೆ ಅನುಕೂಲವಾಗುವ ಉದ್ದೇಶದಿಂದ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳಿಗೆ (ಆರ್‌ಆರ್‌ಬಿ) ದ್ರವ್ಯತೆ ಹೊಂದಾಣಿಕೆ ಸೌಲಭ್ಯ (ಎಲ್‌ಎಎಫ್), ಮಾರ್ಜಿನಲ್ ಸ್ಟ್ಯಾಂಡಿಂಗ್ ಸೌಲಭ್ಯ (ಬ್ಯಾಂಕ್ಗಳು ಸಾಲ ಪಡೆಯಲು ಇರಬೇಕಾದ ಮಾರ್ಜಿನಲ್ ಸ್ಟ್ಯಾಂಡಿಂಗ್ ಸೌಲಭ್ಯ: ಎಂಎಸ್‌ಎಫ್) ಮತ್ತು ಕಾಲ್ ಅಥವಾ ನೋಟಿಸ್ ಹಣದ ಮಾರುಕಟ್ಟೆ ಪ್ರವೇಶಿಸಲು ರಿಸರ್ವ್ ಬ್ಯಾಂಕ್ ಶುಕ್ರವಾರ ಅನುಮತಿ ನೀಡಿದೆ.
ಪ್ರಸ್ತುತ, ಆರ್‌ಬಿಐನ ನಿಯಮದಂತೆ ಮಾರುಕಟ್ಟೆ ಪ್ರವೇಶಿಸಲು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳಿಗೆ ಅನುಮತಿ ಇಲ್ಲ.