ಕರ್ನಾಟಕ

karnataka

ETV Bharat / business

ಕೆಲವೇ ಗಂಟೆಯಲ್ಲಿ EMI ಪಾವತಿ ವಿನಾಯಿತಿ ಅಂತ್ಯ: ಮತ್ತೆ ಮುಂದುವರಿಯುತ್ತಾ, ಸ್ಥಗಿತವಾಗುತ್ತಾ?

ಕೋವಿಡ್ -19ನಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸದೆ ಸಾಲಗಾರರ ಸಾಲ ವಿನಾಯಿತಿ ವಿಸ್ತರಣೆಯು ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದು ಎಂದು ರಿಸರ್ವ್ ಬ್ಯಾಂಕ್, ಆಗಸ್ಟ್ 31ರ ನಂತರ ಬ್ಯಾಂಕ್ ಸಾಲಗಳ ಮರುಪಾವತಿಸುವ ನಿಷೇಧ ವಿಸ್ತರಿಸುವುದು ಅಸಂಭವ ಎಂದು ಮೂಲಗಳು ತಿಳಿಸಿವೆ.

Loan
ಸಾಲ

By

Published : Aug 29, 2020, 3:39 PM IST

ನವದೆಹಲಿ:ಕೋವಿಡ್​-19 ಸೋಂಕು ಹಾಗೂ ಲಾಕ್​ಡೌನ್​ನಿಂದ ಎದುರಾದ ಆರ್ಥಿಕ ಸವಾಲುಗಳಿಗೆ ತಾತ್ಕಾಲಿಕ ಪರಿಹಾರವಾಗಿ ಸಾಲಗಾರರಿಗೆ ಇಎಂಐ ಪಾವತಿಗೆ ನೀಡಿದ್ದ ವಿನಾಯಿತಿ ಗಡುವು ಆಗಸ್ಟ್​ 31ಕ್ಕೆ ಕೊನೆಯಾಗಲಿದೆ.

ಬ್ಯಾಂಕರುಗಳು ಹಾಗೂ ಹಣಕಾಸೇತರ ಸಂಸ್ಥಗಳ ಮುಖ್ಯಸ್ಥರು ಮತ್ತೆ ಇಎಂಐ ಪಾವತಿ ನಿಷೇಧ ವಿನಾಯಿತಿ ನೀಡಬಾರದು ಎನ್ನುತ್ತಿದ್ದರೆ ಸಾರಿಗೆ ವಾಹನಗಳ ಒಕ್ಕೂಟಗಳು ವಿನಾಯಿತಿ ನೀಡುವಂತೆ ಆರ್​ಬಿಐ ಮುಂದೆ ಬೇಡಿಕೆ ಇಟ್ಟಿವೆ. ಈಗ ಕೇಂದ್ರೀಯ ಬ್ಯಾಂಕ್ ಇಕ್ಕಳದಲ್ಲಿ ಸಿಲುಕಿದಂತಾಗಿದೆ.

ಕೋವಿಡ್ -19ನಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸದೆ ಸಾಲಗಾರರ ಸಾಲ ವಿನಾಯಿತಿ ವಿಸ್ತರಣೆಯು ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದು ಎಂದು ರಿಸರ್ವ್ ಬ್ಯಾಂಕ್ ಆಗಸ್ಟ್ 31ರ ನಂತರ ಬ್ಯಾಂಕ್ ಸಾಲಗಳ ಮರುಪಾವತಿಸುವ ನಿಷೇಧ ವಿಸ್ತರಿಸುವುದು ಅಸಂಭವ ಎಂದು ಮೂಲಗಳು ತಿಳಿಸಿವೆ.

ಸಾಮಾನ್ಯ ವ್ಯವಹಾರ ಚಟುವಟಿಕೆಗಳ ಅಡೆತಡೆ ಮತ್ತು ವ್ಯಕ್ತಿಗಳು ಹಣಕಾಸಿನ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡಲು 2020ರ ಮಾರ್ಚ್ 1 ರಿಂದ ಆರು ತಿಂಗಳವರೆಗೆ ಸಾಲ ಮರುಪಾವತಿಯನ್ನು ಆರ್‌ಬಿಐ ನಿಷೇಧ ಘೋಷಿಸಿತ್ತು. ಆರು ತಿಂಗಳ ನಿಷೇಧದ ಅವಧಿ ಆಗಸ್ಟ್ 31ರಂದು ಕೊನೆಗೊಳ್ಳುತ್ತದೆ.

ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಸಾಲಗಾರರಿಗೆ ಇದು ತಾತ್ಕಾಲಿಕ ನೆರವಾಗಿದೆ. ಆರು ತಿಂಗಳಿಗಿಂತ ಹೆಚ್ಚಿನ ಅವಧಿಯ ನಿಷೇಧವು ಸಾಲಗಾರರ ಸಾಲ ವರ್ತನೆಯ ಮೇಲೆ ಪರಿಣಾಮ ಬೀರಬಹುದು. ನಿಗದಿತ ಪಾವತಿಗಳನ್ನು ಪುನರಾರಂಭಿಸಿದ ನಂತರ ಅಪಾಯಗಳು ಹೆಚ್ಚಾಗಬಹುದು ಎಂದು ಮೂಲಗಳು ತಿಳಿಸಿವೆ.

ಎಚ್‌ಡಿಎಫ್‌ಸಿ ಲಿಮಿಟೆಡ್‌ನ ಅಧ್ಯಕ್ಷ ದೀಪಕ್ ಪರೇಖ್ ಮತ್ತು ಕೋಟಾಕ್ ಮಹೀಂದ್ರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಉದಯ್ ಕೋಟಾಕ್ ಸೇರಿದಂತೆ ಹಲವು ಬ್ಯಾಂಕರ್‌ಗಳು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರನ್ನು ನಿಷೇಧದ ಅವಧಿ ವಿಸ್ತರಿಸದಂತೆ ಕೋರಿದ್ದು, ಅನೇಕರು ಈ ಸೌಲಭ್ಯದ ಅನಗತ್ಯ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು.

ಠೇವಣಿದಾರರ ಹಿತಾಸಕ್ತಿ ಕಾಪಾಡುವುದು ಒಂದು ಕಡೆ ಆದರೆ ಆರ್ಥಿಕ ಸ್ಥಿರತೆಯನ್ನು ಉಳಿಸಿಕೊಳ್ಳುವುದು ಮತ್ತೊಂದು ಕಡೆ ಇದೆ. ವ್ಯವಹಾರಗಳಿಗೆ ಬಾಳಿಕೆ ಬರುವ ಪರಿಹಾರ ನೀಡುವ ಮೂಲಕ ಕಾರ್ಯಸಾಧ್ಯವಾದ ವ್ಯವಹಾರಗಳ ಆರ್ಥಿಕ ಮೌಲ್ಯವನ್ನು ಕಾಪಾಡಬೇಕಿದೆ ಎಂದು ಮೂಲಗಳು ತಿಳಿಸಿವೆ.

ABOUT THE AUTHOR

...view details