ನವದೆಹಲಿ: ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವಾದ ಭಾರತದಲ್ಲಿ ಸುದೀರ್ಘ ಬೆಳವಣಿಗೆಯು ಮಂದಗತಿಯಲ್ಲಿದ್ದು, ಇದನ್ನು ಹಿಮ್ಮೆಟ್ಟಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಯತ್ನಿಸುತ್ತಿದೆ. ಕೇಂದ್ರ ಬ್ಯಾಂಕ್ ಹಣದುಬ್ಬರ ಏರಿಕೆಯ ಹೊರತಾಗಿಯೂ ಡಿಸೆಂಬರ್ 5ರಂದು ಸತತ ಆರನೇ ಬಾರಿಗೆ ಬಡ್ಡಿದರ ಕಡಿತಗೊಳಿಸುವ ಸಾಧ್ಯತೆಯಿದೆ.
ಆರ್ಥಿಕತೆ ಸರಿದೂಗಿಸಲು ಮತ್ತೆ ಬಡ್ಡಿ ದರ ಕಡಿತ..! ಸಾಲದ EVM ಬಡ್ಡಿ ಇಳಿಕೆ - ಆರ್‌ಬಿಐ ಬಡ್ಡಿ ದರ
10 ಮಂದಿ ಅರ್ಥಶಾಸ್ತ್ರಜ್ಞರ ಪೈಕಿ 8 ಜನ ಮತ್ತು ಕೋಶ ಮುಖ್ಯಸ್ಥರು ಮುಂದೆ ನಡೆಯಲಿರುವ ಆರ್‌ಬಿಐನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ರೆಪೊ ದರ ಕಡಿತಗೊಳಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಆರ್‌ಬಿಐ ಬ್ಯಾಂಕ್ಗಳಿಗೆ ಸಾಲ ನೀಡುತ್ತದೆ 25 ಬೇಸಿಸ್ ಪಾಯಿಂಟ್‌ಗಳಿಂದ (ಬಿಪಿಎಸ್) ಶೇ 4.9ಕ್ಕೆ ಇಳಿಸಲಿದೆ. ಆರ್‌ಬಿಐ 15 ಬಿಪಿಎಸ್ ಕಡಿತಗೊಳಿಸುತ್ತದೆ ಎಂದು ಇಬ್ಬರು ಆರ್ಥಿಕ ತಜ್ಞರು ನಿರೀಕ್ಷಿಸಿದ್ದಾರೆ.
![ಆರ್ಥಿಕತೆ ಸರಿದೂಗಿಸಲು ಮತ್ತೆ ಬಡ್ಡಿ ದರ ಕಡಿತ..! ಸಾಲದ EVM ಬಡ್ಡಿ ಇಳಿಕೆ RBI](https://etvbharatimages.akamaized.net/etvbharat/prod-images/768-512-5242873-thumbnail-3x2-rbi.jpg)
10 ಮಂದಿ ಅರ್ಥಶಾಸ್ತ್ರಜ್ಞರ ಪೈಕಿ 8 ಜನ ಮತ್ತು ಕೋಶ ಮುಖ್ಯಸ್ಥರು ಮುಂದೆ ನಡೆಯಲಿರುವ ಆರ್‌ಬಿಐನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ರೆಪೊ ದರ ಕಡಿತಗೊಳಿಸುತ್ತದೆ ಎಂದು ನಿರೀಕ್ಷಿಸಿದ್ದಾರೆ. ಆರ್‌ಬಿಐ ಬ್ಯಾಂಕ್ಗಳಿಗೆ ಸಾಲ ನೀಡುತ್ತದೆ 25 ಬೇಸಿಸ್ ಪಾಯಿಂಟ್‌ಗಳಿಂದ (ಬಿಪಿಎಸ್) ಶೇ 4.9ಕ್ಕೆ ಇಳಿಸಲಿದೆ. ಆರ್‌ಬಿಐ 15 ಬಿಪಿಎಸ್ ಕಡಿತಗೊಳಿಸುತ್ತದೆ ಎಂದು ಇಬ್ಬರು ನಿರೀಕ್ಷಿಸಿದ್ದಾರೆ.
ಆರ್ಥಿಕ ಬೆಳವಣಿಗೆಯು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 4.5ಕ್ಕೆ ಇಳಿದಿದ್ದು, ಇದು 2013ರ ನಂತರದ ಅತ್ಯಂತ ದುರ್ಬಲವಾದ ಬೆಳವಣಿಗೆಯಾಗಿದೆ. ಈ ವರ್ಷದ ನೀತಿ ದರಗಳಲ್ಲಿ 135 ಬಿಪಿಎಸ್ ಕಡಿತಗೊಂಡಿದ್ದರೂ ದಾಖಲೆಯ ಕೆಟ್ಟ ಸಾಲಗಳಿಂದ ಭಾರತೀಯ ಬ್ಯಾಂಕ್ಗಳು ಬಳಲುತ್ತಿವೆ. ಬಡ್ಡಿ ದರ ಇಳಿಕೆಯಾದರೆ ಗೃಹ, ವಾಹನ, ಶೈಕ್ಷಣಿಕ ಸಾಲದ ಇವಿಎಂ ಬಡ್ಡಿ ದರದಲ್ಲಿ ಇಳಿಕೆಯಾಗಲಿದೆ. ಬ್ಯಾಂಕ್ಗಳಲ್ಲಿ ಗ್ರಾಹಕರು ಇರಿಸುವ ಠೇವಣಿ ಮೇಲಿನ ಬಡ್ಡಿ ಸಹ ತಗ್ಗಲಿದೆ.