ಮುಂಬೈ:ಆರ್ಬಿಐ ಇಂದು ತನ್ನ ಆರ್ಥಿಕ ವರದಿ ಬಿಡುಗಡೆ ಮಾಡಿದ್ದು, ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿ ಕಾಪಾಡಿಕೊಂಡಿದೆ.ಕೊರೊನಾ ಆರ್ಭಟದ ಹಿನ್ನೆಲೆಯಲ್ಲಿ ಈ ಕೇಂದ್ರ ಬ್ಯಾಂಕ್ ಈ ನಿರ್ಧಾರ ಕೈಗೊಂಡಿದೆ.
ಈ ಬಾರಿಯೂ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದ ಆರ್ಬಿಐ
ಮಹಾಮಾರಿ ಕೊರೊನಾ ವೈರಸ್ ಹಾವಳಿ ನಡುವೆ ಕೂಡ ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ
ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್
ಬೆಂಚ್ಮಾರ್ಕ್ನ ಮರು ಖರೀದಿ ದರದಲ್ಲೂ ಯಾವುದೇ ಬದಲಾವಣೆ ಮಾಡಿಲ್ಲ. ಅದನ್ನು ಈ ಹಿಂದಿನಂತೆಯೇ ಶೇ 4ರಷ್ಟೇ ಮುಂದುವರಿಸಲಾಗಿದೆ. ಆರ್ಥಿಕ ಬೆಳವಣಿಗೆಗೆ ಪೂರಕವಾಗುವ ನಿಟ್ಟಿನಲ್ಲಿ ಆರ್ಬಿಐ ಈ ಎಲ್ಲ ಕ್ರಮಗಳನ್ನ ತೆಗೆದುಕೊಂಡಿದೆ. ಇನ್ನು ದೇಶದ ಜಿಡಿಪಿ ಬಗ್ಗೆ ಮಾಹಿತಿ ನೀಡಿದ್ದು, ಈ ತ್ರೈಮಾಸಿಕದಲ್ಲೂ ಆರ್ಥಿಕ ಬೆಳವಣಿಗೆ ದರ 10.5 ರಷ್ಟೇ ದಾಖಲಾಗಿದ್ದು, ಅದು ಸಹ ಯಥಾಸ್ಥಿತಿಯಲ್ಲೇ ಇದೆ.
ಹಣದುಬ್ಬರವು ಜನವರಿ-ಮಾರ್ಚ್ ಅವಧಿಯಲ್ಲಿ ಶೇ.5 ರಿಂದ ಶೇ.5.2 ರವರೆಗೆ ಏರಿಕೆಯಾಗಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.