ಮುಂಬೈ: ಕೋವಿಡ್ -19 ಬಿಕ್ಕಟ್ಟನ್ನು ಎದುರಿಸಲು ಕೇಂದ್ರೀಯ ಬ್ಯಾಂಕ್ ಕೈಗೊಂಡ ವಿವಿಧ ವಿತ್ತೀಯ ಮತ್ತು ನಿಯಂತ್ರಣ ಕ್ರಮಗಳ ಪರಿಣಾಮದ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ್ ದಾಸ್ ಅವರು ಮಂಡಳಿ ಸದಸ್ಯರಿಗೆ ವಿವರಿಸಿದರು.
ಆರ್‌ಬಿಐನ ಕೇಂದ್ರ ಮಂಡಳಿಯು ಪ್ರಸ್ತುತ ಸ್ಥೂಲ ಆರ್ಥಿಕ ಪರಿಸ್ಥಿತಿ ಮತ್ತು ಸಾಂಕ್ರಾಮಿಕ ರೋಗದಿಂದ ಉಂಟಾಗುತ್ತಿರುವ ಸವಾಲುಗಳನ್ನು ಚರ್ಚಿಸುತ್ತಿದೆ ಎಂದು ವಿಬಿ ಕಾನ್ಫರೆನ್ಸ್ ಮೂಲಕ ನಡೆದ ಸಭೆಯ ಬಳಿಕ ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ. ಗವರ್ನರ್ ಮತ್ತು ಡೆಪ್ಯುಟಿ ಗವರ್ನರ್‌ಗಳು ಒಟ್ಟಾರೆ ಸ್ಥೂಲ ಆರ್ಥಿಕ ಪರಿಸ್ಥಿತಿಗಳಾದ ದೇಶಿಯ ಮತ್ತು ಜಾಗತಿಕ ಆರ್ಥಿಕ ವಲಯದ ವಸ್ತುಸ್ಥಿತಿ ಹಾಗೂ ಕೋವಿಡ್-19 ಸಂದರ್ಭದಲ್ಲಿ ಆರ್‌ಬಿಐ ತೆಗೆದುಕೊಂಡ ವಿವಿಧ ವಿತ್ತೀಯ, ನಿಯಂತ್ರಣ ಮತ್ತು ಇತರ ಕ್ರಮಗಳ ಪ್ರಭಾವದ ಬಗ್ಗೆ ಮಂಡಳಿಗೆ ವಿವರಿಸಿದ್ದಾರೆ ಎಂದು ಆರ್‌ಬಿಐ ಹೇಳಿದೆ.
ಆರ್‌ಬಿಐ ಮಂಡಳಿಯು ಪ್ರಸ್ತುತ ಆರ್ಥಿಕ ಪರಿಸ್ಥಿತಿ ಮತ್ತು ಸಾಂಕ್ರಾಮಿಕ ರೋಗದಿಂದ ಉಂಟಾಗುತ್ತಿರುವ ಸವಾಲುಗಳ ಬಗ್ಗೆಯೂ ಚರ್ಚಿ ನಡೆಸಿತು. ಇದು ಆರ್‌ಬಿಐನ ಚಟುವಟಿಕೆಗಳು (ಜುಲೈ 2019- 2020 ಜೂನ್), ಮುಂದಿನ ಬಜೆಟ್ ವರ್ಷದ 2020ರ ಜುಲೈಯಿಂದ 2021ರ ಮಾರ್ಚ್‌ವರೆಗೆ (ಸರ್ಕಾರದ ಹಣಕಾಸು ವರ್ಷ) ತೆಗೆದುಕೊಳ್ಳಬೇಕಾದ ಇತರ ನೀತಿ ಮತ್ತು ಕಾರ್ಯಾಚರಣೆಯ ವಿಷಯಗಳ ಬಗ್ಗೆಯೂ ಮಾತನಾಡಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಪರಿಣಾಮ ಎದುರಿಸಲು ಬಡ್ಡಿ ದರ ಕಡಿತಗೊಳಿಸುವುದು ಮತ್ತು ಉದ್ಯಮ ಬೆಂಬಲಕ್ಕೆ ಸಾಲ ನೀಡಿಕೆಯಂತಹ ಕ್ರಮಗಳು ಚರ್ಚೆಗೆ ಬಂದವು. ಡೆಪ್ಯುಟಿ ಗವರ್ನರ್‌ಗಳಾದ ಬಿ ಪಿ ಕನುಂಗೊ, ಮಹೇಶ್ ಕುಮಾರ್ ಜೈನ್ ಮತ್ತು ಮೈಕೆಲ್ ದೇಬಬ್ರತಾ ಪಾತ್ರಾ ಮತ್ತು ಕೇಂದ್ರ ಮಂಡಳಿಯ ನಿರ್ದೇಶಕರು ಮತ್ತು ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಇದು ಆರ್‌ಬಿಐನ ಕೇಂದ್ರ ಮಂಡಳಿಯ 583ನೇ ಸಭೆಯಾಗಿದೆ.