ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ಇಂದು ನಡೆದ ಎರಡನೇ ದ್ವೈಮಾಸಿಕ ಹಣಕಾಸು ಯೋಜನೆ ಸಭೆಯಲ್ಲಿ ರೆಪೋ ದರವನ್ನು ಶೇ. 0.25ರಷ್ಟು ಕಡಿತಗೊಳಿಸಿದೆ.
ಹಣಕಾಸು ಯೋಜನಾ ಸಮಿತಿಯ ಈ ನಿರ್ಧಾರದಿಂದ ಬ್ಯಾಂಕ್ಗಳ ಸಾಲದ ದರ ಕಡಿಮೆಯಾಗಲಿದ್ದು, ಇದರಿಂದ ಬ್ಯಾಂಕ್ಗಳು ಮನೆ, ಕಾರು, ಕಾರ್ಪೊರೇಟ್ ಸಾಲದ ಇಎಂಐ ಮೊತ್ತವನ್ನು ಕಡಿಮೆ ಮಾಡಲಿವೆ.
ಈವರೆಗೆ ರೆಪೋ ದರವು ಶೇ. 6ರಷ್ಟಿದ್ದು, 0.25ರಷ್ಟು ಕಡಿತಗೊಂಡು ಶೇ. 5.75ಕ್ಕೆ ಇಳಿಯಲಿದೆ. ಎಲ್ಎಎಫ್ ಶೇ. 5.50 ಹಾಗೂ ಸಿಆರ್ಆರ್ ಶೇ. 4ರಷ್ಟಾಗಲಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಸಮಿತಿ ಸಭೆಯಲ್ಲಿ ಸದಸ್ಯರಾದ ಡಾ. ಪಮಿ ದುವಾ, ಡಾ. ರವೀಂದ್ರ ಹೆಚ್. ಧೊಲಕಿಯಾ, ಡಾ. ಮೈಕಲ್ ದೆಬ್ರಾತಾ ಪಾತ್ರ, ಡಾ. ಚೇತನ್ ಘಾಟೆ ಹಾಗೂ ಡಾ. ವಿರಾಲ್ ವಿ ಆಚಾರ್ಯ ಭಾಗವಹಿಸಲಿದ್ದಾರೆ. ಇಂದು ನಡೆದ ಸಭೆಯಲ್ಲಿ ಎಲ್ಲರೂ ಈ ನಿರ್ಧಾರದ ಪರ ಮತ ಹಾಕಿದ್ದಾರೆ ಎನ್ನಲಾಗಿದೆ.
ಇನ್ನು ಎಟಿಎಂ ಶುಲ್ಕಗಳ ಬಗ್ಗೆ ಅಧ್ಯಯನ ನಡೆಸಲು ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ನ ಅಧಕ್ಷರಡಿ ಷೇರುದಾರರುಳ್ಳ ಸಮಿಮಿ ರಚಿಸಿ, 2 ತಿಂಗಳಲ್ಲಿ ವರದಿ ಪಡೆಯಲಾಗುವುದು ಎಂದಿದ್ದಾರೆ.