ಕರ್ನಾಟಕ

karnataka

ETV Bharat / business

ಹೊಸ ಸವಾಲುಗಳನ್ನು ಎದುರಿಸಲು ಸಿದ್ಧರಾಗುವಂತೆ ಬ್ಯಾಂಕುಗಳಿಗೆ ಆರ್​ಬಿಐ ಸೂಚನೆ - ಆರ್​ಬಿಐ ಗವರ್ನರ್​ ಶಕ್ತಿಕಾಂತ್ ದಾಸ್

ಕೇಂದ್ರ ಮಂಡಳಿ ಸಭೆಯಲ್ಲಿ ಪಾಲ್ಗೊಳ್ಳಲು ಒಡಿಶಾದ ಭುವನೇಶ್ವರ್‌ಗೆ ಆಗಮಿಸಿದ್ದ ಭಾರತೀಯ ರಿಸರ್ವ್​ ಬ್ಯಾಂಕ್​ನ ಗವರ್ನರ್ ಶಕ್ತಿಕಾಂತ ದಾಸ್, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಭೇಟಿ ಮಾಡಿ ಬ್ಯಾಂಕಿಂಗ್ ಸಂಬಂಧಿತ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.

RBI Governor
ಆರ್​ಬಿಐ ಗವರ್ನರ್​

By

Published : Dec 13, 2019, 5:15 PM IST

ಭುವನೇಶ್ವರ: ಮಾಧ್ಯಮಗಳಲ್ಲಿ ವರದಿಯಾದಂತೆ ಬ್ಯಾಂಕ್​ಗಳನ್ನು ಎಚ್ಚರಿಕೆಯ ಚೌಕಟ್ಟಿನಲ್ಲಿ ಇರಿಸಿಲ್ಲ. ಆದರೆ, ಹೊಸ ಸವಾಲುಗಳನ್ನು ಎದುರಿಸಲು ಸಾಲದಾತರು (ಬ್ಯಾಂಕ್​ಗಳು) ಸಿದ್ಧರಾಗುವಂತೆ ಸೂಚಿಸಲಾಗಿದೆ ಎಂದು ಆರ್​ಬಿಐ ಸ್ಪಷ್ಟನೆ ನೀಡಿದೆ.

ಕೇಂದ್ರ ಮಂಡಳಿ ಸಭೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಭಾರತೀಯ ರಿಸರ್ವ್​ ಬ್ಯಾಂಕ್​ನ ಗವರ್ನರ್ ಶಕ್ತಿಕಾಂತ ದಾಸ್, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಭೇಟಿ ಮಾಡಿ ಬ್ಯಾಂಕಿಂಗ್ ಸಂಬಂಧಿತ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.

ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕೆಲವು ಮಾಧ್ಯಮಗಳು ವರದಿ ಮಾಡಿದಂತೆ ಬ್ಯಾಂಕ್​ಗಳನ್ನು ಎಚ್ಚರಿಸುವಂತಹ ಸ್ಥಿತಿಯಲ್ಲಿ ಆರ್​ಬಿಐ ಇರಿಸಿಲ್ಲ. ಹೊಸ ಸವಾಲುಗಳನ್ನು ಎದುರಿಸಲು ಬ್ಯಾಂಕ್​ಗಳು ಸಿದ್ಧರಾಗಿರಬೇಕು ಎಂದು ನಾವು ಹೇಳಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ಹಣಕಾಸಿನ ಸೇರ್ಪಡೆ, ರಾಜ್ಯದ ಬ್ಯಾಂಕ್ ಶಾಖೆಗಳು, ಕೃಷಿ ಕ್ಷೇತ್ರಕ್ಕೆ ಸಾಲದ ಹರಿವು ಮತ್ತು ಒಡಿಶಾದ ಇ-ಕುಬರ್ ಪ್ಲಾಟ್‌ಫಾರ್ಮ್ ಮೂಲಕ ಡಿಬಿಟಿಯನ್ನು (ನೇರ ನಗದು ವರ್ಗಾವಣೆ) ಸುವ್ಯವಸ್ಥಿತಗೊಳಿಸುವುದು ಕುರಿತು ಚರ್ಚಿಸಿದ್ದೇವೆ ಎಂದು ದಾಸ್ ಹೇಳಿದರು.

ABOUT THE AUTHOR

...view details