ಕರ್ನಾಟಕ

karnataka

ETV Bharat / business

ಮ್ಯೂಚುವಲ್ ಫಂಡ್​ಗಳಿಗೆ 50 ಸಾವಿರ ಕೋಟಿ ಸಾಲ ಸೌಲಭ್ಯ; ಆರ್​ಬಿಐ ಘೋಷಣೆ - RBI announces Rs 50,000 cr special liquidity facility

ಮ್ಯೂಚುವಲ್ ಫಂಡ್​ಗಳ ಮೇಲಿನ ಒತ್ತಡ ಕಡಿಮೆಗೊಳಿಸುವ ಸಲುವಾಗಿ ರಿಸರ್ವ್​ ಬ್ಯಾಂಕ್ ಆಫ್ ​ ಇಂಡಿಯಾ (ಆರ್​ಬಿಐ) 50 ಸಾವಿರ ಕೋಟಿ ರೂಪಾಯಿ ವಿಶೇಷ ಸಾಲ ಸೌಲಭ್ಯ ಘೋಷಿಸಿದೆ.

RBI announces Rs 50,000 cr special liquidity facility for mutual funds
RBI announces Rs 50,000 cr special liquidity facility for mutual funds

By

Published : Apr 27, 2020, 2:11 PM IST

ಮುಂಬೈ :ಮ್ಯೂಚುವಲ್ ಫಂಡ್​ಗಳಿಗೆ 50 ಸಾವಿರ ಕೋಟಿ ವಿಶೇಷ ಅಗ್ಗದ ಸಾಲ ನೀಡಲು ರಿಸರ್ವ್​ ಬ್ಯಾಂಕ್ ಆಫ್​ ಇಂಡಿಯಾ (ಆರ್​ಬಿಐ) ಮುಂದಾಗಿದೆ. ಫ್ರಾಂಕ್ಲಿನ್ ಟೆಂಪಲ್ಟನ್ ಮ್ಯೂಚುವಲ್ ಫಂಡ್ ಆರು ಸಾಲ ಯೋಜನೆಗಳನ್ನು ಮುಚ್ಚಲು ನಿರ್ಧರಿಸಿದ ಬೆನ್ನಲ್ಲೇ ಆರ್​ಬಿಐ ಈ ನಿರ್ಧಾರ ಪ್ರಕಟಿಸಿದೆ.

ಕೊವಿಡ್​-19 ಪರಿಣಾಮ ಬಂಡವಾಳ ಮಾರುಕಟ್ಟೆಗಳಲ್ಲಿ ಉಂಟಾದ ಏರಿಳಿತವು ಮ್ಯೂಚುವಲ್ ಫಂಡ್​ (ಎಂಎಫ್​) ಗಳ ಮೇಲೆ ಒತ್ತಡ ಹೇರಿದೆ. ಹೀಗಾಗಿ, ಕೆಲವೊಂದು ಮ್ಯೂಚುವಲ್ ಫಂಡ್​ ಸಾಲ ಯೋಜನೆಗಳು ಮುಚ್ಚುವ ಸಂಭವವಿದೆ. ಆದ್ದರಿಂದ, ಎಂಎಫ್​ಗಳ ಮೇಲಿನ ಒತ್ತಡ ಕಡಿಮೆಗೊಳಿಸಲು 50 ಸಾವಿರ ಕೋಟಿ ರೂ. ‘ಗಳ ವಿಶೇಷ ಸಾಲ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ ಎಂದಿದೆ.

ಕೋವಿಡ್​ ಸಂದರ್ಭದಲ್ಲಿ ಆರ್ಥಿಕತೆ ಮೇಲೆ ಬೀರುವ ಪರಿಣಾಮ ತಗ್ಗಿಸಲು ಮತ್ತು ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆರ್​ಬಿಐ ತಿಳಿಸಿದೆ.

ಈ ಸಂಬಂಧ ನಿನ್ನೆಯಷ್ಟೇ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಕೇಂದ್ರ ಸರ್ಕಾರಕ್ಕೆ ವಿಶೇಷ ವ್ಯವಸ್ಥೆ ಮಾಡಿ ನಿಗಾ ವಹಿಸುವಂತೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.

For All Latest Updates

TAGGED:

ABOUT THE AUTHOR

...view details