ನವದೆಹಲಿ: ಅಯೋಧ್ಯೆಯ ರಾಮ ಮಂದಿರವನ್ನು ಸುಮಾರು ಮೂರು ವರ್ಷಗಳಲ್ಲಿ ನಿರ್ಮಿಸಲಾಗುವುದು. ನಿರ್ಮಾಣ ವೆಚ್ಚ 1100 ಕೋಟಿ ರೂ. ಮೀರುತ್ತದೆ ಎಂದು ದೇವಾಲಯದ ಟ್ರಸ್ಟ್‌ನ ಪ್ರಮುಖ ಕಾರ್ಯಕಾರಿಣಿ ತಿಳಿಸಿದ್ದಾರೆ.
ಮುಖ್ಯ ದೇವಾಲಯವನ್ನು ಮೂರರಿಂದ ಮೂರೂವರೆ ವರ್ಷಗಳಲ್ಲಿ ನಿರ್ಮಿಸಲಾಗುವುದು. ಇದಕ್ಕೆ 300-400 ಕೋಟಿ ರೂ. ವೆಚ್ಚವಾಗಲಿದೆ. ಅಲ್ಲಿನ ಸಂಪೂರ್ಣ 70 ಎಕರೆ ಜಮೀನಿನ ಅಭಿವೃದ್ಧಿಗೆ 1,100 ಕೋಟಿ ರೂ. ಮೀರಲಿದೆ ಎಂದು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಯ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ ಹೇಳಿದರು.
ದೇವಾಲಯದ ಕೊಡುಗೆ ಪಡೆಯಲು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ನಿವಾಸಕ್ಕೆ ಭೇಟಿ ನೀಡುತ್ತೀರಾ ಎಂದು ಪ್ರಶ್ನಿಸಿದಾಗ, ನಾನು ಅಲ್ಲಿ ಅಗೌರವಕ್ಕೆ ಒಳಗಾಗುವುದಿಲ್ಲ ಎಂದು ಯಾರಾದರೂ ಖಾತರಿಪಡಿಸಿದರೆ ನಾನು ಅಲ್ಲಿಗೆ ತೆರಳಲು ಸಿದ್ಧನಿದ್ದೇನೆ ಎಂದು ಉತ್ತರಿಸಿದರು.
ಕೆಲವು ಕಾರ್ಪೊರೇಟ್ ಜನರಿಂದ (ದೇವಾಲಯದ ನಿರ್ಮಾಣಕ್ಕಾಗಿ) ಹಣ ಸಂಗ್ರಹಿಸಲು ನಮಗೆ ಸಾಧ್ಯವಾಯಿತು. ಕೆಲವು (ಕಾರ್ಪೊರೇಟ್) ಕುಟುಂಬಗಳು ನಮ್ಮನ್ನು ಸಂಪರ್ಕಿಸಿ (ದೇವಾಲಯ) ವಿನ್ಯಾಸಗಳನ್ನು ಹಸ್ತಾಂತರಿಸುವಂತೆ ವಿನಂತಿಸಿ ಮತ್ತು ದೇವಾಲಯದ ಯೋಜನೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು. ಆದರೆ, ನಾನು ಅವರ ವಿನಂತಿಯನ್ನು ವಿನಮ್ರವಾಗಿ ನಿರಾಕರಿಸಿದ್ದೇನೆ ಎಂದು ತಿಳಿಸಿದರು.