ಕರ್ನಾಟಕ

karnataka

ETV Bharat / business

ಪ್ರಯಾಣಿಕರಿಗೆ ಅವಕಾಶವಿಲ್ಲದೆ ಮುಂಬೈನಲ್ಲಿ 350 ರೈಲುಗಳ ಓಡಾಟ!

ಇಂದಿನಿಂದ ಮುಂಬೈಯಲ್ಲಿ ಲೋಕಲ್​ ರೈಲು ಸೇರಿ ಒಟ್ಟು 350 ಟ್ರೈನ್​ಗಳ ಸೇವೆ ಲಭ್ಯವಾಗುತ್ತಿದೆ. ರಾಜ್ಯ ಸರ್ಕಾರವು ಗುರುತಿಸಿದ ಅಗತ್ಯ ಸೇವಾ ಸಿಬ್ಬಂದಿಗೆ ಸಂಚಾರ ಭಾಗ್ಯ ದೊರೆಯಲಿದೆ. ಕೇಂದ್ರ, ಐಟಿ, ಜಿಎಸ್‌ಟಿ, ಕಸ್ಟಮ್ಸ್, ಅಂಚೆ, ರಾಷ್ಟ್ರೀಕೃತ ಬ್ಯಾಂಕ್​ಗಳು, ಎಂಬಿಪಿಟಿ (ಮುಂಬೈ ಪೋರ್ಟ್ ಟ್ರಸ್ಟ್), ನ್ಯಾಯಾಂಗ, ರಕ್ಷಣಾ ಮತ್ತು ರಾಜ್ ಭವನದ ಉದ್ಯೋಗಿಗಳಿಗೆ ಅವಕಾಶ ನೀಡಲಾಗಿದೆ. ಸಾಮಾನ್ಯ ಪ್ರಯಾಣಿಕರಿಗೆ ಇನ್ನೂ ಯಾವುದೇ ಸೇವೆಗಳಿಲ್ಲ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ.

Train
ರೈಲ್ವೆ

By

Published : Jul 1, 2020, 4:49 AM IST

ನವದೆಹಲಿ: ಭಾರತೀಯ ರೈಲ್ವೆಯು ಬುಧವಾರದಿಂದ (ಇಂದಿನಿಂದ) ಮುಂಬೈನಲ್ಲಿ ಉಪನಗರ ಸೇವೆಗಳ ಜಾಲ ವಿಸ್ತರಿಸಲಿದ್ದು, ಕೇಂದ್ರ ಮತ್ತು ಪಶ್ಚಿಮ ರೈಲ್ವೆ ವಲಯಗಳಲ್ಲಿ ಒಟ್ಟು 350 ರೈಲುಗಳನ್ನು ಓಡಿಸಲಾಗುವುದು ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಆದರೆ, ಈ ರೈಲುಗಳು ಮಹಾರಾಷ್ಟ್ರ ಸರ್ಕಾರದಿಂದ ಗುರುತಿಸಲ್ಪಟ್ಟ ಅಗತ್ಯ ಸಿಬ್ಬಂದಿ ಸೇವೆಗೆ ಮಾತ್ರ ಸೀಮಿತವಾಗಿರುತ್ತವೆ. ಕೊರೊನಾ ವೈರಸ್ ಪ್ರೇರೇಪಿತ ರಾಷ್ಟ್ರವ್ಯಾಪಿ ಲಾಕ್‌ಡೌನ್​ನಿಂದ ಸ್ಥಳೀಯ ಹಾಗೂ ಎಲ್ಲ ರಾಷ್ಟ್ರೀಯ ಪ್ರಯಾಣಿಕ ರೈಲುಗಳ ಸಂಚಾರ ಮಾರ್ಚ್ 23ರಿಂದ ಸ್ಥಗಿತಗೊಂಡಿವೆ.

ಇಂದಿನಿಂದ ಮುಂಬೈಯಲ್ಲಿ ಲೋಕಲ್​ ರೈಲು ಸೇರಿ ಒಟ್ಟು 350 ಟ್ರೈನ್​ಗಳ ಸೇವೆ ಲಭ್ಯವಾಗುತ್ತಿವೆ. ರಾಜ್ಯ ಸರ್ಕಾರವು ಗುರುತಿಸಿದ ಅಗತ್ಯ ಸೇವಾ ಸಿಬ್ಬಂದಿಗೆ ಸಂಚಾರ ಭಾಗ್ಯ ದೊರೆಯಲಿದೆ. ಕೇಂದ್ರ, ಐಟಿ, ಜಿಎಸ್‌ಟಿ, ಕಸ್ಟಮ್ಸ್, ಅಂಚೆ, ರಾಷ್ಟ್ರೀಕೃತ ಬ್ಯಾಂಕ್​ಗಳು, ಎಂಬಿಪಿಟಿ (ಮುಂಬೈ ಪೋರ್ಟ್ ಟ್ರಸ್ಟ್), ನ್ಯಾಯಾಂಗ, ರಕ್ಷಣಾ ಮತ್ತು ರಾಜ್ ಭವನದ ಉದ್ಯೋಗಿಗಳಿಗೆ ಅವಕಾಶ ನೀಡಲಾಗಿದೆ. ಸಾಮಾನ್ಯ ಪ್ರಯಾಣಿಕರಿಗೆ ಇನ್ನೂ ಯಾವುದೇ ಸೇವೆಗಳಿಲ್ಲ ಎಂದು ಗೋಯಲ್ ಟ್ವೀಟ್ ಮಾಡಿದ್ದಾರೆ.

ಮುಂಬೈ ನಗರದ ಎರಡೂ ರೈಲ್ವೆ ವಲಯಗಳು ಜೂನ್ 15ರಿಂದ ಅಗತ್ಯ ಸಿಬ್ಬಂದಿಗೆ ತಮ್ಮ ಆಯ್ದ ಉಪನಗರ ಸೇವೆಗಳನ್ನು ಪುನರಾರಂಭಿಸಿವೆ. ಕೇಂದ್ರ ರೈಲ್ವೆಯ ಮುಂಬೈ ವಿಭಾಗದಲ್ಲಿ ಪ್ರಸ್ತುತ 200 ರೈಲುಗಳನ್ನು ಓಡಿಸಲಾಗುತ್ತಿದೆ. ಬುಧವಾರದಿಂದ 150 ರೈಲುಗಳನ್ನು ಸೇರ್ಪಡೆ ಮಾಡಲಾಗಿದ್ದು, ಒಟ್ಟು 350 ರೈಲು ಸಂಚರಿಸಲಿವೆ. ಈ ರೈಲುಗಳು ಪ್ರಮುಖ ನಿಲ್ದಾಣಗಳಲ್ಲಿ ಮಾತ್ರವೇ ನಿಲ್ಲುತ್ತವೆ.

ABOUT THE AUTHOR

...view details