ಕರ್ನಾಟಕ

karnataka

ETV Bharat / business

ಹೆಚ್ಚಿದ ದಾಸ್ತಾನು: ರೈಲು ಕೋಚ್‌ಗಳ ಉತ್ಪಾದನೆ ಶೇ.46ರಷ್ಟು ಕಡಿತಕ್ಕೆ ರೈಲ್ವೆ ಮಂಡಳಿ ನಿರ್ಧಾರ..ಕಾರಣ? - ರೈಲು

2023 ಹಾಗೂ 2024ನೇ ಆರ್ಥಿಕ ವರ್ಷದಲ್ಲಿ ರೈಲು ಕೋಚ್‌ಗಳ ಉತ್ಪಾದನೆಯನ್ನು ಶೇಕಡಾ 46 ರಷ್ಟು ಕಡಿತ ಮಾಡಲು ರೈಲ್ವೆ ಮಂಡಳಿ ನಿರ್ಧಾರ ಕೈಗೊಂಡಿದೆ. 2022-23ನೇ ಸಾಲಿನಲ್ಲಿ 7,551 ಪ್ರಯಾಣಿಕರ ಕೋಚ್‌ಗಳು, 2023-24ನೇ ಸಾಲಿನಲ್ಲಿ 400 ಕೋಚ್‌ಗಳ ಕಡಿತಕ್ಕೆ ಮುಂದಾಗಿದೆ.

railways-to-cut-passenger-coach-production-by-46-per-cent
ಹೆಚ್ಚಿದ ದಾಸ್ತಾನು; ರೈಲು ಕೋಚ್‌ಗಳ ಉತ್ಪಾದನೆ ಶೇ.46ರಷ್ಟು ಕಡಿತಕ್ಕೆ ರೈಲ್ವೆ ಮಂಡಳಿ ನಿರ್ಧಾರ

By

Published : Aug 7, 2021, 3:36 PM IST

ನವದೆಹಲಿ: ಮುಂದಿನ ಎರಡು ವರ್ಷಗಳಲ್ಲಿ ಭಾರತೀಯ ರೈಲ್ವೆ ಪ್ರಯಾಣಿಕರ ಕೋಚ್ ಉತ್ಪಾದನೆಯನ್ನು ಅರ್ಧದಷ್ಟು ಕಡಿಮೆ ಮಾಡಲು ಮುಂದಾಗಿದೆ. ರಸ್ತೆ ಹಾಗೂ ವಾಯುಮಾರ್ಗಗಳ ಪೈಪೋಟಿಯಿಂದಾಗಿ ತನ್ನ ದಟ್ಟಣೆ ಕಡಿಮೆ ಮಾಡುತ್ತದೆ. ಈ ಸಂಬಂಧ ಸಭೆಯಲ್ಲಿ ಚರ್ಚಿಸಿರುವ ರೈಲ್ವೆ ಮಂಡಳಿ 2023 ಹಾಗೂ 2024ರ ಹಣಕಾಸು ವರ್ಷದಲ್ಲಿ ಕೋಚ್‌ ಉತ್ಪಾದನಾ ಕಾರ್ಯಕ್ರಮಗಳನ್ನು ಅಂತಿಮ ಗೊಳಿಸಲು ನಿರ್ಧಾರ ಕೈಗೊಂಡಿದೆ. ಅದರಲ್ಲೂ ನಾಲ್ಕು ಪ್ಯಾಸೆಂಜರ್ ಕೋಚ್ ಉತ್ಪಾದನೆಯನ್ನು 2024 ರಲ್ಲಿ ಶೇಕಡಾ 46 ಕ್ಕಿಂತಲೂ ಕಡಿಮೆ ಮಾಡಲು ನಿರ್ಧರಿಸಲಾಗಿದೆ.

ರೈಲ್ವೆಯ ಕೋಚ್ ತಯಾರಿಕೆ ವರ್ಷಕ್ಕೆ ಸುಮಾರು 6,000-7,000 ಯುನಿಟ್‌ಗಳ ಮಟ್ಟದಿಂದ ಕೇವಲ 4,000ಕ್ಕೆ ಕುಸಿಯುತ್ತದೆ. ವಾಸ್ತವವಾಗಿ ಪ್ಯಾಸೆಂಜರ್ ಕೋಚ್ ತಯಾರಿಕೆಯನ್ನು ಮುಂದಿನ ಆರ್ಥಿಕ ವರ್ಷ 2022-23ಕ್ಕೆ 7,551 ಯುನಿಟ್‌ಗಳಲ್ಲಿ ಇರಿಸಲಾಗಿದ್ದು ಇದು 2024ರ ಹಣಕಾಸು ವರ್ಷದಲ್ಲಿ ಕೇವಲ 4,027 ಯುನಿಟ್‌ಗಳಿಗೆ ಕುಸಿಯುತ್ತದೆ. ಜುಲೈ 28 ರ ಪತ್ರದ ಪ್ರಕಾರ ರೈಲ್ವೆ ಸಚಿವಾಲಯವು ಕೋಟ್‌ ಉತ್ಪಾದನಾ ನಾಲ್ಕು ಘಟಕಗಳಲ್ಲಿ ಸ್ಥಗಿತದ ಬಗ್ಗೆ ಪ್ರಧಾನ ವ್ಯವಸ್ಥಾಪಕರಿಗೆ ತಿಳಿಸಿದೆ.

ಇದನ್ನೂ ಓದಿ: Apple, ಸ್ಯಾಮ್‌ಸಂಗ್‌ ಹಿಂದಿಕ್ಕಿದ Xiaomi; ಮೊದಲ ಬಾರಿಗೆ ಜಗತ್ತಿನ ನಂಬರ್‌ ಒನ್‌ ಸ್ಮಾರ್ಟ್‌ಫೋನ್‌..!

ಉತ್ಪಾದನೆಯನ್ನು 2023 ರಲ್ಲಿ ಸುಮಾರು 5,489 ಯೂನಿಟ್‌ಗಳಿಂದ 2024ಕ್ಕೆ ಕೇವಲ 1,677 ಕ್ಕೆ ಇಳಿಸಲು ಪ್ರಸ್ತಾಪಿಸಲಾಗಿದೆ. ಇದು 70 ಪ್ರತಿಶತದಷ್ಟು ಕಡಿತವಾಗಿದೆ. ಪ್ರಸ್ತುತ ಲಿಂಕೆ ಹಾಫ್‌ಮನ್ ಬುಷ್ (ಎಲ್‌ಎಚ್‌ಬಿ) ಕೋಚ್‌ಗಳನ್ನು ಭಾರತೀಯ ರೈಲ್ವೆಯ ಉತ್ಪಾದನಾ ಘಟಕದಿಂದ ತಯಾರಿಸಲಾಗುತ್ತದೆ. ಇಂಟೆಗ್ರಲ್ ಕೋಚ್ ಫ್ಯಾಕ್ಟರಿ, ಪೆರಂಬೂರು(ಚೆನ್ನೈ) ರೈಲು ಕೋಚ್ ಫ್ಯಾಕ್ಟರಿ(ಕಪುರ್ತಲಾ) ಮೊಡರ್ನಾ ಕೋಚ್ ಫ್ಯಾಕ್ಟರಿ(ರಾಯಬರೇಲಿ) ಹಾಗೂ ಇದರ ಜೊತೆಗೆ ಸೆಂಟ್ರಲ್ ರೈಲ್ವೆ (ಲಾತೂರ್) ಮುಂಬಯಿ ಇಲ್ಲಿ ಕೂಡ ಸೌಲಭ್ಯವು ಕೆಲವು ಸ್ವಯಂ -ಚಾಲಿತ ಕೋಚ್‌ಗಳ ವಿನ್ಯಾಸಗಳನ್ನು ಮಾಡಲಾಗುತ್ತದೆ.

ಮೂಲಗಳ ಪ್ರಕಾರ ರೈಲ್ವೆ ಮಂಡಳಿಯು ಪ್ರಯಾಣಿಕರ ಕೋಚ್‌ಗಳ ಉತ್ಪಾದನೆಯನ್ನು ಕಡಿತಗೊಳಿಸಲು ನಿರ್ಧರಿಸಿದೆ. ಏಕೆಂದರೆ ಪ್ರಯಾಣಿಕರ ಚಲನೆಯ ಅಗತ್ಯತೆಯನ್ನು ಪೂರೈಸಲು ಈಗಿರುವ ದಾಸ್ತಾನು ಸಾಕಷ್ಟಿದೆ ಎಂದು ಪರಿಗಣಿಸಲಾಗಿದೆ. ಇದಲ್ಲದೇ, ರೈಲ್ವೇಸ್ ತನ್ನ ಸಂಚಾರವನ್ನು ರಸ್ತೆಮಾರ್ಗಗಳು ಮತ್ತು ವಾಯುಮಾರ್ಗಗಳಿಗೆ ದೊಡ್ಡ ಪ್ರಮಾಣದಲ್ಲಿ ಚಲಿಸುವುದನ್ನು ಮುನ್ಸೂಚಿಸುವುದರೊಂದಿಗೆ ಬೇಡಿಕೆಯ ಪರಿಸ್ಥಿತಿಗಳ ಮೇಲೆ ಸ್ಪಷ್ಟವಾದ ಚಿತ್ರಣವನ್ನು ಪಡೆಯದೆಯೇ ಕೋಚ್‌ಗಳ ಉತ್ಪಾದನೆಯನ್ನು ಹೆಚ್ಚಿಸುವುದರೊಂದಿಗೆ ಹೆಚ್ಚು ಖರ್ಚು ಮಾಡಲು ಅದು ಬಯಸುವುದಿಲ್ಲ ಎಂದು ಹೇಳಲಾಗುತ್ತಿದೆ.

ABOUT THE AUTHOR

...view details