ಕರ್ನಾಟಕ

karnataka

ETV Bharat / business

ರಾಜ್ಯದ ರೈಲ್ವೆ ನಿಲ್ದಾಣಗಳಲ್ಲಿ ಸೌರಶಕ್ತಿ ಬಳಕೆ: 1.88 ಕೋಟಿ ರೂ. ವಿದ್ಯುತ್ ಬಿಲ್‌ ಉಳಿಕೆ!

ವಿದ್ಯುತ್ ಅಗತ್ಯಗಳನ್ನು ಪೂರೈಕೆಗೆ ನೈಸರ್ಗಿಕ ಶಕ್ತಿ ಬಳಸಿಕೊಳ್ಳಲು ಕರ್ನಾಟಕ, ಗೋವಾ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿನ ನಿಲ್ದಾಣ, ಕಟ್ಟಡಗಳು ಮತ್ತು ಲೆವೆಲ್ ಕ್ರಾಸಿಂಗ್‌ಗಳ ಮೇಲೆ ಸೌರ ಫಲಕಗಳನ್ನು ಸ್ಥಾಪಿಸಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Railways
ರೈಲ್ವೆ

By

Published : Oct 10, 2020, 4:32 PM IST

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯವು (ಎಸ್‌ಡಬ್ಲ್ಯುಆರ್) ತನ್ನ ವಿದ್ಯುತ್ ಅಗತ್ಯಗಳಿಗೆ ನವೀಕರಿಸಬಹುದಾದ ಶಕ್ತಿ ಬಳಸಿಕೊಳ್ಳಲು ತನ್ನ ನಿಲ್ದಾಣಗಳ ಛಾವಣಿ, ಅದರ ಕಟ್ಟಡಗಳ ತಾರಸಿ ಹಾಗೂ ರಾಜ್ಯಾದ್ಯಂತ ಇರುವ ಲೆವೆಲ್ ಕ್ರಾಸಿಂಗ್ ಗೇಟ್‌ಗಳಲ್ಲಿ ಸೌರ ಫಲಕಗಳನ್ನು ಸ್ಥಾಪಿಸಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ವಿದ್ಯುತ್ ಅಗತ್ಯಗಳನ್ನು ಪೂರೈಕೆಗೆ ನೈಸರ್ಗಿಕ ಶಕ್ತಿ ಬಳಸಿಕೊಳ್ಳಲು ಕರ್ನಾಟಕ, ಗೋವಾ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿನ ನಿಲ್ದಾಣ, ಕಟ್ಟಡಗಳು ಮತ್ತು ಲೆವೆಲ್ ಕ್ರಾಸಿಂಗ್‌ಗಳ ಮೇಲೆ ಸೌರ ಫಲಕಗಳನ್ನು ಸ್ಥಾಪಿಸಿದ್ದೇವೆ ಎಂದು ರೈಲ್ವೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಲಯ ರೈಲ್ವೆ ಪ್ರಧಾನ ಕಚೇರಿ ಹೊಂದಿರುವ ಹುಬ್ಬಳ್ಳಿ, ಬೆಂಗಳೂರು, ಮೈಸೂರು, ಹೊಸಪೇಟೆ, ಗದಗ, ಬಳ್ಳಾರಿ ಸೇರಿದಂತೆ ವಲಯದ 128 ಪ್ರಮುಖ ನಿಲ್ದಾಣಗಳ ಛಾವಣಿಯ ಮೇಲ್ಭಾಗದಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗಿದೆ ಎಂದರು.

ವಲಯದಾದ್ಯಂತ 221 ಲೆವೆಲ್-ಕ್ರಾಸಿಂಗ್ ಗೇಟ್‌ಗಳಲ್ಲಿ ಫೋಟೋ ವೋಲ್ಟಾಯಿಕ್ ಸೆಲ್ ದೀಪ ಸ್ಥಾಪಿಸಲಾಗಿದೆ. ಕಾರ್ಯಾಗಾರ ಮತ್ತು ಶೆಡ್‌ಗಳ ಮೇಲೆ ಸೌರ ಫಲಕಗಳನ್ನು ನಿರ್ಮಿಸಿದ್ದೇವೆ. ಬಿಸಿಲಿನ ದಿನಗಳಲ್ಲಿ ಈ ವರ್ಷ ಸೌರ ಫಲಕಗಳಿಂದ 4.7 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರೈಲ್ವೆ ಮತ್ತು ಉತ್ಪಾದನಾ ಘಟಕಗಳಲ್ಲಿ 2021-22ರ ವೇಳೆಗೆ ಸುಮಾರು 1,000 ಮೆಗಾವ್ಯಾಟ್ ಸೌರಶಕ್ತಿ, ಸುಮಾರು 200 ಮೆಗಾವ್ಯಾಟ್ ಪವನ ಶಕ್ತಿಯನ್ನು ಉತ್ಪಾದಿಸಲು ಭಾರತೀಯ ರೈಲ್ವೆ ಯೋಜನೆ ರೂಪಿಸಿದೆ.

ಸೌರಶಕ್ತಿ ಫಲಕಗಳ ವಿದ್ಯುತ್​ ಬಳಸುವುದರಿಂದ ಈ ಹಣಕಾಸು ವರ್ಷದಲ್ಲಿ (2020-21) 1.88 ಕೋಟಿ ರೂ. ವಿದ್ಯುತ್ ಬಿಲ್‌ ಉಳಿಸಲು ಸಾಧ್ಯವಾಗುತ್ತದೆ. ಭಾರತೀಯ ರೈಲ್ವೆಯ ಅಂಗಸಂಸ್ಥೆಯಾದ ರೈಲ್ವೆ ಎನರ್ಜಿ ಮ್ಯಾನೇಜ್ಮೆಂಟ್ ಕಂಪನಿ ಲಿಮಿಟೆಡ್, ಖಾಲಿ ಇರುವ ಮತ್ತು 20 ಮೆಗಾವ್ಯಾಟ್​​ನ ಸೌರ ಸ್ಥಾವರ ಮತ್ತು ಟ್ರ್ಯಾಕ್ ಬದಿಗಳಲ್ಲಿ 8.3 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಟೆಂಡರ್ ಪಡೆದಿದೆ.

ABOUT THE AUTHOR

...view details