ನವದೆಹಲಿ: ಹಳೆಯ ಡೀಸೆಲ್ ಲೊಕೋಮೋಟಿವ್‌ಗಳನ್ನು ವಿದ್ಯುತ್ ಇಂಜಿನ್ ಆಗಿ ಪರಿವರ್ತಿಸುವ ಯೋಜನೆಯ ಮರು ಮೌಲ್ಯಮಾಪನಕ್ಕೆ ಭಾರತೀಯ ರೈಲ್ವೆಯು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದೆ.
ನಿಗದಿತ ಅವಧಿ ಮುಗಿಯಲು 5-6 ವರ್ಷಗಳು ಉಳಿದ ಎಂಜಿನ್‌ಗಳನ್ನು ವಿದ್ಯುತ್ ಪರಿವರ್ತನೆ ಮಾಡುವುದರಿಂದ ಆರ್ಥಿಕವಾಗಿ ಮತ್ತು ತಾಂತ್ರಿಕವಾಗಿ ಉತ್ತಮವೆಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಗಸ್ಟ್ 15ರೊಳಗೆ ವರದಿ ಬರುವ ನಿರೀಕ್ಷೆಯಿದೆ. ಪರಿವರ್ತನೆ ಯೋಜನೆಯ ಸಾಧಕ-ಬಾಧಕಗಳನ್ನು ಅನ್ವೇಷಿಸಲು ಈ ಸಮಿತಿಯನ್ನು ಒಂದು ತಿಂಗಳ ಹಿಂದೆ ರಚಿಸಲಾಗಿತ್ತು ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಡೀಸೆಲ್ ಲೊಕೋಮೋಟಿವ್‌ಗಳು ಬಹಳ ಹಳೆಯವು ಮತ್ತು ಕೇವಲ ಐದರಿಂದ ಆರು ವರ್ಷಗಳ ಜೀವಿತಾವಧಿಯನ್ನು ಹೊಂದಿವೆ. ಉದ್ದೇಶಿತ ಪರಿವರ್ತನೆಯ ಬಳಿಕ ಅವುಗಳು 5-10 ವರ್ಷಗಳ ಜೀವಿತಾವಧಿ ಇರುತ್ತದೆ. ಹಳೆಯ ಲೊಕೋಮೋಟಿವ್‌ಗಳು ಸುಮಾರು 4,500 ಹೆಚ್‌ಪಿಗಳಾಗಿದ್ದವು. ಆದರೆ, ಪ್ರಸ್ತುತ 1200 ಹೆಚ್‌ಪಿ, 9000 ಹೆಚ್‌ಪಿ ಲೊಕೋಮೋಟಿವ್‌ಗಳನ್ನು ಬಳಸುತ್ತಿದ್ದೇವೆ ಎಂದರು.
ರೈಲ್ವೆಯು ಇಂಧನ ಚಾಲಿತ ಹಳೆಯ ಲೊಕೋಮೋಟ್ಗಳ ವಿದ್ಯುತ್ ಪರಿವರ್ತನೆಯ ಯೋಜನೆ ಹಾಕಿಕೊಂಡಿದ್ದು, ಇಂಧನ ಬಳಕೆಯ ಪ್ರಮಾಣವು ವರ್ಷಕ್ಕೆ ಸುಮಾರು 2.83 ಬಿಲಿಯನ್ ಲೀಟರ್ ಆಗುತ್ತದೆ. ಗ್ರೀನ್ ಇನಿಶಿಯೇಟಿವ್‌ನ ಒಂದು ಭಾಗವಾಗಿ 505 ಜೋಡಿ ರೈಲುಗಳನ್ನು ಹೆಡ್ ಆನ್ ಜನರೇಷನ್‌ಗೆ ಪರಿವರ್ತಿಸಿದೆ. ವರ್ಷಕ್ಕೆ 450 ಕೋಟಿ ರೂ. ವೆಚ್ಚದ ಸುಮಾರು 70 ಮಿಲಿಯನ್ ಲೀಟರ್ ಡೀಸೆಲ್ ಉಳಿಸುವ ಸಾಮರ್ಥ್ಯ ಹೊಂದಿದೆ.
ವಿಶ್ವದಲ್ಲಿ ಮೊದಲ ಬಾರಿಗೆ ಡೀಸೆಲ್ ಇಂಜಿನ್‌ಗಳನ್ನು ಎಲೆಕ್ಟ್ರಿಕ್ ಇಂಜಿನ್‌ಗಳನ್ನಾಗಿ ಪರಿವರ್ತಿಸಲು ವಾರಣಾಸಿ ಘಟಕದ ಇಂಜಿನಿಯರ್ಗಳು 2019ರ ಫೆಬ್ರವರಿಯಲ್ಲಿ ಸಾಧ್ಯವಾಗಿಸಿದ್ದರು. ಡೀಸೆಲ್ ಬಳಸುತ್ತಿದ್ದ ರೈಲ್ವೆ ಇಂಜಿನ್‌ಗಳನ್ನು ಎಲೆಕ್ಟ್ರಿಕ್‌ಗೆ ಪರಿವರ್ತಿಸಿದೆ. ಇದನ್ನು ದೇಶೀಯ ತಂತ್ರಜ್ಞಾನ ಬಳಸಿ ಮಾಡಲಾಗಿರುವುದು ಐತಿಹಾಸಿಕ ಸಾಧನೆಯಾಗಿದೆ. ಇದನ್ನೇ ಇಡೀ ರೈಲ್ವೆಗೆ ಅಳವಡಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.