ಕರ್ನಾಟಕ

karnataka

ETV Bharat / business

ತುಂಬಿದ ಗ್ಲಾಸ್​ನಿಂದ​ ತೊಟ್ಟು ಹನಿ ಚೆಲ್ಲದಂಥ ಮೈಸೂರು - ಬೆಂಗಳೂರು ನಡುವೆ ಸುಗಮ ರೈಲು ಪ್ರಯಾಣ: ವಿಡಿಯೋ - ರೈಲ್ವೆ ಸಚಿವ ಪಿಯೂಶ್ ಗೋಯಲ್​ ಇತ್ತೀಚಿನ ಸುದ್ದಿ

ಪ್ರಯಾಣವು ತುಂಬಾ ಸುಗಮವಾಗಿತ್ತು. ರೈಲು ಹೆಚ್ಚಿನ ವೇಗದಲ್ಲಿ ಪ್ರಯಾಣಿಸುತ್ತಿದ್ದಾಗ ಗಾಜಿನಿಂದ ಒಂದು ಹನಿ ನೀರು ಕೂಡ ಚೆಲ್ಲಲಿಲ್ಲ. ಕರ್ನಾಟಕದ ಬೆಂಗಳೂರು ಮತ್ತು ಮೈಸೂರು ನಡುವೆ ಟ್ರ್ಯಾಕ್ ನಿರ್ವಹಣೆಯ ಫಲಿತಾಂಶಗಳು ಎಲ್ಲರಿಗೂ ನೋಡಲು ಸಾಧ್ಯವಿದೆ ಅವರು ಟ್ವೀಟ್ ಮಾಡಿದ್ದಾರೆ.

Water Glass
ರೈಲು ಪ್ರಯಾಣ

By

Published : Oct 31, 2020, 9:16 PM IST

ಬೆಂಗಳೂರು: ಟ್ರ್ಯಾಕ್ ನಿರ್ವಹಣಾ ಕಾರ್ಯದ ನಂತರ ಬೆಂಗಳೂರು - ಮೈಸೂರು ರೈಲು ಮಾರ್ಗದಲ್ಲಿ ಅತಿ ವೇಗದ ಪ್ರಯಾಣವು ಸುಗಮವಾಗಿದ್ದು, ಪರೀಕ್ಷೆಯಲ್ಲಿ ಕೋಚ್‌ನ ಮೇಜಿನ ಮೇಲೆ ಇಟ್ಟಿದ್ದ ಗಾಜಿನಿಂದ ಒಂದು ಹನಿ ನೀರು ಕೂಡ ಚೆಲ್ಲಲಿಲ್ಲ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಸಂತಸ ವ್ಯಕ್ತಪಡಿಸಿದ್ದಾರೆ.

ಟ್ವೀಟ್‌ನಲ್ಲಿ ವಿಡಿಯೋ ಹಂಚಿಕೊಂಡ ಸಚಿವರು, ನೀರು ತುಂಬಿದ ಗ್ಲಾಸ್​ ಒಂದನ್ನು ಕಂಪಾರ್ಟ್‌ಮೆಂಟ್‌ನ ಮೇಜಿನ ಮೇಲೆ ಇಡಲಾಗಿದ್ದು, ಹಳಿ ಮೇಲೆ ರೈಲು ವೇಗವಾಗಿ ಚಲಿಸಿದರೂ ಒಂದು ಹನಿ ಕೂಡ ಚೆಲ್ಲಲಿಲ್ಲ.

ಪ್ರಯಾಣವು ತುಂಬಾ ಸುಗಮವಾಗಿತ್ತು. ರೈಲು ಹೆಚ್ಚಿನ ವೇಗದಲ್ಲಿ ಪ್ರಯಾಣಿಸುತ್ತಿದ್ದಾಗ ಗಾಜಿನಿಂದ ಒಂದು ಹನಿ ನೀರು ಕೂಡ ಚೆಲ್ಲಲಿಲ್ಲ. ಕರ್ನಾಟಕದ ಬೆಂಗಳೂರು ಮತ್ತು ಮೈಸೂರು ನಡುವೆ ಟ್ರ್ಯಾಕ್ ನಿರ್ವಹಣೆಯ ಫಲಿತಾಂಶಗಳು ಎಲ್ಲರಿಗೂ ನೋಡಲು ಸಾಧ್ಯವಿದೆ ಅವರು ಟ್ವೀಟ್ ಮಾಡಿದ್ದಾರೆ.

ಕಳೆದ ಆರು ತಿಂಗಳಲ್ಲಿ ₹ 40 ಕೋಟಿ ವೆಚ್ಚದಲ್ಲಿ 130 ಕಿ.ಮೀ.ಗೂ ಅಧಿಕ ದೂರದ ಕೆಲಸವನ್ನು ಕೈಗೊಳ್ಳಲಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ABOUT THE AUTHOR

...view details