ನವದೆಹಲಿ: ಮುಂಬರುವ ಬಜೆಟ್ನಲ್ಲಿ ರಾಷ್ಟ್ರೀಯ ಚಿಲ್ಲರೆ ನೀತಿ ರೂಪಿಸಿ ಅನುಷ್ಠಾನಗೊಳಿಸುವಂತೆ ಚಿಲ್ಲರೆ ವ್ಯಾಪಾರಿಗಳ ಸಂಸ್ಥೆ ಆರ್‌ಎಐ ಸರ್ಕಾರವನ್ನು ಒತ್ತಾಯಿಸಿದೆ.
ಕೊರೊನಾ ಪೀಡಿತವಾಗಿ ಬಾಧಿಸಿದ ವ್ಯಾಪಾರಿಗಳಿಗೆ ಚಿಲ್ಲರೆ ನೀತಿಯ ಲಾಭ ಪಡೆಯಲು ವರ್ತಕರಿಗೆ ಎಂಎಸ್‌ಎಂಇಗಳ ಅಡಿ ನೋಂದಣಿಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಸಾಂಕ್ರಾಮಿಕ ರೋಗದಿಂದಾಗಿ 854 ಬಿಲಿಯನ್ ಡಾಲರ್ನಷ್ಟು ಭಾರತೀಯ ಚಿಲ್ಲರೆ ವ್ಯಾಪಾರ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ. ಇದರ ಏರಿಳಿತದ ಪರಿಣಾಮ ಎಲ್ಲಾ ಸ್ಟೇಕ್ಹೋಲ್ಡರ್ಗಳ ಬಳಕೆ ಮೌಲ್ಯ ಸರಪಳಿಯಿಂದ ಕೆಳಗಿಳಕ್ಕೆ ತಳ್ಳಿದೆ. ಚೇತರಿಕೆಗೆ ಅಸಾಂಪ್ರದಾಯಿಕ ಪರಿಹಾರ ಮತ್ತು ಸರ್ಕಾರದ ಬೆಂಬಲ ಬೇಕಾಗುತ್ತದೆ ಎಂದು ಚಿಲ್ಲರೆ ವ್ಯಾಪಾರಿಗಳ ಸಂಘ (ಆರ್‌ಎಐ) ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಥಳೀಯ ಆರ್ಥಿಕತೆ ಹೆಚ್ಚಿಸಲು, ಚಿಲ್ಲರೆ ವ್ಯಾಪಾರ ಪುನರುಜ್ಜೀವನಗೊಳಿಸಲು ಹಾಗೂ ಲಕ್ಷಾಂತರ ಉದ್ಯೋಗಗಳನ್ನು ರಕ್ಷಿಸುವ ಎಲ್ಲ ಪ್ರಯತ್ನಗಳು ಅಗತ್ಯವಿದೆ. 2021-22ರ ಬಜೆಟ್ ಈ ಬಗ್ಗೆ ಪ್ರಮುಖ ಪಾತ್ರ ವಹಿಸಲಿದ್ದು, ಬಳಕೆಯು ಆರ್ಥಿಕತೆ ಪ್ರೇರೇಪಿಸಿದ್ದರೆ ಚಿಲ್ಲರೆ ಬಳಕೆಗೆ ಹೆಬ್ಬಾಗಿಲು ತೆರೆದಂತಾಗುತ್ತದೆ ಎಂದು ಹೇಳಿದೆ.