ನವದೆಹಲಿ: ಕೇಂದ್ರ ಸರ್ಕಾರ ತಂದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಸಾವಿರಾರು ರೈತರು 54 ದಿನಗಳ ಕಾಲ ದೆಹಲಿಯ ಹೊರವಲಯದಲ್ಲಿ ಬೀಡುಬಿಟ್ಟಿದ್ದಾರೆ. ರೈತರು ಮತ್ತು ಸರ್ಕಾರದ ನಡುವೆ ಈವರೆಗೆ ಹಲವು ಸುತ್ತಿನ ಮಾತುಕತೆ ನಡೆದರೂ ಯಾವುದೇ ಫಲಿತಾಂಶ ಬಂದಿಲ್ಲ. ಪ್ರತಿಪಕ್ಷಗಳು ಸಹ ರೈತರಿಗೆ ಸಂಪೂರ್ಣ ಬೆಂಬಲ ನೀಡುತ್ತಿವೆ.
ಇದರ ನಡುವೆ ಕಾಂಗ್ರೆಸ್ನ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ರೈತರಿಗೆ ಬೆಂಬಲವಾಗಿ ಮತ್ತು ಮೋದಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಸತತವಾಗಿ ಟ್ವೀಟ್ ಮಾಡುತ್ತಿದ್ದಾರೆ. ಈಗ ಮತ್ತೆ ಮೋದಿ ವಿರುದ್ಧ ಟ್ವೀಟ್ ದಾಳಿ ನಡೆಸಿದ್ದಾರೆ.
ತನ್ನ ಕೈಗಾರಿಕೋದ್ಯಮಿ ಸ್ನೇಹಿತರ 8,75,000 ಕೋಟಿ ರೂ. ಸಾಲವನ್ನು ಮನ್ನಾ ಮಾಡಿದ ಮೋದಿ ಸರ್ಕಾರ ರೈತರ ಬಂಡವಾಳ ತೆರವುಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ಬರೆದಿದ್ದಾರೆ. ಈ ಟ್ವೀಟ್ ವಿಡಿಯೋ ಹಲವು ಅಂಕಿಅಂಶಗಳನ್ನು ಒಳಗೊಂಡಿದೆ.
ಮೋದಿ ಸರ್ಕಾರವನ್ನು ಗುರಿಯಾಗಿಸಿಕೊಂಡು ರಾಹುಲ್ ಟ್ವೀಟ್ ಮಾಡುವ ಮೊದಲು, '60ಕ್ಕೂ ಅಧಿಕ ರೈತರ ಹುತಾತ್ಮರಾದರೂ ಮೋದಿ ಸರ್ಕಾರಕ್ಕೆ ಮುಜುಗರ ಆಗಲಿಲ್ಲ. ಆದರೆ, ಟ್ರ್ಯಾಕ್ಟರ್ ಱಲಿಯಿಂದ ಅವರು ಮುಜುಗರಕ್ಕೊಳಗಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಸಾರ್ವಕಾಲಿಕ ದಾಖಲೆ ಬಳಿಕ ಷೇರುಪೇಟೆಯಲ್ಲಿ ರಕ್ತಪಾತ: 2 ದಿನದಲ್ಲಿ 5 ಲಕ್ಷ ಕೋಟಿ ರೂ. ಮಾಯ!