ನವದೆಹಲಿ :ರೈತರಿಗೆ ಸಹಾಯ ಮಾಡಲು ಮೋದಿ ಸರ್ಕಾರ ಸಂಸತ್ತಿನಲ್ಲಿ 3 ಮಸೂದೆ ತಂದಿದೆ. ಈ ಕಾಯ್ದೆಗಳ ಬಗ್ಗೆ ರೈತ ಸಂಘಟನೆಗಳು ಹಾಗೂ ಪ್ರತಿ ಪಕ್ಷಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತಿವೆ.
ಮಸೂದೆಯಲ್ಲಿನ ಅಂಶಗಳು 2019ರ ಚುನಾವಣೆಯಲ್ಲಿ ಕೃಷಿಗೆ ಸಂಬಂಧಿಸಿದ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಗಳು ಎಂದು ಭಾರತೀಯ ಕೃಷಿ ಆರ್ಥಿಕ ತಜ್ಞ ಅಶೋಕ್ ಗುಲಾಟಿ ಹೇಳಿದ್ದಾರೆ.
ಈ ಬಗ್ಗೆ ಅಶೋಕ್ ಗುಲಾಟಿ ಟ್ವೀಟ್ ಮಾಡಿದ್ದಾರೆ. ರಾಹುಲ್ ಗಾಂಧೀಜಿ, ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿಗಳ ಕಾಯ್ದೆಯನ್ನು ಕಾಂಗ್ರೆಸ್ ರದ್ದುಪಡಿಸುತ್ತದೆ ಮತ್ತು ರಫ್ತು ಹಾಗೂ ಅಂತಾರಾಜ್ಯ ವ್ಯಾಪಾರ ಸೇರಿ ಕೃಷಿ ಉತ್ಪನ್ನಗಳಲ್ಲಿ ವ್ಯಾಪಾರವನ್ನು ಎಲ್ಲಾ ನಿರ್ಬಂಧಗಳಿಂದ ಮುಕ್ತಗೊಳಿಸುತ್ತದೆ ಎಂದು ನೀವು ಭರವಸೆ ನೀಡಿದ್ದೀರಿ.
ಕಾಂಗ್ರೆಸ್ ಪ್ರಣಾಳಿಕೆ 2019ರ ಕೃಷಿಯಲ್ಲಿ 11 ಅಂಶ ನೋಡಿ). ನೀವು ಬಯಸಿದ್ದನ್ನು ಎನ್ಡಿಎ ಮಾಡುತ್ತಿದೆ. ಈಗಲಾದರೂ ನೀವು ಸಂತೋಷವಾಗಿರಬೇಕು ಎಂದು ಬರೆದುಕೊಂಡಿದ್ದಾರೆ.
ಅಗತ್ಯ ಸರಕುಗಳ ಕಾಯ್ದೆ (ತಿದ್ದುಪಡಿ) ಮಸೂದೆ- 2020, ರೈತರು ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ ಹಾಗೂ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದದ ಮಸೂದೆ ಲೋಕಸಭೆಯಲ್ಲಿ ಚರ್ಚೆಯಾಗುತ್ತಿವೆ.