ಕರ್ನಾಟಕ

karnataka

ETV Bharat / business

ಸುಳ್ಳು ಸುದ್ದಿ, ದ್ವೇಷ ಹಬ್ಬಿಸಿ 2 ಕೋಟಿ ನಿರುದ್ಯೋಗ ಮುಚ್ಚಿಡಲು ಸಾಧ್ಯವಿಲ್ಲ: ರಾಹುಲ್​ ಟೀಕಾಸ್ತ್ರ

ಕಳೆದ 4 ತಿಂಗಳಲ್ಲಿ ಸುಮಾರು 2 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. 2 ಕೋಟಿ ಕುಟುಂಬಗಳ ಭವಿಷ್ಯವು ಕತ್ತಲೆಯಲ್ಲಿದೆ. ಫೇಸ್‌ಬುಕ್‌ನಲ್ಲಿ ಸುಳ್ಳು ಸುದ್ದಿ ಮತ್ತು ದ್ವೇಷ ಹಬ್ಬಿಸುವ ಮೂಲಕ ನಿರುದ್ಯೋಗ ಮತ್ತು ಆರ್ಥಿಕತೆಯ ನಾಶದ ಬಗ್ಗೆ ಸತ್ಯವನ್ನು ದೇಶದಿಂದ ಮರೆಮಾಡಲು ಸಾಧ್ಯವಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಸಂಸದ ರಾಹುಲ್​ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

By

Published : Aug 19, 2020, 4:00 PM IST

Rahul Gandhi
ರಾಹುಲ್​ ಗಾಂಧಿ

ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಮಧ್ಯೆ ಕಳೆದ ನಾಲ್ಕು ತಿಂಗಳಲ್ಲಿ ಸುಮಾರು ಎರಡು ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.

ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿ ಟ್ವೀಟ್​ ಮಾಡಿದ ಕಾಂಗ್ರೆಸ್ ಸಂಸದ, ನಿರುದ್ಯೋಗದ ಬಗಿನ ಸತ್ಯವನ್ನು ಮರೆಮಾಚಿ ಇಡಲು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ.

ಹಿಂದಿಯಲ್ಲಿ ಮಾಡಿದ ಟ್ವೀಟ್‌ನಲ್ಲಿ, ಕಳೆದ 4 ತಿಂಗಳಲ್ಲಿ ಸುಮಾರು 2 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. 2 ಕೋಟಿ ಕುಟುಂಬಗಳ ಭವಿಷ್ಯವು ಕತ್ತಲೆಯಲ್ಲಿದೆ. ಫೇಸ್‌ಬುಕ್‌ನಲ್ಲಿ ಸುಳ್ಳು ಸುದ್ದಿ ಮತ್ತು ದ್ವೇಷ ಹಬ್ಬಿಸುವ ಮೂಲಕ ನಿರುದ್ಯೋಗ ಮತ್ತು ಆರ್ಥಿಕತೆಯ ನಾಶದ ಬಗ್ಗೆ ಸತ್ಯವನ್ನು ದೇಶದಿಂದ ಮರೆಮಾಡಲು ಸಾಧ್ಯವಿಲ್ಲ ಎಂದು ಆರೋಪಿಸಿದ್ದಾರೆ.

ಏಪ್ರಿಲ್​ನಿಂದ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಸುಮಾರು 1.89 ಕೋಟಿ ಉದ್ಯೋಗಗಳು ಕಳೆದುಹೋಗಿವೆ ಎಂದಿದ್ದಾರೆ.

ಇದಕ್ಕೂ ಮೊದಲು ಆರ್​ಎಸ್​​ಎಸ್​ ಮತ್ತು ಬಿಜೆಪಿ ಫೇಸ್​ಬುಕ್​ ಅನ್ನು ನಿಯಂತ್ರಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ಬಳಿಕ ನಿರುದ್ಯೋಗವನ್ನು ಮುಂದಿಟ್ಟು ಕೊಂಡು ಕೇಂದ್ರದ ವಿರುದ್ಧ ಮತ್ತೊಂದು ಸುತ್ತಿನ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.

ABOUT THE AUTHOR

...view details