ಕರ್ನಾಟಕ

karnataka

ETV Bharat / business

ಟವರ್ ಬುಡದಲ್ಲೇ ನಾಟ್​ ರೀಚೆಬಲ್​... ತನ್ನ ನೋವು ಹೇಳೋಕೆ ಕೂಗಿ ಕರೆಯುತ್ತಿದೆ 'Telecom' ಸೆಕ್ಟರ್​ - ವಾಣಿಜ್ಯ ಸುದ್ದಿ

ಟೆಲಿಕಾಂ ವಲಯವು ಭಾರತದ ಜಿಡಿಪಿಗೆ ಶೇ 6.5ರಷ್ಟು ಕಾಣಿಕೆ ನೀಡುತ್ತಿದ್ದು, 5ಜಿ ಸೇವೆಯ ಬಳಿಕ ಇದು ಶೇ 8.2ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಸುಪ್ರೀಂಕೋರ್ಟ್‌ನ ಇತ್ತೀಚಿನ ತೀರ್ಪು ಟೆಲಿಕಾಂ ಕ್ಷೇತ್ರದ ಬುಡವನ್ನೇ ಅಲುಗಾಡಿಸುತ್ತಿದೆ. 2019ರ ಅಕ್ಟೋಬರ್​ನಲ್ಲಿ ಸುಪ್ರೀಂಕೋರ್ಟ್​ ಜನವರಿ 23ರ ಒಳಗೆ ಟೆಲಿಕಾಂ ಕಂಪನಿಗಳು ಬಾಕಿ ಉಳಿಸಿಕೊಂಡ 1.47 ಲಕ್ಷ ಕೋಟಿ ರೂ. ಪಾವತಿಸುವಂತೆ ಆದೇಶಿಸಿತ್ತು. ಈ ತೀರ್ಪನ್ನು ಪರಾಮರ್ಶಿಸುವಂತೆ ಕೋರಿ, ಟೆಲಿಕಾಂ ಕಂಪನಿಗಳು ಸಲ್ಲಿಸಿದ್ದ ಮನವಿಯನ್ನು ಮೂರು ನ್ಯಾಯಮೂರ್ತಿಗಳಿದ್ದ ನ್ಯಾಯಪೀಠ ತಿರಸ್ಕರಿಸಿದೆ. ಕಂಪೆನಿಗಳು ಈಗಾಗಲೇ 29-32 ಪ್ರತಿಶತದಷ್ಟು ತೆರಿಗೆ ಮತ್ತು ಕಸ್ಟಮ್ಸ್​ ಭೀತಿಯನ್ನು ಎದುರಿಸುತ್ತಿವೆ

TELECOM
ಟೆಲಿಕಾಂ ವಲಯ

By

Published : Jan 20, 2020, 9:57 PM IST

ನವದೆಹಲಿ:ಭಾರತದ ಆರ್ಥಿಕ ಸುಧಾರಣೆಗಳ ಪ್ರಸ್ತುತದಲ್ಲಿ ದೂರಸಂಪರ್ಕ ವಲಯವು ಅಭಿವೃದ್ಧಿಯ ಕಟ್ಟಡದ ಆಧಾರಸ್ತಂಭಗಳಲ್ಲಿ ಒಂದಾಗಿದೆ.

ಟೆಲಿಕಾಂ ವಲಯವು ಭಾರತದ ಜಿಡಿಪಿಗೆ ಶೇ 6.5ರಷ್ಟು ಕಾಣಿಕೆ ನೀಡುತ್ತಿದ್ದು, 5ಜಿ ಸೇವೆಯ ಬಳಿಕ ಇದು ಶೇ 8.2ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಸುಪ್ರೀಂಕೋರ್ಟ್‌ನ ಇತ್ತೀಚಿನ ತೀರ್ಪು ಟೆಲಿಕಾಂ ಕ್ಷೇತ್ರದ ಬುಡವನ್ನೇ ಅಲುಗಾಡಿಸುತ್ತಿದೆ.

2019ರ ಅಕ್ಟೋಬರ್​ನಲ್ಲಿ ಸುಪ್ರೀಂಕೋರ್ಟ್​ ಜನವರಿ 23ರ ಒಳಗೆ ಟೆಲಿಕಾಂ ಕಂಪನಿಗಳು ಬಾಕಿ ಉಳಿಸಿಕೊಂಡ 1.47 ಲಕ್ಷ ಕೋಟಿ ರೂ. ಪಾವತಿಸುವಂತೆ ಆದೇಶಿಸಿತ್ತು. ಈ ತೀರ್ಪನ್ನು ಪರಾಮರ್ಶಿಸುವಂತೆ ಕೋರಿ, ಟೆಲಿಕಾಂ ಕಂಪನಿಗಳು ಸಲ್ಲಿಸಿದ್ದ ಮನವಿಯನ್ನು ಮೂರು ನ್ಯಾಯಮೂರ್ತಿಗಳಿದ್ದ ನ್ಯಾಯಪೀಠ ತಿರಸ್ಕರಿಸಿದೆ.

ಕಂಪನಿಗಳು ಈಗಾಗಲೇ 29-32 ಪ್ರತಿಶತದಷ್ಟು ತೆರಿಗೆ ಮತ್ತು ಕಸ್ಟಮ್ಸ್​ ಭೀತಿಯನ್ನು ಎದುರಿಸುತ್ತಿವೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ದೂರಸಂಪರ್ಕ ಉದ್ಯಮವು ಚೇತರಿಕೆಯ ಅರ್ಜಿಯನ್ನು ಸಲ್ಲಿಸಿದೆ.

2019ರ ಜುಲೈನಲ್ಲಿ ಕೇಂದ್ರ ಸರ್ಕಾರ ಸಲ್ಲಿಸಿದ ವರದಿ ಅನ್ವಯ, ಏರ್‌ಟೆಲ್ ₹ 21,682 ಕೋಟಿ, ವೊಡಾಫೋನ್ ₹ 19,823 ಕೋಟಿ, ರಿಲಯನ್ಸ್ ಕಮ್ಯುನಿಕೇಷನ್ಸ್ ₹ 16,456 ಕೋಟಿ, ಎಂಟಿಎನ್‌ಎಲ್ ₹ 2,537 ಕೋಟಿ ಮತ್ತು ಬಿಎಸ್‌ಎನ್‌ಎಲ್ ₹ 2,098 ಕೋಟಿಗಳಷ್ಟಯ ಪರವಾನಗಿ ಶುಲ್ಕ ಪಾವತಿಸಬೇಕಿದೆ.

ಹೊಂದಾಣಿಕೆಯ ಒಟ್ಟು ಆದಾಯವನ್ನು (ಎಜಿಆರ್) ಕೇಂದ್ರ ಸರ್ಕಾರಕ್ಕೆ ಪಾವತಿಸಲು ಟೆಲಿಕಾಂ ನಿರ್ವಾಹಕರು ಒಪ್ಪಿದ್ದಾರೆ. ಆದರೆ ಸರ್ಕಾರ ನೀಡಿದ ಎಜಿಆರ್ ವ್ಯಾಖ್ಯಾನದ ಬಗ್ಗೆ ಅಪಸ್ವರ ಎತ್ತಿದ್ದಾರೆ.

ಟೆಲಿಕಾಂ ಆಪರೇಟರ್‌ಗಳು ತೀವ್ರ ತೊಂದರೆಯಲ್ಲಿದ್ದಾಗ ಮತ್ತು ಪರವಾನಗಿ ಶುಲ್ಕ ಪಾವತಿಸಲು ಸಾಧ್ಯವಾಗದಿದ್ದಾಗ ಆರ್ಥಿಕ ಸುಧಾರಣೆಗಳ ಭಾಗವಾಗಿ ಸರ್ಕಾರವು ವಿನಾಯಿತಿ ನೀಡಿತು.

ಭಾರಿ ಲಾಭ ಗಳಿಸಿದ ಕಂಪನಿಗಳು ತಮ್ಮ ಸರಿಯಾದ ಆದಾಯವನ್ನು ಸರ್ಕಾರಕ್ಕೆ ವರದಿ ಮಾಡಿಲ್ಲ ಎಂದು ಸುಪ್ರೀಂಕೋರ್ಟ್ ಇತ್ತೀಚಿನ ತೀರ್ಪಿನಲ್ಲಿ ಹೇಳಿದೆ.

ವೊಡಾಫೋನ್ ನಂತಹ ನಿರ್ವಾಹಕರು ಇಂತಹ ಸಂದರ್ಭದಲ್ಲಿ ತಮ್ಮ ಸೇವಯನ್ನು ಸ್ಥಗಿತಗೊಳಿಸಿ ನಿರ್ವಹಣೆಯಿಂದ ಹಿಂದೆ ಸರಿಯಬಹುದು ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆರ್ಥಿಕ ಸಂಕಷ್ಟದಲ್ಲಿತರುವ ಟೆಲಿಕಾಂ ಕ್ಷೇತ್ರವನ್ನು ತ್ವರಿತಗತಿಯಲ್ಲಿ ಮೇಲಕ್ಕೆತಲ್ಲು 1999ರಲ್ಲಿನ ವಾಜಪೇಯಿ ಸರ್ಕಾರ ಕೆಲವು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿತ್ತು. ಇದು ಹೊಸ ಟೆಲಿಕಾಂ ನೀತಿಗೆ (ಎನ್‌ಟಿಪಿ) ದಾರಿಮಾಡಿಕೊಟ್ಟಿತು. ಆ ಮೂಲಕ ಟೆಲಿಕಾಂ ಕಂಪನಿಗಳಿಗೆ ಬಹುವರ್ಷದ ಪರವಾನಗಿ ಶುಲ್ಕಕಕ್ಕೆ ವಿರುದ್ಧವಾಗಿ ಆದಾಯ ಹಂಚಿಕೆಯ ಜೊತೆಗೆ ಒಂದು ಭಾರಿ ಪ್ರವೇಶ ಶುಲ್ಕ ವಿಧಿಸಲಾಗುತ್ತದೆ.

ಸರ್ಕಾರವು 15 ಪ್ರತಿಶತ ಎಜಿಆರ್ ಅನ್ನು 2013ರಲ್ಲಿ 8 ಪ್ರತಿಶತಕ್ಕೆ ಇಳಿಸಿತು. 2004ರಲ್ಲಿ 4,855 ಕೋಟಿ ರೂ.ಗಳಾಗಿದ್ದ ಟೆಲಿಕಾಂ ಆಪರೇಟರ್‌ಗಳ ಒಟ್ಟು ಆದಾಯವು 2015ರಲ್ಲಿ 2,38,000 ಕೋಟಿ ರೂ.ಗೆ ಏರಿದೆ.

ಸರ್ಕಾರ ತನ್ನ ಕರಡು ನೀತಿಯಲ್ಲಿ ಎಜಿಆರ್ ವ್ಯಾಖ್ಯಾನವನ್ನು ನಿರ್ದಿಷ್ಟಪಡಿಸಿತ್ತು. ನಿರ್ವಾಹಕರು ಈ ನೀತಿಗೆ ಒಪ್ಪಿಕೊಂಡಿದ್ದಾರೆ. ಆದರೆ, ಇತ್ತೀಚೆಗೆ ಈ ಬಗ್ಗೆ ಯು-ಟರ್ನ್ ತೆಗೆದುಕೊಂಡಿದ್ದಾರೆ. ಪ್ರಸ್ತುತ ಕಾನೂನು ವಿವಾದಕ್ಕೆ ಇದೇ ಕಾರಣವಾಗಿದೆ.

2017-19 ನಡುವೆ ಜಿಯೋ 8 ರೂ.ಗೆ ಜಿಬಿ 1 ಡೇಟಾ ನೀಡುವುದರೊಂದಿಗೆ ಇತರ ಆಪರೇಟರ್‌ಗಳು 25 ಪ್ರತಿಶತದಷ್ಟು ನಷ್ಟ ಅನುಭವಿಸುವಂತೆ ಮಾಡಿದೆ. 2015ರಲ್ಲಿ 174 ರೂ.ಗಳಾಗಿದ್ದ ತಲಾ ಆದಾಯ ಇತ್ತೀಚೆಗೆ 113 ರೂ.ಗೆ ಇಳಿದಿದೆ. ಈ ಪ್ರತಿಕೂಲ ಪರಿಸ್ಥಿತಿಗಳು ದೊಡ್ಡದಾಗುತ್ತಿರುವಾಗ 1,40,000 ಕೋಟಿ ರೂ. ಸಾಲವು ಈ ವಲಯವನ್ನು ಪಾತಾಳಕ್ಕೆ ತಳ್ಳುತ್ತಿದೆ.

5ಜಿ ತಂತ್ರಜ್ಞಾನ ಮತ್ತು ಎಐನಂತಹ ಇತ್ತೀಚಿನ ಪ್ರಗತಿಯೊಂದಿಗೆ ಟೆಲಿಕಾಂ ಆಪರೇಟರ್‌ಗಳು ಮತ್ತು ಕೇಂದ್ರ ಸರ್ಕಾರಕ್ಕೂ ಉಪಯೋಗವಾಗುವಂತಹ ಸರಿಯಾದ ಕ್ರಮ ತೆಗೆದುಕೊಳ್ಳಬೇಕು.

ಡಿಒಟಿ ವೆಬ್‌ಸೈಟ್ ಪ್ರಕಾರ, ದೇಶಾದ್ಯಂತ 3,468 ಪರವಾನಗಿದಾರರಿದ್ದಾರೆ. ಎಜಿಆರ್ ಕುರಿತ ಸುಪ್ರೀಂಆದೇಶವು ಎಲ್ಲಾ ಟೆಲಿಕಾಂ ಅಲ್ಲದ ಕಂಪನಿಗಳಿಗೆ ಅನ್ವಯಿಸುತ್ತದೆ ಎಂದು ಸರ್ಕಾರ ಹೇಳಿದೆ. ಸರ್ಕಾರಿ ವಲಯದ ಸಂಸ್ಥೆಗಳು ಮಾತ್ರ ಸುಮಾರು 3 ಲಕ್ಷ ಕೋಟಿ ರೂ. ಸಾಲದ ಹೊರೆ ಹೊಂದಿವೆ.

ಪವರ್‌ಗ್ರಿಡ್‌ನಂತಹ ಸಂಸ್ಥೆಗಳು ತಮ್ಮ ಆದಾಯದ 95 ಪ್ರತಿಶತವನ್ನು ವಿದ್ಯುತ್ ಪ್ರಸರಣದಿಂದ ಮತ್ತು 2 ಪ್ರತಿಶತ ಟೆಲಿಕಾಂ ಸೇವೆಗಳಿಂದ ಪಡೆಯುತ್ತದೆ. ಟೆಲಿಕಾಂ ಸೇವೆಗಳ ಮೂಲಕ ಕೇವಲ 742 ಕೋಟಿ ರೂ. ಗಳಿಸಿದ ನಿಗಮವು 59 ಕೋಟಿ ರೂ. ಪರವಾನಗಿ ಶುಲ್ಕವಾಗಿ ಪಾವತಿಸಿದರೂ ಪ್ರಸ್ತುತ ಅದರ ಮೌಲ್ಯಮಾಪನ 1.25 ಲಕ್ಷ ಕೋಟಿ ರೂ.ಯಷ್ಟಿದೆ.

ABOUT THE AUTHOR

...view details