ಕರ್ನಾಟಕ

karnataka

ETV Bharat / business

ಲಂಡನ್​ ಶೈಲಿಯಲ್ಲಿ 24x7 ತೆರೆಯಲಿವೆ ಶಾಪಿಂಗ್ ಮಾಲ್, ಪಬ್ಸ್...ಆದರೆ______

ಲಂಡನ್‌ನಲ್ಲಿ ರಾತ್ರಿ ವೇಳೆಯೂ ವ್ಯಾಪಾರ ಚಟುವಟಿಕೆಗಳು ನಡೆಯುವುದರಿಂದ ಅಲ್ಲಿನ ಆರ್ಥಿಕತೆಯು 5 ಶತಕೋಟಿ ಪೌಂಡ್‌ ಮೌಲ್ಯದಷ್ಟಿದೆ. ಇಂದೋರ್‌ನ ಸರಫಾ ಮಾರುಕಟ್ಟೆ ಕೂಡ ರಾತ್ರಿಯಲ್ಲಿ ತೆರೆದಿರುತ್ತದೆ. ಕಳೆದ ವರ್ಷ ಅಹಮದಾಬಾದ್ ನಗರ ಕೂಡ ತನ್ನ ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದೆ. ಮುಂಬೈ ಏಕೆ ಹಿಂದುಳಿಯಬೇಕು? ನಾವು ಕೇವಲ 24 ಗಂಟೆಗಳ ಕಾಲ ವಸತಿ ರಹಿತ ಪ್ರದೇಶಗಳಲ್ಲಿ ಆಹಾರ ಮತ್ತು ಶಾಪಿಂಗ್ ಸೌಲಭ್ಯವನ್ನು ಒದಗಿಸುತ್ತಿದ್ದೇವೆ ಎಂದು ಮಹಾರಾಷ್ಟ್ರ ರಾಜ್ಯ ಸಚಿವ ಆದಿತ್ಯ ಠಾಕ್ರೆ ಹೇಳಿದ್ದಾರೆ.

Malls
ಮಾಲ್

By

Published : Jan 18, 2020, 6:01 PM IST

ಮುಂಬೈ: ವಸತಿರಹಿತ ಪ್ರದೇಶಗಳಲ್ಲಿ ಜನವರಿ 26ರಿಂದ ಮಳಿಗೆಗಳು, ಶಾಪಿಂಗ್ ಮಾಲ್​ ಹಾಗೂ ಪಬ್ಸ್​ 24x7 ತೆರೆದಿರಲಿವೆ ಎಂದು ಮಹಾರಾಷ್ಟ್ರ ಪ್ರವಾಸೋದ್ಯಮ ರಾಜ್ಯ ಸಚಿವ ಆದಿತ್ಯ ಠಾಕ್ರೆ ಹೇಳಿದ್ದಾರೆ.

ಲಂಡನ್ ಮತ್ತು ಮಧ್ಯಪ್ರದೇಶದ ಇಂದೋರ್ ನಗರಗಳ ರಾತ್ರಿಜೀವನದ ಉದಾಹರಣೆ ನೀಡಿದ ಠಾಕ್ರೆ, 'ಈ ಮಹಾ ನಗರಗಳು 24x7 ಕಾರ್ಯ ನಿರ್ವಹಿಸುತ್ತಿರುವುದರಿಂದ ಮುಂಬೈ ಕೂಡ ರಾತ್ರಿ ವೇಳೆ ಇಲ್ಲಿನ ಜನರಿಗೆ ಇದೇ ರೀತಿಯ ಸೌಲಭ್ಯಗಳನ್ನು ಒದಗಿಸುವಲ್ಲಿ ಹಿಂದುಳಿಯಬಾರದು ಎಂದರು.

ರಾತ್ರಿಯ ಜೀವನವೆಂದರೆ ಮದ್ಯ ಸೇವನೆ ಮಾತ್ರ ಎಂದುಕೊಳ್ಳುವುದು ತಪ್ಪು. ಮುಂಬೈ ನಗರ 24x7 ಕಾರ್ಯ ನಿರ್ವಹಿಸುತ್ತದೆ. ಆನ್‌ಲೈನ್ ಶಾಪಿಂಗ್ 24 ಗಂಟೆಗಳ ಕಾಲ ತೆರೆದಿದ್ದರೆ ಅಂಗಡಿ-ಮಳಿಗೆಗಳು ರಾತ್ರಿಯಲ್ಲಿ ಏಕೆ ಮುಚ್ಚಬೇಕು ಎಂದು ಪ್ರಶ್ನಿಸಿದರು.

ಅಂಗಡಿ ಮತ್ತು ಮಾಲ್‌ಗಳು ರಾತ್ರಿಯಲ್ಲಿ ತೆರೆದಿರುವುದು ಕಡ್ಡಾಯವಲ್ಲ. ಅವರು ಮುಕ್ತವಾಗಿರಲು ಬಯಸಿದರೆ ಅದು ಅವರಿಗೆ ಬಿಟ್ಟದ್ದು. ಯಾವುದೇ ನಿಯಮಗಳನ್ನು ಬದಲಾಯಿಸಲಾಗಿಲ್ಲ ಎಂದು ಅವರು ಹೇಳಿದರು.

ನಾವು ಅಬಕಾರಿ ಮಾನದಂಡಗಳಿಗೆ ಮಣಿಯುತ್ತಿಲ್ಲ. ಲಂಡನ್‌ನಲ್ಲಿ ರಾತ್ರಿ ವೇಳೆಯೂ ವ್ಯಾಪಾರ ಚಟುವಟಿಕೆಗಳು ನಡೆಯುದರಿಂದ ಅಲ್ಲಿನ ಆರ್ಥಿಕತೆಯು ಐದು ಶತಕೋಟಿ ಪೌಂಡ್‌ ಮೌಲ್ಯದಷ್ಟಿದೆ. ಇಂದೋರ್‌ನ ಸರಫಾ ಮಾರುಕಟ್ಟೆ ಕೂಡ ರಾತ್ರಿಯಲ್ಲಿ ತೆರೆದಿರುತ್ತದೆ. ಕಳೆದ ವರ್ಷ ಅಹಮದಾಬಾದ್ ನಗರ ಕೂಡ ತನ್ನ ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದೆ. ಮುಂಬೈ ಏಕೆ ಹಿಂದುಳಿಯಬೇಕು? ನಾವು ಕೇವಲ 24 ಗಂಟೆಗಳ ಕಾಲ ವಸತಿ ರಹಿತ ಪ್ರದೇಶಗಳಲ್ಲಿ ಆಹಾರ ಮತ್ತು ಶಾಪಿಂಗ್ ಸೌಲಭ್ಯವನ್ನು ಒದಗಿಸುತ್ತಿದ್ದೇವೆ ಎಂದು ಠಾಕ್ರೆ ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

ABOUT THE AUTHOR

...view details