ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್ಗಳು ತಮ್ಮ ಚಿಲ್ಲರೆ ಸಾಲ ವ್ಯವಹಾರವನ್ನು ವಿಸ್ತರಿಸುವ ಉದ್ದೇಶದಿಂದ ಪಿಎಸ್ಬಿಲೋನ್ಸ್59ಮಿನಿಟ್ಸ್ (psbloansin59minutes) ಪೋರ್ಟಲ್‌ನಲ್ಲಿ ವಸತಿ ಮತ್ತು ವಾಹನ ಸೇರಿದಂತೆ ಇತರೆ ಉದ್ಯಮಿಗಳಿಗೆ ಸಾಲ ಸೌಲಭ್ಯ ಸಿಗಲಿದೆ.
ಪ್ರಸ್ತುತ ಈ ಪೋರ್ಟಲ್ನಡಿ ಲಘು ಮತ್ತು ಮಧ್ಯಮ ವಲಯದ (ಎಂಎಸ್ಎಂಇ) ಉದ್ಯಮಿಗಳಿಗೆ 59 ನಿಮಿಷದಲ್ಲಿ ಒಂದು ಕೋಟಿ ರೂಪಾಯಿ ಸಾಲ ನೀಡುತ್ತಿವೆ.
ಸಾಲ ನೀಡುವ ಮಿತಿಯನ್ನು ಎಸ್ಬಿಐ, ಯೂನಿಯನ್ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕುಗಳು ₹ 5 ಕೋಟಿಯವರೆಗೆ ವಿಸ್ತರಿಸಿವೆ. ಈಗ ಕೆಲವು ಸಾರ್ವಜನಿಕ ವಲಯದ ಬ್ಯಾಂಕುಗಳು ಇದೇ ಪೋರ್ಟಲ್ ಗೃಹ, ವಾಹನ ಸಾಲದಂತಹ ಚಿಲ್ಲರೆ ಉದ್ಯಮಗಳಿಗೆ ಬಳಸಿಕೊಳ್ಳುವ ಚಿಂತನೆ ವ್ಯಕ್ತಪಡಿಸಿವೆ.
ಬ್ಯಾಂಕ್ಗಳು ಈ ನಿಟ್ಟಿನಲ್ಲಿ ತಮ್ಮ ಕೆಲಸ ಮಾಡುತ್ತಿದ್ದು, ಮುಂದಿನ ಕೆಲವು ದಿನಗಳಲ್ಲಿ ಪೋರ್ಟಲ್‌ನಲ್ಲೇ ಮನೆ ಮತ್ತು ವಾಹನ ಸಾಲ ದೊರೆಯಲಿದೆ ಎಂದು ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಮ್ಯಾನೇಜರ್ ಸಲೀಲ್ ಕುಮಾರ್ ಸ್ವೈನ್ ತಿಳಿಸಿದ್ದಾರೆ.