ನವದೆಹಲಿ :ಅಡುಗೆ ಅನಿಲ ಎಲ್‌ಪಿಜಿ ರೀಫಿಲ್ ಸಿಲಿಂಡರ್ ಕಾಯ್ದಿರಿಸಲು ಇಂಡಿಯನ್ ಗ್ಯಾಸ್ ಗ್ರಾಹಕರು ಒಂದು ಮಿಸ್ಡ್ ಕಾಲ್ ಮಾಡಿದರೇ ಸಾಕು!
ದೇಶದಲ್ಲಿ ಎಲ್ಲಿಯಾದರೂ ಇಂಡಿಯನ್ ಆಯಿಲ್ ಸಿಲಿಂಡರ್ ಗ್ರಾಹಕರು ರೀಫಿಲ್ ಬುಕ್ಕಿಂಗಾಗಿ ಒಂದೇ ಒಂದು ಮಿಸ್ಡ್ ಕಾಲ್ ಅನ್ನು 8454955555 ನಂಬರ್ಗೆ ಕೊಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಗ್ರಾಹಕರ ದೀರ್ಘಕಾಲದ ಕರೆಗಳ ಮೂಲಕ ತಮ್ಮ ಸಿಲಿಂಡರ್ ಕಾಯ್ದಿರಿಸುವ ತಾಪತ್ರೆಯವನ್ನು ಮಿಸ್ಡ್ ಕಾಲ್ ಮುಖಾಂತರ ಕೊನೆಗೊಳ್ಳಲಿದೆ. ಸಾಮಾನ್ಯ ಕರೆಯ ದರಗಳು ಅನ್ವಯವಾಗುವ ಐವಿಆರ್ಎಸ್ ಕರೆಗಳಿಗೆ ಹೋಲಿಸಿದ್ರೆ ಯಾವುದೇ ಕರೆ ಶುಲ್ಕ ವಿಧಿಸಲಾಗುವುದಿಲ್ಲ. ಐವಿಆರ್ಎಸ್ ಅಥವಾ ವೃದ್ಧಾಪ್ಯದ ಗ್ರಾಹಕರಿಗೆ ಮತ್ತು ಗ್ರಾಮೀಣ ಪ್ರದೇಶದವರಿಗೆ ಈ ಸೌಲಭ್ಯವು ಸಾಕಷ್ಟು ನೆರವಾಗುತ್ತದೆ ಎಂದು ಹೇಳಿದೆ.