ನವದೆಹಲಿ:ಅಖಿಲ ಭಾರತ ವಿದ್ಯುತ್ ಬೇಡಿಕೆಯು ಬುಧವಾರ ಬೆಳಗ್ಗೆ ದಾಖಲೆಯ ಗರಿಷ್ಠ 185.82 ಗಿಗಾವ್ಯಾಟ್ (ಜಿಡಬ್ಲ್ಯೂ) ಮುಟ್ಟಿದೆ ಎಂದು ವಿದ್ಯುತ್ ಕಾರ್ಯದರ್ಶಿ ಎಸ್ ಎನ್ ಸಹೈ ತಿಳಿಸಿದ್ದಾರೆ.
ವಿದ್ಯುತ್ ಬೇಡಿಕೆ ಹೆಚ್ಚುತ್ತಲೇ ಇದೆ. ಭಾರತದಾದ್ಯಂತ ಮತ್ತೊಂದು ದಾಖಲೆಯ ಬೇಡಿಕೆಯಾದ 185.82 ಗಿಗಾವ್ಯಾಟ್ ಬಂದಿದೆ. ಅಂದರೆ, 185.822 ಮೆಗಾವ್ಯಾಟ್ ಇಂದು ಬೆಳಗ್ಗೆ 9: 35 ಗಂಟೆಗೆ ಬಂದಿದೆ. ಇದು 2020ರ ಡಿಸೆಂಬರ್ 30ರ ಅಖಿಲ ಭಾರತ ಬೇಡಿಕೆಯಾಗಿದ್ದ 182.89 ಜಿಡಬ್ಲ್ಯು ದಾಖಲೆಯನ್ನು ದಾಟಿದೆ ಎಂದು ಸಹೈ ಟ್ವೀಟ್ನಲ್ಲಿ ತಿಳಿಸಿದ್ದಾರೆ.
2020ರ ಡಿಸೆಂಬರ್ 30ರಂದು ಅಖಿಲ ಭಾರತ ವಿದ್ಯುತ್ ಬೇಡಿಕೆ 182.89 ಜಿವ್ಯಾಟ್ ಮುಟ್ಟಿತ್ತು. ವಿದ್ಯುತ್ ಸಚಿವಾಲಯದ ಮಾಹಿತಿಯ ಪ್ರಕಾರ, ಕಳೆದ ವರ್ಷದ ಜನವರಿಯಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ (ಒಂದು ದಿನದಲ್ಲಿ ಅತಿ ಹೆಚ್ಚು ಪೂರೈಕೆ) 170.97 ಜಿಡಬ್ಲ್ಯು ಆಗಿತ್ತು.