ಕರ್ನಾಟಕ

karnataka

ETV Bharat / business

ವಲಸಿಗರನ್ನು ತವರಿಗೆ ಕಳುಹಿಸುವಲ್ಲಿ ಕೇಂದ್ರದ ನೀತಿಗಳು ವಿಫಲ: ಚಿದಂಬರಂ ಕಿಡಿ - ವಲಸಿಗ ಕಾರ್ಮಿಕರ ಬಗ್ಗೆ ಚಿದಂಬರಂ ಪ್ರತಿಕ್ರಿಯೆ

ಲಾಕ್​ಡೌನ್ ಮಧ್ಯೆ ಹಲವು ಸಂಕಷ್ಟಗಳನ್ನು ಎದುರಿಸಿದ್ದ ವಲಸಿಗ ಕಾರ್ಮಿಕರು, ಸರ್ಕಾರದ ನಡೆಯಿಂದ ಬೇಸತ್ತರು. ಸರ್ಕಾರ ಕಾರ್ಮಿಕರ ಸಂಚಾರಕ್ಕೆ ಸಾರಿಗೆ ವ್ಯವಸ್ಥೆ ತಡವಾಗಿ ಕಲ್ಪಿಸಿತು. ಇದಕ್ಕೂ ಮೊದಲೇ ಅವರು ಕಾಲ್ನಡಿಗೆಯಲ್ಲಿ ಮನೆಗೆ ತೆರಳುತ್ತಿದ್ದರು. ಸರ್ಕಾರ ಈ ಬಗ್ಗೆ ವಿಳಂಬ ಧೋರಣೆ ತೋರಿದೆ ಎಂದು ಚಿದಂಬರಂ ಆಪಾದಿಸಿದರು.

P chidambaram
ಚಿದಂಬರಂ

By

Published : May 8, 2020, 7:56 PM IST

ನವದೆಹಲಿ: ವಲಸೆ ಕಾರ್ಮಿಕರನ್ನು ಅವರ ತವರಿಗೆ ಸಾಗಿಸಲು ಬಸ್​ ಮತ್ತು ರೈಲುಗಳನ್ನು ಒದಗಿಸುವ ನೀತಿಯನ್ನು ಕೇಂದ್ರಕ್ಕೆ ಸರಿಯಾಗಿ ವಿನ್ಯಾಸಗೊಳಿಸಲು ಆಗಲಿಲ್ಲ ಎಂದು ಕಾಂಗ್ರೆಸ್​ನ ಹಿರಿಯ ಮುಖಂಡ ಪಿ. ಚಿದಂಬರಂ ಕಿಡಿಕಾರಿದ್ದಾರೆ.

ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಡೆದ ರೈಲು ಅವಘಡದಲ್ಲಿ 14 ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ. ರೈಲು ಹಳಿ ಮೇಲೆ ಮಲಗಿದ್ದ ಕಾರ್ಮಿಕರ ಮೇಲೆ ಶುಕ್ರವಾರ ಬೆಳಗ್ಗೆ ಸರಕು ರೈಲು ಹರಿದು ಮೃತಪಟ್ಟರು. ಇದರ ಬೆನ್ನಲ್ಲೇ ಮಾಜಿ ಹಣಕಾಸು ಸಚಿವ ಕೇಂದ್ರ ವಿರುದ್ಧ ಕಿಡಿಕಾರಿದ್ದಾರೆ.

ಎರಡು ದಿನಗಳ ಹಿಂದೆ ನಾನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏಕೆ ಸಾವಿರಾರು ವಲಸೆ ಕಾರ್ಮಿಕರು ತಮ್ಮ ತವರು ರಾಜ್ಯಗಳಿಗೆ ಹೋಗುತ್ತಿದ್ದಾರೆ ಎಂಬ ಅಂಶವನ್ನು ಏಕೆ ಮರೆತು ಬಿಡುತ್ತಿವೆ ಎಂದು ಟ್ವಿಟರ್​ನಲ್ಲಿ ಕೇಳಿದ್ದೆ.

ವಲಸೆ ಕಾರ್ಮಿಕರನ್ನು ಸಾಗಿಸಲು ಬಸ್​​​ ಮತ್ತು ರೈಲುಗಳನ್ನು ಒದಗಿಸುವ ಸಾರಿಗೆ ನೀತಿಯನ್ನು ಸರಿಯಾಗಿ ವಿನ್ಯಾಸಗೊಳಿಸಲು, ಯೋಜಿಸಲು, ಸಮನ್ವಯಗೊಳಿಲು ಮತ್ತು ಕಾರ್ಯಗತಗೊಳಿಸಲು ಆಗಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಸರಣಿ ಟ್ವೀಟ್‌ಗಳಲ್ಲಿ ಟೀಕಿಸಿದರು.

ABOUT THE AUTHOR

...view details