ಕರ್ನಾಟಕ

karnataka

ETV Bharat / business

ಆರ್ಥಿಕ ಸಬಲೀಕರಣದಲ್ಲಿ ಬ್ಯಾಂಕ್​, ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಪಾತ್ರ ಕುರಿತು ನಾಳೆ ಮೋದಿ ಭಾಷಣ

ಎಂಎಸ್ಎಂಇಗಳು ಸೇರಿದಂತೆ ಮೂಲಸೌಕರ್ಯ, ಕೃಷಿ, ಸ್ಥಳೀಯ ಉತ್ಪಾದನೆಗೆ ಹಣಕಾಸು ಒದಗಿಸುವ ಮೂಲಕ ಭಾರತದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುವಲ್ಲಿ ಬ್ಯಾಂಕಿಂಗ್ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತದೆ. ಸರ್ಕಾರದ ಹಿರಿಯ ಅಧಿಕಾರಿಗಳು ಸಹ ನಾಳೆ ಸಂವಾದದಲ್ಲಿ ಭಾಗವಹಿಸಲಿದ್ದಾರೆ.

PM Modi
ಮೋದಿ

By

Published : Jul 28, 2020, 6:40 PM IST

ನವದೆಹಲಿ: ಬ್ಯಾಂಕ್​ಗಳು ಮೊತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ (ಎನ್​ಬಿಎಫ್​ಸಿ) ಭವಿಷ್ಯದ ದೃಷ್ಟಿ ಮತ್ತು ಮಾರ್ಗಸೂಚಿಯ ಕುರಿತು ನಾಳೆ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಲಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಮೋದಿ ಭಾಷಣದ ವೇಳೆ ಈ ವಲಯದ ಸ್ಟೇಕ್​ಹೋಲ್ಡರ್​ಗಳು ಸಹ ಪಾಲ್ಗೊಳ್ಳಲಿದ್ದಾರೆ. ಕ್ರೆಡಿಟ್ ಉತ್ಪನ್ನಗಳ ವಿತರಣೆಯ ಸಮರ್ಥ ಮಾದರಿಗಳು, ತಂತ್ರಜ್ಞಾನದ ಮೂಲಕ ಆರ್ಥಿಕ ಸಬಲೀಕರಣ, ಹಣಕಾಸು ಕ್ಷೇತ್ರದ ಸ್ಥಿರತೆ ಮತ್ತು ಸುಸ್ಥಿರತೆಗಾಗಿ ವಿವೇಕಯುತ ನಡೆಗಳ ಅನುಸರಣೆಯ ಬಗ್ಗೆ ಮಾತನಾಡಲಿದ್ದಾರೆ.

ಎಂಎಸ್ಎಂಇಗಳು ಸೇರಿದಂತೆ ಮೂಲಸೌಕರ್ಯ, ಕೃಷಿ, ಸ್ಥಳೀಯ ಉತ್ಪಾದನೆಗೆ ಹಣಕಾಸು ಒದಗಿಸುವ ಮೂಲಕ ಭಾರತದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುವಲ್ಲಿ ಬ್ಯಾಂಕಿಂಗ್ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತದೆ. ಸರ್ಕಾರದ ಹಿರಿಯ ಅಧಿಕಾರಿಗಳು ಸಹ ಸಂವಾದದಲ್ಲಿ ಭಾಗವಹಿಸಲಿದ್ದಾರೆ.

ABOUT THE AUTHOR

...view details