ಕರ್ನಾಟಕ

karnataka

ETV Bharat / business

ವಿಶ್ವದ ಅತಿ ಉದ್ದದ 'ಅಟಲ್​ ಟನಲ್'​ ಉದ್ಘಾಟಿಸಲಿರುವ ಮೋದಿ: 9ಕಿ.ಮೀ ಸುರಂಗದಲ್ಲಿದೆ​ ಭಾರತೀಯ ಇಂಜಿನಿಯರ್​ಗಳ ಕೌಶಲ್ಯ

ರೋಹ್ಟಾಂಗ್ ಪಾಸ್ ಕೆಳಗೆ ವ್ಯೂಹಾತ್ಮಕ ಸುರಂಗವನ್ನು ನಿರ್ಮಿಸುವ ಐತಿಹಾಸಿಕ ನಿರ್ಧಾರವನ್ನು 2000ದ ಜೂನ್ 03ರಂದು ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ತೆಗೆದುಕೊಳ್ಳಲಾಗಿತ್ತು. 2002ರ ಮೇ 26ರಂದು ಸುರಂಗದ ದಕ್ಷಿಣ ಭಾಗದ ಪ್ರವೇಶ ರಸ್ತೆಗೆ ಅಡಿಪಾಯ ಹಾಕಲಾಯಿತು.

PM Modi
ಪ್ರಧಾನಿ ಮೋದಿ

By

Published : Oct 1, 2020, 6:19 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 3ರಂದು ಬೆಳಗ್ಗೆ 10 ಗಂಟೆಗೆ ರೋಹ್ಟಂಗ್​ನಲ್ಲಿ ವಿಶ್ವದ ಅತಿ ಉದ್ದದ ಹೆದ್ದಾರಿಯಾದ ಅಟಲ್ ಸುರಂಗ ಮಾರ್ಗವನ್ನು ಉದ್ಘಾಟಿಸಲಿದ್ದಾರೆ.

ಅಟಲ್ ಸುರಂಗವು ವಿಶ್ವದಲ್ಲಿಯೇ ಅತಿ ಉದ್ದದ ಹೆದ್ದಾರಿಯ ಸುರಂಗವಾಗಿದೆ. 9.02 ಕಿ.ಮೀ ಉದ್ದದ ಈ ಸುರಂಗ ಮನಾಲಿಯಿಂದ ಲಹೌಲ್ ಸ್ಪಿತಿ ಕಣಿವೆಯನ್ನು ವರ್ಷವಿಡೀ ಸಂಪರ್ಕಿಸಲಿದೆ. ಈ ಮುನ್ನ ಭಾರಿ ಹಿಮ ವರ್ಷದ ಕಾರಣ 6 ತಿಂಗಳು ಕಾಲ ಕಣಿವೆಯ ಸಂಪರ್ಕ ಕಡಿತವಾಗುತ್ತಿತ್ತು.

ಈ ಸುರಂಗವನ್ನು ಹಿಮಾಲಯದ ಪಿರ್ ಪಂಜಾಲ್ ಶ್ರೇಣಿಯಲ್ಲಿ ಅತ್ಯಾಧುನಿಕ ವಿಶೇಷಣವಾದ ಅಲ್ಟ್ರಾ ಮಾಡರ್ನ್‌ ಸ್ಪೆಸಿಫಿಕೇಷನ್ಸ್​ನಿಂದ ನಿರ್ಮಿಸಲಾಗಿದ್ದು, ಇದನ್ನು ಸಮುದ್ರ ಮಟ್ಟದಿಂದ ಸರಾಸರಿ 3000 ಮೀಟರ್ ಎತ್ತರದಲ್ಲಿದೆ. ಈ ಸುರಂಗಮಾರ್ಗವು ಮನಾಲಿ ಮತ್ತು ಲೆಹ್ ನಡುವಿನ ಅಂತರವನ್ನು 46 ಕಿ.ಮೀ. ತಗ್ಗಿಸಲಿದ್ದು, 4ರಿಂದ 5 ಗಂಟೆಗಳ ಸಮಯ ಉಳಿಸಲಿದೆ.

ಅಟಲ್ ಸುರಂಗದ ದಕ್ಷಿಣ ಭಾಗದಲ್ಲಿ (ಎಸ್​ಪಿ) ಮನಾಲಿಯಿಂದ 25 ಕಿ.ಮೀ. ದೂರದಲ್ಲ, 3060 ಮೀಟರ್ ಎತ್ತರದಲ್ಲಿದ್ದರೆ, ಉತ್ತರದ ಭಾಗದ (ಎನ್​ಪಿದ ಸುರಂಗವು ಲಹೌಲ್ ಕಣಿವೆಯ ಸಿಸ್ಸು, ತೆಲಿಂಗ್ ಗ್ರಾಮದ ಬಳಿಯಿದ್ದು 3071 ಮೀಟರ್ ಎತ್ತರದಲ್ಲಿದೆ. ಇದು ಕುದುರೆಯ ಲಾಳದ ಆಕಾರದಲ್ಲಿರುವ ಏಕ ಕೊಳವೆಯ ದ್ವಿಪಥ ಮಾರ್ಗದ ಸುರಂಗವಾಗಿದ್ದು, 8 ಮೀಟರ್ ರಸ್ತೆ ಮಾರ್ಗ ಒಳಗೊಂಡಿದೆ. ಇದರ ಎತ್ತರ 5.525 ಮೀಟರ್ ಎತ್ತರದವರೆಗಿನ ವಾಹನಗಳ ಸ್ಪಷ್ಟ ಓಡಾಟಕ್ಕೆ ಅವಕಾಶವಿದೆ.

ಅಟಲ್​ ಟನಲ್

10.5 ಮೀಟರ್ ಅಗಲವಿದ್ದು, ಮುಖ್ಯ ಸುರಂಗದಲ್ಲಿ 3.6 x 2.25 ಮೀಟರ್ ಅಗ್ನಿ ನಿರೋಧಕ ತುರ್ತು ನಿರ್ಗಮನದ ಸುರಂಗವನ್ನೂ ಒಳಗೊಂಡಿದೆ. ಅಟಲ್ ಸುರಂಗವನ್ನು 3,000 ಕಾರುಗಳು ಮತ್ತು 1,500 ಟ್ರಕ್​ಗಳು ನಿತ್ಯ ಗರಿಷ್ಠ ಗಂಟೆಗೆ 80 ಕಿ.ಮೀ. ವೇಗದಲ್ಲಿ ಓಡಾಡಲು ಸಾಧ್ಯವಾಗುವಂತೆ ವಿನ್ಯಾಸ ಮಾಡಲಾಗಿದೆ.

ಅಟಲ್​ ಟನಲ್

ಸುಸಜ್ಜಿತ ಎಲೆಕ್ಟ್ರೋ ಮೆಕ್ಯಾನಿಕಲ್ ವ್ಯವಸ್ಥೆ ಹೊಂದಿದ್ದು, ಇದರಲ್ಲಿ ಸೆಮಿ ಟ್ರಾನ್ಸ್ ವರ್ಸ್ ವಾತಾಯನ ವ್ಯವಸ್ಥೆ, ಎಸ್​​ಸಿಎಡಿಎ ನಿಯಂತ್ರಿತ ಅಗ್ನಿಶಾಮಕ ವ್ಯವಸ್ಥೆ, ಪ್ರಕಾಶಮಾನ ಬೆಳಕು ಮತ್ತು ನಿಗಾ ವ್ಯವಸ್ಥೆಯೂ ಸೇರಿದೆ.

ಸುರಂಗದ ವೈಶಿಷ್ಟ್ಯಗಳು

  • ಸುರಂಗದ ಎರಡೂ ಬದಿಗಳಲ್ಲಿ ಪ್ರವೇಶ ನಿರ್ಬಂಧ
  • ತುರ್ತು ಸಂವಹನಕ್ಕಾಗಿ ಪ್ರತಿ 150 ಮೀಟರಿಗೊಂದರಂತೆ ದೂರವಾಣಿ ಸಂಪರ್ಕಗಳು
  • ಪ್ರತಿ 60 ಮೀಟರಿಗೊಂದರಂತೆ ಅಗ್ನಿಶಾಮಕ ವ್ಯವಸ್ಥೆಗಳು.
  • ಪ್ರತಿ 250 ಮೀಟರ್ ಗೆ ಒಂದರಂತೆ ಸಿಸಿಟಿವಿ ಕ್ಯಾಮೆರಾಗಳೊಂದಿಗೆ ಘಟನೆಯ ಸ್ವಯಂ ಪತ್ತೆ ವ್ಯವಸ್ಥೆ.
  • ಪ್ರತಿ 1 ಕಿ.ಮೀ.ನಲ್ಲಿ ವಾಯು ಗುಣಮಟ್ಟದ ನಿಗಾ
  • ಪ್ರತಿ 25 ಮೀಟರ್ ನಲ್ಲಿ ಸ್ಥಳಾಂತರಿಸಬಹುದಾದ ದೀಪ / ನಿರ್ಗಮನ ಚಿಹ್ನೆಗಳು
  • ಸುರಂಗದುದ್ದಕ್ಕೂ ಪ್ರಸಾರ ವ್ಯವಸ್ಥೆ
  • ಪ್ರತಿ 50 ಮೀಟರ್​ನಲ್ಲಿ ಫೈರ್ ರೇಟೆಡ್ ಡ್ಯಾಂಪರ್​ಗಳು
  • ಪ್ರತಿ 60 ಮೀಟರ್​ಗೆ ಒಂದು ಕ್ಯಾಮರಾ

ರೋಹ್ಟಾಂಗ್ ಪಾಸ್ ಕೆಳಗೆ ವ್ಯೂಹಾತ್ಮಕ ಸುರಂಗವನ್ನು ನಿರ್ಮಿಸುವ ಐತಿಹಾಸಿಕ ನಿರ್ಧಾರವನ್ನು 2000ದ ಜೂನ್ 03ರಂದು ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ತೆಗೆದುಕೊಳ್ಳಲಾಗಿತ್ತು. 2002ರ ಮೇ 26ರಂದು ಸುರಂಗದ ದಕ್ಷಿಣ ಭಾಗದ ಪ್ರವೇಶ ರಸ್ತೆಗೆ ಅಡಿಪಾಯ ಹಾಕಲಾಯಿತು.

ABOUT THE AUTHOR

...view details