ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಸಮಾವೇಶ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ.
ವಿಶ್ವ ಆರ್ಥಿಕ ವೇದಿಕೆ ದಾವೋಸ್ ಶೃಂಗ ಉದ್ದೇಶಿಸಿ ಸಂಜೆ ನಮೋ ಭಾಷಣ: ವಿಷಯ ಯಾವುದು ಗೊತ್ತೇ?
ಜಗತ್ತಿನಾದ್ಯಂತದ 400ಕ್ಕೂ ಹೆಚ್ಚು ಉದ್ಯಮಗಳ ಮುಖಂಡರು ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದು, ಇದರಲ್ಲಿ ಪ್ರಧಾನಿ ಮೋದಿ ಅವರು 'ನಾಲ್ಕನೇ ಕೈಗಾರಿಕಾ ಕ್ರಾಂತಿ: ಮನುಕುಲದ ಒಳಿತಿಗಾಗಿ ತಂತ್ರಜ್ಞಾನದ ಬಳಕೆ' ಕುರಿತು ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಸಮಾವೇಶದಲ್ಲಿ ಮಾತನಾಡಲಿದ್ದಾರೆ.
PM Modi
ಜಗತ್ತಿನಾದ್ಯಂತದ 400ಕ್ಕೂ ಹೆಚ್ಚು ಉದ್ಯಮಗಳ ಮುಖಂಡರು ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದು, ಇದರಲ್ಲಿ ಪ್ರಧಾನಿಯವರು 'ನಾಲ್ಕನೇ ಕೈಗಾರಿಕಾ ಕ್ರಾಂತಿ: ಮನುಕುಲದ ಒಳಿತಿಗಾಗಿ ತಂತ್ರಜ್ಞಾನದ ಬಳಕೆ' ಕುರಿತು ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಸಿಇಒಗಳೊಂದಿಗೆ ಸಂವಾದವನ್ನೂ ನಡೆಸಲಿದ್ದಾರೆ.
ಕೋವಿಡ್ ನಂತರದ ಜಗತ್ತಿನಲ್ಲಿ ವಿಶ್ವ ಆರ್ಥಿಕ ವೇದಿಕೆಯ ಹೊಸ ಆರಂಭ ಉಪಕ್ರಮದ ಚಾಲನೆಯೂ ದಾವೋಸ್ ಸಮಾವೇಶದ ಕಾರ್ಯಸೂಚಿಯಲ್ಲಿದೆ.