ಕರ್ನಾಟಕ

karnataka

By

Published : Nov 5, 2020, 7:31 PM IST

ETV Bharat / business

ವಿಶ್ವಾಸಾರ್ಹತೆ ಜತೆಗೆ ಆದಾಯ ಬಯಸಿದರೆ ನೀವು ಭಾರತಕ್ಕೆ ಬನ್ನಿ: ಜಾಗತಿಕ ಹೂಡಿಕೆದಾರಿಗೆ ಮೋದಿ ಆಹ್ವಾನ

ನೀವು ವಿಶ್ವಾಸಾರ್ಹತೆಯೊಂದಿಗೆ ಆದಾಯ ಬಯಸಿದರೆ, ಅದು ಇರುವ ಸ್ಥಳ ಭಾರತವಾಗಿದೆ. ನೀವು ಪ್ರಜಾಪ್ರಭುತ್ವದೊಂದಿಗೆ ಬೇಡಿಕೆಯನ್ನು ಬಯಸಿದರೆ, ಅದು ಕೂಡ ಇರುವುದು ಭಾರತದಲ್ಲಿ. ನೀವು ಸುಸ್ಥಿರತೆಯೊಂದಿಗೆ ಸ್ಥಿರತೆಯನ್ನು ಬಯಸಿದರೆ, ಅದನ್ನು ನೀವು ಭಾರತದಲ್ಲಿ ಪಡೆಯಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಹೂಡಿಕೆದಾರಿಗೆ ಆಹ್ವಾನಿಸಿದರು.

PM Modi
ಪ್ರಧಾನಿ ಮೋದಿ

ನವದೆಹಲಿ: ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಧೈರ್ಯದಿಂದ ಹೋರಾಡುತ್ತಿರುವ ಭಾರತದ ಪಾತ್ರವನ್ನು ಪ್ರಪಂಚವೇ ನೋಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಕೇಂದ್ರ ಹಣಕಾಸು ಸಚಿವಾಲಯ ಹಾಗೂ ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ ಆಯೋಜಿಸಿದ್ದ ವರ್ಚ್ಯುವಲ್ ಗ್ಲೋಬಲ್ ಇನ್ವೆಸ್ಟರ್ ರೌಂಡ್‌ಟೇಬಲ್ (ವಿಜಿಐಆರ್) ಸಭೆಯ ಅಧ್ಯಕ್ಷತೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಂಕ್ರಾಮಿಕ ಹೋರಾಟದಲ್ಲಿ ಭಾರತದ ರಾಷ್ಟ್ರೀಯ ಪಾತ್ರವನ್ನು ಜಗತ್ತೇ ನೋಡುತ್ತುತ್ತರಿದೆ. ಪ್ರಪಂಚಕ್ಕೆ ಭಾರತದ ನೈಜ್ಯ ಸಾಮರ್ಥ್ಯ ಅರ್ಥೈಸಿಕೊಂಡಿದೆ ಎಂದರು.

ನೀವು ವಿಶ್ವಾಸಾರ್ಹತೆಯೊಂದಿಗೆ ಆದಾಯ ಬಯಸಿದರೆ, ಅದು ಇರುವ ಸ್ಥಳ ಭಾರತವಾಗಿದೆ. ನೀವು ಪ್ರಜಾಪ್ರಭುತ್ವದೊಂದಿಗೆ ಬೇಡಿಕೆಯನ್ನು ಬಯಸಿದರೆ, ಅದು ಕೂಡ ಇರುವುದು ಭಾರತದಲ್ಲಿ. ನೀವು ಸುಸ್ಥಿರತೆಯೊಂದಿಗೆ ಸ್ಥಿರತೆಯನ್ನು ಬಯಸಿದರೆ, ಅದನ್ನು ನೀವು ಭಾರತದಲ್ಲಿ ಪಡೆಯಬಹುದು. ಬೆಳವಣಿಗೆಯೊಂದಿಗೆ​ ಹಸಿರು ವಿಧಾನ ಇಚ್ಛಿಸಿದರೂ ಅದು ಕೂಡ ಭಾರತದಲ್ಲಿದೆ ಎಂದು ಪ್ರಧಾನಿ ಮೋದಿ ಜಾಗತಿಕ ಹೂಡಿಕೆದಾರರಿಗೆ ಭಾರತಕ್ಕೆ ಬರುವಂತೆ ಆಹ್ವಾನ ನೀಡಿದರು.

ಈ ಸಾಂಕ್ರಾಮಿಕ ರೋಗದಲ್ಲಿ ಭಾರತವು ಗಮನಾರ್ಹ ಸ್ಥಿರತೆಯನ್ನು ತೋರಿಸಿದೆ. ವೈರಸ್ ವಿರುದ್ಧ ಹೋರಾಡುವಲ್ಲಾಗಲಿ ಅಥವಾ ಆರ್ಥಿಕತೆಯ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ನಮ್ಮ ವ್ಯವಸ್ಥೆಯ ಶಕ್ತಿ ಸಾಮರ್ಥ್ಯ, ನಮ್ಮ ಜನರ ಬೆಂಬಲ ಮತ್ತು ನಮ್ಮ ನೀತಿಗಳನ್ನು ಸ್ಥಿರತೆಯಿಂದ ನಡೆಸಿಕೊಂಡು ಹೋಗಲಾಗುತ್ತಿದೆ ಎಂದು ಹೇಳಿದರು.

ಆತ್ಮನಿರ್ಭರ ಆಗಬೇಕೆಂಬ ಭಾರತದ ಅನ್ವೇಷಣೆ ಬರೀ ದೃಷ್ಟಿಕೋನವಲ್ಲ. ಅದೊಂದು ಯೋಜಿತ ಆರ್ಥಿಕ ತಂತ್ರವಾಗಿದೆ. ಭಾರತವನ್ನು ಜಾಗತಿಕ ಉತ್ಪಾದನಾ ಶಕ್ತಿಯ ಕೇಂದ್ರವನ್ನಾಗಿ ಮಾಡಲು, ನಮ್ಮ ವ್ಯವಹಾರಗಳ ಸಾಮರ್ಥ್ಯ ಹಾಗೂ ನಮ್ಮ ಕಾರ್ಮಿಕರ ಕೌಶಲ್ಯಗಳನ್ನು ಬಳಸಿಕೊಳ್ಳುವ ಗುರಿಯ ತಂತ್ರ ಒಳಗೊಂಡಿದೆ ಎಂದು ತಿಳಿಸಿದರು.

ಜಾಗತಿಕ ಸಾಂಸ್ಥಿಕ ಹೂಡಿಕೆದಾರರ ಸಭೆಗೆ ಅಮೆರಿಕ, ಯುರೋಪ್, ಕೆನಡಾ, ಕೊರಿಯಾ, ಜಪಾನ್, ಮಧ್ಯಪ್ರಾಚ್ಯ, ಆಸ್ಟ್ರೇಲಿಯಾ ಮತ್ತು ಸಿಂಗಾಪುರ ಸೇರಿದಂತೆ ಪ್ರಮುಖ ದೇಶಗಳ ಪ್ರತಿನಿಧಿಗಳು ಭಾಗವಹಿಸುವರು. ಇವುಗಳಲ್ಲಿ ಕೆಲವು ಸಿಂಗಾಪುರದ ತೆಮಾಸೆಕ್ ಹೋಲ್ಡಿಂಗ್ಸ್, ಕೆನಡಿಯನ್ ಇನ್ವೆಸ್ಟ್​ಮೆಂಟ್ ಫಂಡ್, ಕೊರಿಯನ್ ಫಂಡ್ಸ್, ಜೆಬಿಐಸಿ, ಆಸ್ಟ್ರೇಲಿಯನ್ ಸೂಪರ್​ನಂತಹ ಹಣಕಾಸು ಹೂಡಿಕೆದಾರರು ಭಾಗವಹಿಸಿದ್ದರು.

ಈ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಇತರ ಗಣ್ಯರು ಇದ್ದರು.
ರತನ್ ಟಾಟಾ, ಮುಖೇಶ್ ಅಂಬಾನಿ, ನಂದನ್ ನಿಲೇಕಣಿ, ದೀಪಕ್ ಪರೇಖ್, ಉದಯ್ ಕೊಟಕ್ ಮತ್ತು ದಿಲೀಪ್ ಸಂಘ್ವಿ ಅವರು ಸಹ ರೌಂಡ್‌ಟೇಬಲ್‌ನಲ್ಲಿ ಭಾಗವಹಿಲಿದ್ದಾರೆ ಎಂದು ಹಣಕಾಸು ಕಾರ್ಯದರ್ಶಿ ಈ ಹಿಂದೆ ಹೇಳಿದ್ದರು.

ABOUT THE AUTHOR

...view details