ಕರ್ನಾಟಕ

karnataka

ETV Bharat / business

5 ವರ್ಷದಲ್ಲಿ ಮೋದಿ ಆ್ಯಂಡ್​ ಟೀಂ​ ದೇಶ- ವಿದೇಶ ಸಂಚಾರಕ್ಕೆ  ವ್ಯಯಿಸಿದ್ದು 393 ಕೋಟಿ ರೂ - undefined

ನಗರದ ನಿವಾಸಿ ಆರ್​ಟಿಐ ಕಾರ್ಯಕರ್ತ ಅನಿಲ್ ಗಲಗಲಿ ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಧಾನಿ ಮತ್ತು ಮಂತ್ರಿ ಮಂಡಲದ ಸಚಿವರ ದೇಶಿ ಹಾಗೂ ವಿದೇಶಿ ಸಂಚಾರದ ಖರ್ಚಿನ ವಿವರ ನೀಡುವಂತೆ ಅರ್ಜಿ ಹಾಕಿದ್ದರು.

ಸಾಂದರ್ಭಿಕ ಚಿತ್ರ

By

Published : May 12, 2019, 6:34 AM IST

ನವದೆಹಲಿ: ಮಾಹಿತಿ ಹಕ್ಕು ಕಾಯ್ದೆ (ಆರ್​ಟಿಐ) ಅಡಿ ಅರ್ಜಿದಾರ ಪಡೆದ ಮಾಹಿತಿ ಅನ್ವಯ, ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಸಂಪುಟದ ಸಚಿವರು ಕಳೆದ ಐದು ವರ್ಷಗಳಲ್ಲಿ ದೇಶ- ವಿದೇಶ ಸಂಚಾರಕ್ಕೆ ₹ 393 ಕೋಟಿ ಖರ್ಚು ಮಾಡಿದ್ದಾರೆಂದು ತಿಳಿದು ಬಂದಿದೆ.

ನಗರದ ನಿವಾಸಿ ಆರ್​ಟಿಐ ಕಾರ್ಯಕರ್ತ ಅನಿಲ್ ಗಲಗಲಿ ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಧಾನಿ ಮತ್ತು ಮಂತ್ರಿ ಮಂಡಲದ ಸಚಿವರ ದೇಶಿ ಹಾಗೂ ವಿದೇಶಿ ಸಂಚಾರದ ಖರ್ಚಿನ ವಿವರ ನೀಡುವಂತೆ ಅರ್ಜಿ ಹಾಕಿದ್ದರು. ಮೋದಿ ಅಧಿಕಾರ ವಹಿಸಿಕೊಂಡ 2014ರ ಮೇ ತಿಂಗಳಿಂದ ಹಿಡಿದು ಈ ಐದು ವರ್ಷಗಳ ವಿತ್ತೀಯ ವರ್ಷಗಳ ಖರ್ಚ ಒಳಗೊಂಡಿದೆ.

ಪ್ರಧಾನಿ ಮತ್ತು ಸಂಪುಟ ಸದಸ್ಯರ ವಿದೇಶ ಪ್ರವಾಸಕ್ಕೆ ₹ 263 ಕೋಟಿ ಹಾಗೂ ದೇಶದೊಳಗಿನ ಸಂಚಾರಕ್ಕೆ ₹ 48 ಕೋಟಿ ವೆಚ್ಚ ಮಾಡಲಾಗಿದೆ. ರಾಜ್ಯ ಖಾತೆ ಸಚಿವರ ವಿದೇಶಿ ಸಂಚಾರಕ್ಕೆ ₹ 29 ಕೋಟಿ ಮ್ತತು ದೇಶದ ಒಳಗಿನ ನಾನಾ ಸ್ಥಳಗಳ ಭೇಟಿಗೆ ₹ 53 ಕೋಟಿ ವಿನಿಯೋಗಿಸಲಾಗಿದೆ. 2014-15ರಲ್ಲಿ ಪ್ರಧಾನಿ ಮತ್ತು ಸಂಪುಟ ಸಹದ್ಯೋಗಿಗಳ ದೇಶ- ವಿದೇಶ ಭೇಟಿಗೆ ₹ 88 ಕೋಟಿ ಖರ್ಚು ಮಾಡಲಾಗಿದೆ ಎಂದು ಸಂಪುಟ ವ್ಯವಹಾರಗಳ ಹಣಕಾಸು ನಿರ್ವಹಣೆ ಕಚೇರಿ ಆರ್​ಟಿಐ ಅರ್ಜಿಗೆ ಉತ್ತರಿಸಿದೆ.

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಆರ್​ಟಿಐ ಕಾರ್ಯಕರ್ತ ಗಲಗಲಿ, ಪ್ರವಾಸದ ಖರ್ಚಿನ ವಿವರವನ್ನು ಪ್ರತ್ಯೇಕವಾಗಿ ಏಕೆ ಇರಿಸಿಲ್ಲ. ಪಾರದರ್ಶಕತೆ ಅನುಸರಿಸುತ್ತಿಲ್ಲ. ಭೇಟಿಯ ವೆಚ್ಚದ ಮಾಹಿತಿ ಸಂಪೂರ್ಣವಾದ ವಿವರ ಒದಗಿಸುತ್ತಿಲ್ಲ. ಸರ್ಕಾರ ತನ್ನ ಸಚಿವರ ಪ್ರತಿ ಭೇಟಿಯ ಮಾಹಿತಿಯನ್ನು ಅಚ್ಚುಕಟ್ಟಾಗಿ ದಾಖಲಿಸಿ ಸಾರ್ವಜನಿಕರಿಗೆ ನೀಡಬೇಕು ಎಂದು ಹೇಳಿದ್ದಾರೆ.

For All Latest Updates

TAGGED:

ABOUT THE AUTHOR

...view details