ಸೋಲನ್:ನೋಟು ರದ್ದತಿ ಘೋಷಣೆ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟ ಸಚಿವರನ್ನು ಗೃಹ ಬಂಧನದಲ್ಲಿ ಇರಿಸಿದ್ದರು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಹಿಮಾಚಲ ಪ್ರದೇಶದ ಸೋಲನ್ನಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, 'ನೋಟು ರದ್ದತಿ ಘೋಷಿಸುವ ಮುನ್ನ ಪ್ರಧಾನಿ ಮೋದಿ ಅವರು 7 ರೇಸ್ ಕೋರ್ಸ್ ರಸ್ತೆ ನಿವಾಸದಲ್ಲಿ ಸಂಪುಟ ಸಚಿವರನ್ನು ಕೂಡಿ ಹಾಕಿದ್ದರು. ಇದುವೇ ಸತ್ಯವಾದದ್ದು. ನನ್ನ ಭದ್ರತೆಗಾಗಿಯೂ ವಿಶೇಷ ರಕ್ಷಣಾ ತಂಡವನ್ನು (ಸ್ಪೆಶಲ್ ಪ್ರೊಟೆಕ್ಷನ್ ಗ್ರೂಪ್) ನಿಯೋಜಿಸಿದ್ದರು. ಅವರು ನನಗೆ ಈ ವಿಷಯವನ್ನು ತಿಳಿಸಿದರು' ಎಂದು ಹೇಳಿದ್ದಾರೆ.