ನವದೆಹಲಿ: ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾ ನೀಡಿದ್ದ ಪ್ರದರ್ಶನದಿಂದ ನಾವು ಬಹಳಷ್ಟು ಕಲಿಯಬಹುದು. ಆಟಗಾರರೆಲ್ಲ ಸವಾಲಿನ ಪರಿಸ್ಥಿತಿಗಳ ನಡುವೆಯೂ ಉತ್ತಮ ಪ್ರದರ್ಶನ ನೀಡಿದರು. ತಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಂಡರು. ಹೆಚ್ಚಿನ ಆಟಗಾರರಿಗೆ ಅನುಭವದ ಕೊರತೆಯಿದ್ದರೂ ಸಿಕ್ಕ ಅವಕಾಶದಲ್ಲಿ ಇತಿಹಾಸ ಬರೆದಿದ್ದಾರೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು.
ಆಸ್ಟ್ರೇಲಿಯಾದಲ್ಲಿ ನಮ್ಮ ಕ್ರಿಕೆಟ್ ತಂಡದ ಐತಿಹಾಸಿಕ ವಿಜಯದಿಂದ ಸ್ಫೂರ್ತಿ ಪಡೆಯಬೇಕೆಂದು ಯುಕರಿಗೆ ಅಸ್ಸೋಂನ ಟೋಡ್‌ನ ತೇಜ್‌ಪುರ ವಿಶ್ವವಿದ್ಯಾಲಯದ 18ನೇ ಘಟಿಕೋತ್ಸವದಲ್ಲಿ ಕರೆಕೊಟ್ಟ ಪ್ರಧಾನಿ, ಭಾರತವು ಗಬ್ಬಾದಲ್ಲಿ ಕಂಡಂತೆ ಕಡಿಮೆ ಅನುಭವದೊಂದಿಗೆ ಸವಾಲುಗಳನ್ನು ಎದುರಿಸಬೇಕು. ಇದುವೇ ಆತ್ಮನಿರ್ಭರ ಭಾರತದ ಸಾರವಾಗಿದೆ ಎಂದು ಹೇಳಿದರು.
ಆಸ್ಟ್ರೇಲಿಯಾದ ಗಬ್ಬಾದಲ್ಲಿ ಜಯಭೇರಿ ಬಾರಿಸಿದ ನಂತರ ಭಾರತೀಯ ಕ್ರಿಕೆಟ್ ತಂಡವನ್ನು ಪ್ರಶಂಸಿಸಿದ್ಧ ಮೋದಿ, ಸಕಾರಾತ್ಮಕ ಮನಸ್ಥಿತಿಯು ಸಕಾರಾತ್ಮಕ ಫಲಿತಾಂಶಗಳಿಗೆ ಕಾರಣವಾಗುತ್ತದೆ. ಇದು ಆತ್ಮನಿರ್ಭರ ಭಾರತದ ಸಂಕೇತ ಎಂದರು.