ಕರ್ನಾಟಕ

karnataka

ETV Bharat / business

ಕೊರೊನಾ ಸಂತ್ರಸ್ತರಿಗೆ ಪಿಎಂ ಕೇರ್ಸ್​ ನಿಧಿಯನ್ನೇಕೆ ಬಳಸುತ್ತಿಲ್ಲ: ಮೋದಿಗೆ ಕಾಂಗ್ರೆಸ್ ಪ್ರಶ್ನೆ - Congress PM Cares Fund

ನಾವು ಸಿಎಜಿ ಅಥವಾ ಇತರ ಯಾವುದೇ ವಿಶ್ವಾಸಾರ್ಹ ಸ್ವತಂತ್ರ ಸಂಸ್ಥೆಯು ಈ ಬಗ್ಗೆ ಸ್ವತಂತ್ರ ಲೆಕ್ಕಪರಿಶೋಧನೆ ಮಾಡಬೇಕೆಂದು ಒತ್ತಾಯಿಸುತ್ತೇವೆ. ಸಾರ್ವಜನಿಕ ನಿಧಿಯಿಂದ ಕೇಳಲು ಹೆಚ್ಚಿನದ್ದೇನೂ ಇಲ್ಲ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.

Abhishek Manu Singhvi
ಅಭಿಷೇಕ್ ಮನು ಸಿಂಗ್ವಿ

By

Published : May 12, 2020, 6:45 PM IST

ನವದೆಹಲಿ: ಪಿಎಂ ಕೇರ್ಸ್​ ಫಂಡ್​ ಬಗ್ಗೆ ಕಾಂಗ್ರೆಸ್‌ ಮತ್ತೆ ಪ್ರಸ್ತಾಪ ಮಾಡಿದ್ದು ಕೇಂದ್ರದ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದೆ. ಕೋವಿಡ್​-19 ರೋಗಿಗಳಿಗೆ ಈ ನಿಧಿಯ ಹಣವನ್ನೇಕೆ ವ್ಯಯಿಸುತ್ತಿಲ್ಲ?. ಈ ಬಗ್ಗೆ ಮಹಾಲೇಖಪಾಲರು (ಸಿಎಜಿ) ಸ್ವತಂತ್ರ ತನಿಖೆ ಮಾಡಬೇಕು ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಒತ್ತಾಯಿಸಿದರು.

ನಾವು ಸಿಎಜಿ ಅಥವಾ ಇತರ ಯಾವುದೇ ವಿಶ್ವಾಸಾರ್ಹ ಸ್ವತಂತ್ರ ಸಂಸ್ಥೆಯು ಈ ಬಗ್ಗೆ ಸ್ವತಂತ್ರ ಲೆಕ್ಕಪರಿಶೋಧನೆ ಮಾಡಬೇಕೆಂದು ಬಯಸುತ್ತೇವೆ ಎಂದರು.

ಕೋವಿಡ್ -19 ಸಾಂಕ್ರಾಮಿಕ ಸಂದರ್ಭದಲ್ಲಿ ಜನರ ಕಲ್ಯಾಣಕ್ಕಾಗಿ ತೆಗೆದುಕೊಳ್ಳಬೇಕಾದ ಅವಶ್ಯಕತೆಗಳಿಗೆ ವಿರುದ್ಧವಾಗಿ ಪ್ರಧಾನಿ ನರೇಂದ್ರ ಮೋದಿ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ABOUT THE AUTHOR

...view details