ಕರ್ನಾಟಕ

karnataka

ETV Bharat / business

'ಗೂಗಲ್​ ಪೇ' ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕೇಂದ್ರ, RBIಗೆ ದೆಹಲಿ ಹೈಕೋರ್ಟ್​ ನೋಟಿಸ್​ - Business News

ಗೂಗಲ್ ಇಂಡಿಯಾ ಡಿಜಿಟಲ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್‌ಗೆ ಯುಪಿಐ ವ್ಯವಸ್ಥೆಯಡಿ ತನ್ನ ಅಪ್ಲಿಕೇಶನ್‌ನಲ್ಲಿ ಡೇಟಾ ಸಂಗ್ರಹಿಸದಿರಲು ಮತ್ತು ಅದರ ಹೋಲ್ಡಿಂಗ್​ ಅಥವಾ ಮೂಲ ಕಂಪನಿ ಸೇರಿದಂತೆ ಯಾವುದೇ ಮೂರನೇ ವ್ಯಕ್ತಿಯೊಂದಿಗೆ ಡೇಟಾ ಹಂಚಿಕೊಳ್ಳದಂತೆ ಮನವಿ ಮಾಡುವಂತೆ ದೆಹಲಿ ಹೈಕೋರ್ಟ್​ನಿಂದ ಆರ್​ಬಿಐ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಲಾಗಿದೆ.

ಗೂಗಲ್​ ಪೇ

By

Published : Aug 24, 2020, 6:42 PM IST

ನವದೆಹಲ್ಲಿ: ದತ್ತಾಂಶ ಸ್ಥಳೀಕರಣ, ಡೇಟಾ ಸಂಗ್ರಹಣೆ ಮತ್ತು ಹಂಚಿಕೆ ಮಾನದಂಡಗಳಿಗೆ ಸಂಬಂಧಿಸಿದ ಆರ್‌ಬಿಐ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಗೂಗಲ್ ಪೇ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಸಲ್ಲಿಸಿ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತು ಇತರರಿಗೆ ನೋಟಿಸ್ ನೀಡಿದೆ.

ಗೂಗಲ್ ಇಂಡಿಯಾ ಡಿಜಿಟಲ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್‌ಗೆ ಯುಪಿಐ ವ್ಯವಸ್ಥೆಯಡಿ ತನ್ನ ಅಪ್ಲಿಕೇಶನ್‌ನಲ್ಲಿ ಡೇಟಾ ಸಂಗ್ರಹಿಸದಿರಲು ಮತ್ತು ಅದರ ಹೋಲ್ಡಿಂಗ್​ ಅಥವಾ ಮೂಲ ಕಂಪನಿ ಸೇರಿದಂತೆ ಯಾವುದೇ ಮೂರನೇ ವ್ಯಕ್ತಿಯೊಂದಿಗೆ ಡೇಟಾ ಹಂಚಿಕೊಳ್ಳದಂತೆ ಮನವಿ ಮಾಡುವಂತೆ ಅರ್ಜಿದಾರರು ಕೋರಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರ ಪೀಠದಲ್ಲಿ ವಿಚಾರಣೆ ನಡೆದಿದ್ದು, ಸೆಪ್ಟೆಂಬರ್ 24 ರಂದು ಹೆಚ್ಚಿನ ವಿಚಾರಣೆ ಸಂಬಂಧ ಈ ವಿಷಯ ಚರ್ಚಿಸುವುದಾಗಿ ಹೈಕೋರ್ಟ್​ ಹೇಳಿದ್ದಾರೆ.

ಅರ್ಜಿದಾರರಾದ ಅಭಿಷೇಕ್ ಶರ್ಮಾ ಅವರು ಕಾನೂನುಗಳ ಗಂಭೀರ ಉಲ್ಲಂಘನೆಯ ಕಾರಣಕ್ಕಾಗಿ ಕ್ರಮ ಕೈಗೊಂಡು ಮತ್ತು ಗೂಗಲ್ ಪೇಗೆ ದಂಡ ವಿಧಿಸಲು ಆರ್‌ಬಿಐಗೆ ನಿರ್ದೇಶನ ನೀಡುವಂತೆ ಕೋರಿದ್ದಾರೆ.

ಗೂಗಲ್ ಇಂಡಿಯಾ ಬಳಕೆದಾರರನ್ನು ಗುರಿಯಾಗಿಟ್ಟುಕೊಂಡು ಮೊಬೈಲ್ ಪಾವತಿ ಸೇವೆಯಾದ 'ತೇಜ್' ಅನ್ನು ಪ್ರಾರಂಭಿಸಿತು. ಬಳಿಕ ನೂತನ 'ಗೂಗಲ್ ಪೇ' ಅಪ್ಲಿಕೇಶನ್‌ಗೆ ಜೋಡಿಸಿತು. 'ಗೂಗಲ್ ಪೇ' ಯುಪಿಐ ವ್ಯವಸ್ಥೆಯಲ್ಲಿ ಪಾವತಿ ಸುಗಮಕ್ಕೆ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ ಆಗಿದೆ. ನಾನಾ ಪಿಎಸ್‌ಪಿ/ಸ್ವಾಧೀನ ಬ್ಯಾಂಕ್​ಗಳೊಂದಿಗೆ ಸಹಭಾಗಿತ್ವ ವಹಿಸುತ್ತಿದೆ ಮನವಿಯಲ್ಲಿ ತಿಳಿಸಿದ್ದಾರೆ.

ಇದಲ್ಲದೆ, 'ಗೂಗಲ್ ಪೇ' ಅನ್ನು ಪ್ರತಿವಾದಿ ಸಂಖ್ಯೆ 2 (ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ) ನಿಯಂತ್ರಿಸುತ್ತದೆ. ಇದು ಪಾವತಿ ಸೇವಾ ಪೂರೈಕೆದಾರರಿಗೆ (ಪಿಎಸ್​ಪಿ) ಬ್ಯಾಂಕ್​ಗಳಾಗಿ ಮತ್ತು ಯುಪಿಐ ನೆಟ್‌ವರ್ಕ್ ಅಡಿಯಲ್ಲಿ ಕಾರ್ಯನಿರ್ವಹಿಸಲು ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳಿಗೆ (ಟಿಪಿಎ) ಅನುಮತಿ ನೀಡುವ ಜವಾಬ್ದಾರಿ ಹೊಂದಿದೆ ಎಂದು ಆರೋಪಿಸಿದ್ದಾರೆ.

ABOUT THE AUTHOR

...view details