ಕರ್ನಾಟಕ

karnataka

ETV Bharat / business

ಗುಡ್​ ನ್ಯೂಸ್​: 14 ಸಾವಿರ ಉದ್ಯೋಗಿಗಳ ನೇಮಕಕ್ಕೆ ಎಸ್​ಬಿಐ ಚಿಂತನೆ

ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿಗೆ ತರಲು ಭಾರತೀಯ ಸ್ಟೇಟ್​ ಬ್ಯಾಂಕ್​ (ಎಸ್​​ಬಿಐ) ಮುಂದಾಗಿದೆ. ಈ ಮೂಲಕ ಸೃಷ್ಟಿಯಾಗುವ ಖಾಲಿ ಹುದ್ದೆಗಳಿಗೆ ಹೊಸದಾಗಿ 14 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಲು ಚಿಂತನೆ ನಡೆಸಿದೆ.

SBI thinking for hiring employees
ಉದ್ಯೋಗಿಗಳ ನೇಮಕಕ್ಕೆ ಎಸ್​ಬಿಐ ಚಿಂತನೆ

By

Published : Sep 8, 2020, 11:57 AM IST

ನವದೆಹಲಿ: ಪ್ರಸಕ್ತ ವರ್ಷದಲ್ಲಿ ಎಸ್​ಬಿಐಯಿಂದ 14 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಸ್ವಯಂ ನಿವೃತ್ತಿ (ವಿಆರ್​ಎಸ್​)ನಿಂದ ಖಾಲಿಯಾಗುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ವಿಆರ್​ಎಸ್​ ಎಂದರೆ ವೆಚ್ಚ ಕಡಿತ (ಕಾಸ್ಟ್ ಕಟ್ಟಿಂಗ್) ಅಲ್ಲವೆಂದು ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ (ಎಸ್​ಬಿಐ) ಹೇಳಿದೆ.

ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿಗೆ ತರಲು ಯೋಚಿಸಲಾಗಿದೆ. ಈ ಮೂಲಕ ಪ್ರತೀ ಶಾಖೆಯಿಂದ 30 ರಿಂದ 190 ಸಿಬ್ಬಂದಿಯಿಂದ ನಿವೃತ್ತಿ ಪಡೆಯುವ ಯೋಚನೆಯಿದೆ. ಇಲ್ಲಿ ವಿಆರ್​ಎಸ್​ ಎಂದರೆ ವೆಚ್ಚ ಕಡಿತ (ಕಾಸ್ಟ್ ಕಟ್ಟಿಂಗ್ ) ಅಲ್ಲ. ಎಸ್​ಬಿಐ ಉದ್ಯೋಗಿ ಸ್ನೇಹಿಯಾಗಿದೆ ಮತ್ತು ಕಾರ್ಯಾಚರಣೆಯನ್ನು ವಿಸ್ತರಿಸುತ್ತಿದೆ. ಈ ವರ್ಷ 14 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಕ ಮಾಡುವ ಯೋಜನೆಯನ್ನು ಬ್ಯಾಂಕ್ ಹೊಂದಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಎಸ್​ಬಿಐ ವಕ್ತಾರರು ತಿಳಿಸಿದ್ದಾರೆ.

ಎಸ್‌ಬಿಐ ಸುಮಾರು 2.50 ಲಕ್ಷ ಉದ್ಯೋಗಿಗಳನ್ನು ಹೊಂದಿದೆ. ನೌಕರರ ಅಗತ್ಯತೆಗಳನ್ನು ಪೂರೈಸುವಲ್ಲಿ ಮತ್ತು ಅವರ ಜೀವನಕ್ಕೆ ಸಹಾಯ ಮಾಡುವಲ್ಲಿ ಮುಂಚೂಣಿಯಲ್ಲಿದೆ. ಈ ಹಿನ್ನೆಲೆಯಲ್ಲಿ, ವೃತ್ತಿಪರ ಬೆಳವಣಿಗೆಯ ಮಿತಿಗಳು, ಚಲನಶೀಲತೆ ಸಮಸ್ಯೆಗಳು, ದೈಹಿಕ ಆರೋಗ್ಯ ಪರಿಸ್ಥಿತಿ ಅಥವಾ ಕೌಟುಂಬಿಕ ಕಾರಣದಿಂದಾಗಿ ತಮ್ಮ ವೃತ್ತಿಯಲ್ಲಿ ಬದಲಾವಣೆ ಮಾಡ ಬಯಸುವ ಉದ್ಯೋಗಿಗಳಿಗೆ ಅನುಕೂಲಕರ ಪರಿಹಾರವನ್ನು ಒದಗಿಸಲು ಯೋಚಿಸಲಾಗಿದೆ ಅವರು ಹೇಳಿದ್ದಾರೆ.

ದೇಶದ ಕೌಶಲ್ಯಯುಕ್ತ ನಿರುದ್ಯೋಗಿ ಯುವಕರಿಗೆ ಅವಕಾಶ ಒದಗಿಸಿಕೊಡುವುದು ನಮ್ಮ ಉದ್ದೇಶವಾಗಿದೆ. ಇದಕ್ಕಾಗಿ ಭಾರತ ಸರ್ಕಾರದ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಯೋಜನೆಯಡಿ ಅಪ್ರೆಂಟಿಸ್‌ಗಳನ್ನು ನೇಮಕ ಮಾಡಿದ ದೇಶದ ಏಕೈಕ ಬ್ಯಾಂಕ್ ನಾವೇ ಆಗಿದ್ದೇವೆ. ಕರಡು ಯೋಜನೆಯ ಪ್ರಕಾರ ಎರಡನೇ ಹಂತದ ವಿಆರ್​ಎಸ್​ -2020 ರಲ್ಲಿ 25 ವರ್ಷ ಸೇವೆಯನ್ನು ಪೂರೈಸಿದ ಮತ್ತು ಸೇವೆಯ ಕಟ್​ ಆಫ್​ ದಿನಾಂಕದಂದು 55 ವರ್ಷವನ್ನು ಪೂರೈಸಿದ ಎಲ್ಲಾ ಖಾಯಂ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅವಕಾಶ ಇರಲಿದೆ ಎಂದು ಎಸ್​ಬಿಐ ಹೇಳಿದೆ.

ಎಸ್​ಬಿಐ ನಿರ್ಧಾರವನ್ನು ಕಾಂಗ್ರೆಸ್​ ಮುಖಂಡ ಪಿ.ಚಿದಂಬರಂ ವಿರೋಧಿಸಿದ್ದು, ಎಸ್​ಬಿಐ ಆರ್ಥಿಕತೆಗೆ ಸಂಬಂಧಪಟ್ಟಂತೆ ಈ ಯೋಜನೆ ಜಾರಿಗೆ ತರಲು ಮುಂದಾಗಿದೆ. ಸಾಮಾನ್ಯ ಸಂದರ್ಭದಲ್ಲಾದರೆ ಇದು ಚರ್ಚಾಸ್ಪದವಾಗುತ್ತದೆ. ಆರ್ಥಿಕತೆ ಕುಸಿದಿರುವ ಮತ್ತು ಉದ್ಯೋಗ ವಿರಳವಾಗಿರುವ ಸಂದರ್ಭದಲ್ಲಿ ಇದು ಕ್ರೂರವಾದ ನಿರ್ಧಾರವಾಗಿದೆ ಎಂದಿದ್ದಾರೆ.

ABOUT THE AUTHOR

...view details