ಕರ್ನಾಟಕ

karnataka

ETV Bharat / business

GSTಯಡಿ ಡೀಸೆಲ್​ ಬಂದ್ರೆ ಲೀಟರ್​​ಗೆ ₹ 68: ಇದ್ರಲ್ಲಿ ಖಳನಾಯಕ ಕೇಂದ್ರವೇ? ರಾಜ್ಯವೇ? - ಇಂಧನ ತೆರಿಗೆ

ಜಿಎಸ್​​ಟಿ ವ್ಯಾಪ್ತಿಗೆ ಡೀಸೆಲ್ ಬಂದಾಗ ಪ್ರತಿ ಲೀಟರ್‌ಗೆ 68 ರೂ. ಆಗಲಿದೆ. ಇದರಿಂದ ಕೇಂದ್ರ ಮತ್ತು ರಾಜ್ಯಗಳಿಗೆ ಆದಾಯ ನಷ್ಟ ಕೇವಲ 1 ಲಕ್ಷ ಕೋಟಿ ರೂ. ಅಥವಾ ಜಿಡಿಪಿಯ ಶೇ 0.4ರಷ್ಟು ಆಗಿರುತ್ತದೆ. ಜಾಗತಿಕ ಕಚ್ಚಾ ತೈಲ ಬೆಲೆ ಬ್ಯಾರೆಲ್​ಗೆ 60 ಡಾಲರ್​ ಮತ್ತು ಕರೆನ್ಸಿ ವಿನಿಮಯ ದರ ಪ್ರತಿ ಡಾಲರ್‌ಗೆ 73 ರೂ. ಅಂದಾಜಿನ ಮೇಲೆ ಅರ್ಥಶಾಸ್ತ್ರಜ್ಞರು ಲೆಕ್ಕಾಚಾರ ಮಾಡಿ ವ್ಯಾಖ್ಯಾನಿಸಿದ್ದಾರೆ.

GST
GST

By

Published : Mar 4, 2021, 12:30 PM IST

Updated : Mar 4, 2021, 12:35 PM IST

ನವದೆಹಲಿ:ಪೆಟ್ರೋಲ್ ಅನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ತಂದರೆ ದೇಶಾದ್ಯಂತ ಅದರ ಬೆಲೆ ಲೀಟರ್‌ಗೆ 75 ರೂ.ಗೆ ಇಳಿಯಬಹುದು. ಆದರೆ, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿದೆ ವಿಶ್ವದಲ್ಲಿ ಭಾರತೀಯ ತೈಲ ಉತ್ಪನ್ನದ ಬೆಲೆ ಅತ್ಯಧಿಕ ಮಟ್ಟದಲ್ಲಿದೆ ಎಂದು ಎಸ್‌ಬಿಐ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

ಏಕರೂಪದ ತೆರಿಗೆ ವ್ಯಾಪ್ತಿಗೆ ಡೀಸೆಲ್ ಬಂದಾಗ ಪ್ರತಿ ಲೀಟರ್‌ಗೆ 68 ರೂ. ಆಗಲಿದೆ. ಇದರಿಂದ ಕೇಂದ್ರ ಮತ್ತು ರಾಜ್ಯಗಳಿಗೆ ಆದಾಯ ನಷ್ಟ ಕೇವಲ 1 ಲಕ್ಷ ಕೋಟಿ ರೂ. ಅಥವಾ ಜಿಡಿಪಿಯ ಶೇ 0.4ರಷ್ಟು ಆಗಿರುತ್ತದೆ. ಜಾಗತಿಕ ಕಚ್ಚಾ ತೈಲ ಬೆಲೆ ಬ್ಯಾರೆಲ್​ಗೆ 60 ಡಾಲರ್​ ಮತ್ತು ಕರೆನ್ಸಿ ವಿನಿಮಯ ದರ ಪ್ರತಿ ಡಾಲರ್‌ಗೆ 73 ರೂ. ಅಂದಾಜಿನ ಮೇಲೆ ಅರ್ಥಶಾಸ್ತ್ರಜ್ಞರು ಲೆಕ್ಕಾಚಾರ ಮಾಡಿ ವ್ಯಾಖ್ಯಾನಿಸಿದ್ದಾರೆ.

ಪ್ರಸ್ತುತ, ಪ್ರತಿ ರಾಜ್ಯವು ಇಂಧನಗಳಿಗೆ ತೆರಿಗೆ ವಿಧಿಸುವ ನಾನಾ ವಿಧಾನ ಹೊಂದಿವೆ. ಆದರೆ, ಕೇಂದ್ರವು ತನ್ನದೇ ಆದ ಕಸ್ಟಮ್ಸ್​ ಮತ್ತು ಸೆಸ್ ಸಂಗ್ರಹಿಸುತ್ತದೆ. ದೇಶದ ಕೆಲವು ಭಾಗಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂ. ಮುಟ್ಟಿದೆ. ಹೆಚ್ಚಿನ ತೆರಿಗೆ ವಿಧಿಸುವ ಬಗ್ಗೆ ಕಳವಳ ವ್ಯಕ್ತಪಡಿಸಲಾಗುತ್ತಿದೆ.

ಸರಕು ಮತ್ತು ಸೇವಾ ತೆರಿಗೆ ಅಡಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ತರುವುದು ಜಿಎಸ್​ಟಿ ಚೌಕಟ್ಟಿನ ಅಪೂರ್ಣ ಕಾರ್ಯಸೂಚಿಯಾಗಿದೆ. ಹೊಸ ಪರೋಕ್ಷ ತೆರಿಗೆ ಚೌಕಟ್ಟಿನಡಿ ಬೆಲೆಗಳನ್ನು ಪಡೆಯಲು ನೆರವಾಗುತ್ತದೆ ಎಂದು ಎಸ್‌ಬಿಐ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಮಾರಾಟ ತೆರಿಗೆ / ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಸ್ವಂತ ತೆರಿಗೆಯ ಆದಾಯದ ಮೂಲವಾಗಿರುವುದರಿಂದ ಕಚ್ಚಾ ತೈಲ ಉತ್ಪನ್ನಗಳನ್ನು ಜಿಎಸ್‌ಟಿ ಅಡಿ ತರಲು ಕೇಂದ್ರ ಮತ್ತು ರಾಜ್ಯಗಳು ಹಿಂದೇಟು ಹಾಕುತ್ತಿವೆ. ಹೀಗಾಗಿ, ಕಚ್ಚಾ ವಸ್ತುವನ್ನು ಜಿಎಸ್‌ಟಿಯ ವ್ಯಾಪ್ತಿಗೆ ತರಲು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿದೆ ಎಂದರು.

ಪ್ರಸ್ತುತ, ರಾಜ್ಯಗಳು ತಮ್ಮ ಅಗತ್ಯಗಳನ್ನು ಆಧರಿಸಿ ಜಾಹೀರಾತು ಮೌಲ್ಯ ತೆರಿಗೆ, ಸೆಸ್, ಹೆಚ್ಚುವರಿ ವ್ಯಾಟ್ / ಹೆಚ್ಚುವರಿ ಶುಲ್ಕ ವಿಧಿಸಲು ಆಯ್ಕೆ ಮಾಡಿಕೊಳ್ಳುತ್ತವೆ. ಕಚ್ಚಾ ಬೆಲೆ, ಸಾರಿಗೆ ಶುಲ್ಕ, ವ್ಯಾಪಾರಿ ಆಯೋಗ ಮತ್ತು ವಿಧಿಸಲಾದ ಫ್ಲಾಟ್ ಅಬಕಾರಿ ಸುಂಕವನ್ನು ಗಣನೆಗೆ ತೆಗೆದುಕೊಂಡ ನಂತರ ಈ ತೆರಿಗೆಗಳನ್ನು ವಿಧಿಸಲಾಗುತ್ತದೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಷೇರುಪೇಟೆಯಲ್ಲಿ ಕರಡಿ ಕುಣಿತ: ಸೆನ್ಸೆಕ್ಸ್​​726 ಅಂಕ ಕುಸಿತ

ಕಚ್ಚಾ ತೈಲ ಬೆಲೆ ಮತ್ತು ಡಾಲರ್ ದರದ ಅಂದಾಜಿನ ಮೇಲೆ, ಡೀಸೆಲ್‌ಗೆ ಸಾರಿಗೆ ಶುಲ್ಕ 7.25 ರೂ. ಮತ್ತು ಪೆಟ್ರೋಲ್‌ಗೆ 3.82 ರೂ., ಡೀಸೆಲ್ ಕಮಿಷನ್ 2.53 ರೂ. ಮತ್ತು ಪೆಟ್ರೋಲ್​ಗೆ 3.67 ರೂ., ಸೆಸ್​ ಪೆಟ್ರೋಲ್‌ಗೆ 30 ರೂ. ಮತ್ತು ಡೀಸೆಲ್‌ಗೆ 20 ರೂ. ಇದ್ದು. ಇದನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮಾನವಾಗಿ ಹಂಚಿಕೆಯಾಗುತ್ತದೆ. ಜಿಎಸ್​ಟಿ ದರವು ಶೇ 28ರಷ್ಟಿದೆ ಎಂದು ಅರ್ಥಶಾಸ್ತ್ರಜ್ಞರು ವಿಶ್ಲೇಷಿಸಿದ್ದಾರೆ.

ಕಚ್ಚಾ ತೈಲ ಬೆಲೆಗಳಲ್ಲಿ 1 ಡಾಲರ್​ ಏರಿಕೆಯಾದೂ ಪೆಟ್ರೋಲ್ ಬೆಲೆಯಲ್ಲಿ ಸುಮಾರು 50 ಪೈಸೆ ಮತ್ತು ಡೀಸೆಲ್ ಬೆಲೆ 1.50 ರೂ.ಯಷ್ಟು ಹೆಚ್ಚಾಗುತ್ತದೆ. ಬೇಸ್​ಲೈನ್ ಚಂಚಲತೆಯು ಒಟ್ಟಾರೆ ಸುಮಾರು 1,500 ಕೋಟಿ ರೂ.ಗೆ ತಗ್ಗುತ್ತದೆ.

ಪ್ರಸ್ತುತ ತೆರಿಗೆ ಆದಾಯದಲ್ಲಿ ಹೆಚ್ಚಿನ ಪಾಲು ಹೊಂದಿರುವ ರಾಜ್ಯಗಳು, ಈ ವ್ಯವಸ್ಥೆ ಜಿಎಸ್‌ಟಿಗೆ ಬದಲಾದರೆ ಅತಿದೊಡ್ಡ ನಷ್ಟ ಅನುಭವಿಸಲಿವೆ. ಈ ಕ್ರಮವು ಗ್ರಾಹಕರಿಗೆ 30 ರೂ.ವರೆಗೆ ಕಡಿಮೆ ಪಾವತಿಗೆ ನೆರವಾಗುತ್ತದೆ ಎಂದಿದೆ.

ಕುತೂಹಲಕಾರಿ ಸಂಗತಿಯೆಂದರೆ, ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 10 ಡಾಲರ್‌ಗಳಷ್ಟು ಕಡಿಮೆಯಾದಾಗ ಕೇಂದ್ರ ಮತ್ತು ರಾಜ್ಯಗಳು ಗ್ರಾಹಕರಿಗೆ ಲಾಭ ರವಾನಿಸದೇ ಪೆಟ್ರೋಲ್ ಬೆಲೆಯನ್ನು ಬೇಸ್‌ಲೈನ್ ಬೆಲೆಯಲ್ಲಿ ಇಟ್ಟುಕೊಂಡರೆ 18,000 ಕೋಟಿ ರೂ.ಗಳಷ್ಟು ಉಳಿತಾಯವಾಗಬಹುದು ಎಂದು ಸೂಚಿಸುತ್ತದೆ. ಕಚ್ಚಾ ದರಗಳು ಒಂದೇ ಮಾಪನದಲ್ಲಿ ಏರಿಕೆಯಾದಾಗ 9,000 ಕೋಟಿ ರೂ.ಯಷ್ಟಿರುತ್ತದೆ.

ತೈಲ ಬೆಲೆ ಸ್ಥಿರೀಕರಣ ನಿಧಿ ಸ್ಥಾಪಿಸುವಂತೆ ನಾವು ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ. ಇದನ್ನು ಗ್ರಾಹಕರಿಗೆ ತೊಂದರೆ ಆಗದಂತೆ ಉತ್ತಮ ಸಮಯದಲ್ಲಿ ಉಳಿಸಿದ ಕ್ರಾಸ್ ಸಬ್ಸಿಡಿ ಫಂಡ್ ಮೂಲಕ ಆದಾಯ ನಷ್ಟ ಸರಿದೂಗಿಸಲು ಕೆಟ್ಟ ಗಳಿಗೆಯಲ್ಲಿ ಬಳಸಬಹುದು ಎಂದು ಹೇಳಿದೆ.

Last Updated : Mar 4, 2021, 12:35 PM IST

ABOUT THE AUTHOR

...view details