ಕರ್ನಾಟಕ

karnataka

ETV Bharat / business

ಬಜೆಟ್​ ಅಧಿವೇಶನ ಮೊದಲ ಚರ್ಚೆ ನಿಗದಿಗಿಂತ 2 ದಿನ ಮುಂಚೆ ಮೊಟಕು: ಕಾರಣವೇನು ಗೊತ್ತೇ? - ಸಂಸತ್ತಿನ ಬಜೆಟ್ ಅಧಿವೇಶನ

ಫೆಬ್ರವರಿ 13ರಂದು ಬಜೆಟ್​ ಅಧಿವೇಶನದ ಒಂದು ಭಾಗ ಕೊನೆಗೊಳಿಸಲು ವಿವಿಧ ಪಕ್ಷಗಳ ನಾಯಕರು ಸರ್ವಾನುಮತದಿಂದ ಲೋಕಸಭೆಯ ವ್ಯವಹಾರ ಸಲಹಾ ಸಮಿತಿಯಲ್ಲಿ ಚರ್ಚಿಸಲಾಯಿತು.

Budget Session
Budget Session

By

Published : Jan 30, 2021, 12:39 PM IST

ನವದೆಹಲಿ:ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ಚರ್ಚೆಯು ಫೆಬ್ರವರಿ 15ರ ಬದಲು 13ಕ್ಕೆ ಕೊನೆಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಫೆಬ್ರವರಿ 13ರಂದು ಬಜೆಟ್​ ಅಧಿವೇಶನದ ಒಂದು ಭಾಗ ಕೊನೆಗೊಳಿಸಲು ವಿವಿಧ ಪಕ್ಷಗಳ ನಾಯಕರು ಸರ್ವಾನುಮತದಿಂದ ಲೋಕಸಭೆಯ ವ್ಯವಹಾರ ಸಲಹಾ ಸಮಿತಿಯಲ್ಲಿ ಚರ್ಚಿಸಲಾಯಿತು.

ಹಿಂದಿನ ವೇಳಾಪಟ್ಟಿ ಪ್ರಕಾರ, ಫೆಬ್ರವರಿ 15ರ ಸೋಮವಾರದ ಸಭೆಯ ಬಳಿಕ ಅಧಿವೇಶನಕ್ಕೆ ಬಿಡುವು ಕೊಡಲು ನಿರ್ಧರಿಸಲಾಗಿತ್ತು. ಈಗ ಫೆ.13ರ ಶನಿವಾರದಂದು ಕೊನೆಗೊಂಡು, ಮಾರ್ಚ್ 8ರಂದು ಮತ್ತೆ ಶುರುವಾಗಲಿದೆ. ಇದರರ್ಥ ಸಂಸತ್ ಕೆಲಸದ ದಿನಗಳ ಸಂಖ್ಯೆ ತಗ್ಗಲಿದೆ. ಬಜೆಟ್ ಅಧಿವೇಶನವು ಏಪ್ರಿಲ್ 8ರಂದು ಕೊನೆಗೊಳ್ಳಲಿದೆ.

ಇದನ್ನೂ ಓದಿ: ಕೇಂದ್ರ ಬಜೆಟ್: ಕೋವಿಡ್​​ನಿಂದ ತತ್ತರಿಸಿದ ವಾಯುಯಾನದ ನಿರೀಕ್ಷೆಗಳು ಈಡೇರಲಿವೆಯೇ?​

ಅಧಿವೇಶನದ ಮೊದಲ ದಿನವಾದ ಶುಕ್ರವಾರ ನಡೆದ ಸಂಸತ್ತಿನ ಜಂಟಿ ಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣ ಮೇಲಿನ ಚರ್ಚೆಗೆ ಲೋಕಸಭೆಯ ವ್ಯವಹಾರ ಸಲಹಾ ಸಮಿತಿಯು 10 ಗಂಟೆಗಳ ಸಮಯ ನಿಗದಿಪಡಿಸಲು ನಿರ್ಧರಿಸಿತು. ಫೆಬ್ರವರಿ 2, 3 ಮತ್ತು 4ರಂದು ಚರ್ಚೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 5ರಂದು ಇದಕ್ಕೆ ಉತ್ತರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ABOUT THE AUTHOR

...view details